ಸುಚಿತ್ರಾ ಸಾವು: ಸಂಘಟನೆಗಳ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork | Published : Sep 25, 2024 12:56 AM

ಸಾರಾಂಶ

ಜಗಳೂರು ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದ ದಲಿತ ಮಹಿಳೆ, ಸಿದ್ದಿಹಳ್ಳಿ ಗ್ರಾಮದ ಆರ್.ಸುಚಿತ್ರಾ ಮೃತಪಟ್ಟಿದ್ದಾರೆ. ತಪ್ಪಿತಸ್ಥ ವೈದ್ಯ-ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು. ಸುಚಿತ್ರಾ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ನಮ್ಮ ಕನ್ನಡನಾಡು ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಆಸ್ಪತ್ರೆ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ಆರಂಭಿಸಲಾಗಿದೆ.

- ದಲಿತ ಸಂಘರ್ಷ ಸಮಿತಿ, ನಮ್ಮ ಕನ್ನಡನಾಡು ಸಮಿತಿ ನೇತೃತ್ವದಲ್ಲಿ ಮನವಿ - - - ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದ ದಲಿತ ಮಹಿಳೆ, ಸಿದ್ದಿಹಳ್ಳಿ ಗ್ರಾಮದ ಆರ್.ಸುಚಿತ್ರಾ ಮೃತಪಟ್ಟಿದ್ದಾರೆ. ತಪ್ಪಿತಸ್ಥ ವೈದ್ಯ-ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕು. ಸುಚಿತ್ರಾ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ನಮ್ಮ ಕನ್ನಡನಾಡು ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳಿಂದ ಆಸ್ಪತ್ರೆ ಆವರಣದಲ್ಲಿ ಅನಿರ್ದಿಷ್ಠಾವಧಿ ಧರಣಿ ಆರಂಭಿಸಲಾಗಿದೆ.

ದಸಂಸ ತಾಲೂಕು ಸಂಚಾಲಕ ಕುಬೇರಪ್ಪ ಮಾತನಾಡಿ, ಸುಚಿತ್ರಾ ಅವರು ಸೆ.15ರಂದು ಹೆರಿಗೆಗೆ ಒಳರೋಗಿಯಾಗಿ ಬಂದಿದ್ದರು. ಆಗ ಹೆರಿಗೆ ಸರಿಯಾಗಿ ಮಾಡಿಸದೇ ರಕ್ತಸ್ರಾವ ಉಂಟಾಗಿದೆ. ಆಗ ದಾವಣಗೆರೆ ಸಾರ್ವಜನಿಕ ಆಸ್ಪತ್ರೆ ಕಳಿಸಿ, ಮತ್ತೊಮ್ಮೆ ಆಪರೇಷನ್ ಮಾಡಿಸಿದರೂ ಸುಚಿತ್ರಾ ಬದುಕುಳಿಯಲಿಲ್ಲ. ಮಗು ಅನಾಥವಾಗುವಂತೆ ಮಾಡಿ, ತಾಯಿ ಸಾವಿಗೆ ಕಾರಣರಾದ ವೈದ್ಯರಾದ ಸಂಜಯ್, ಕಿರಣ್ ಸೇರಿದಂತೆ ಸಿಬ್ಬಂದಿ ಬಸಮ್ಮ ಅವರನ್ನು ಅಮಾನುತುಗೊಳಿಸಬೇಕು. ಮೃತಳ ಕುಟುಂಬಕ್ಕೆ ಪರಿಹಾರ ನೀಡುವ ಮೂಲಕ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿ ಷಣ್ಮುಖಪ್ಪ ಭೇಟಿ ನೀಡಿ ಮನವಿ ಸ್ವೀಕರಿಸಿ, ಪತ್ರವನ್ನು ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾಧಿಕಾರಿಗೆ ಕಳಿಸಲಾಗುವುದು. ಅಲ್ಲದೇ, ಧರಣಿ ವಾಪಸ್‌ ಪಡೆಯುವಂತೆ ಮನವಿ ಮಾಡಿದರು.

ದಸಂಸ ಮುಖಂಡರು, ಮೃತ ಸುಚಿತ್ರಾ ತಂದೆ ತಿಪ್ಪೇಸ್ವಾಮಿ, ಅಂಬೇಡ್ಕರ್ ಸೇನಾ ಸಮಿತಿ ಅಧ್ಯಕ್ಷ ಮಹಾಂತೇಶ್, ರಮೇಶ್, ರವಿ, ಯಲ್ಲಪ್ಪ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - - -24ಜೆಎಲ್.ಆರ್.2: ಸಿದ್ದಿಹಳ್ಳಿ ಆರ್. ಸುಚಿತ್ರಾ ಸಾವಿಗೆ ಕಾರಣರಾದ ವೈದ್ಯರು, ಸಿಬ್ಬಂದಿ ಅಮಾನತಿಗೆ ಆಗ್ರಹಿಸಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು.

Share this article