ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಟ್ಟಣದಲ್ಲಿ ಸಾವಿರಾರು ನಿವೇಶನ ರಹಿತರಿದ್ದು ಇವರಿಗೆ ನಿವೇಶನ ಕೊಡುವ ಉದ್ದೇಶಕ್ಕಾಗಿ ಪುರಸಭೆ ಪಟ್ಟಣಕ್ಕೆ ಹೊಂದಿಕೊಂಡಿರುವ ಹೆಬ್ಬಸಾಲೆ ಗ್ರಾಮದ ಸರ್ವೇ ನಂ ೧೯೯ ಹಾಗೂ ೨೦೦ರಲ್ಲಿ ಸುಮಾರು ೧೪.೫ ಎಕರೆ ಜಮೀನನ್ನು ೨೦೦೫ರಲ್ಲಿ ಖರೀದಿಸಿತ್ತು. ಜಮೀನು ಖರೀದಿಸಿದ ನಂತರ ಜಮೀನು ಪರಭಾರೆ ಮಾಡಿದ ವ್ಯಕ್ತಿಗಳ ಕುಟುಂಬದ ಸದಸ್ಯರು ಪುರಸಭೆ ವಿರುದ್ಧ ಜಮೀನು ಸಂಬಂದ ಪುರಸಭೆ ವಿರುದ್ಧ ದಾವೆ ಹೊಡಿದ್ದರು. ಪ್ರಕರಣ ರಾಜ್ಯ ಉಚ್ಚನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಈ ಮದ್ಯೆ ಪುರಸಭೆ ನಿವೇಶನ ರಹಿತರಿಂದ ೨೦೦೭,೨೦೧೫ ಹಾಗೂ ೨೦೨೨ರಲ್ಲಿ ಮೂರು ಬಾರಿ ಅರ್ಜಿ ಸ್ವೀಕರಿಸಿದ್ದು ಬಹುತೇಕ ಅರ್ಜಿ ಸಲ್ಲಿಕೆ ಮಾಡಿದವರೆ ಮತ್ತೆ ಮತ್ತೆ ಅರ್ಜಿ ಸಲ್ಲಿಸಿದ್ದು ೨೦೨೨ರಲ್ಲಿ ೩೩೧೦ ಅರ್ಜೀಗಳು ನಿವೇಶನಕ್ಕಾಗಿ ಸಲ್ಲಿಕೆಯಾಗಿವೆ. ಸದ್ಯ ನ್ಯಾಯಾಲಯದಲ್ಲಿ ಸುದೀರ್ಘಾವಧಿ ಕಳೆದ ಜಮೀನು ವಿಚಾರ ೨೦೨೫ರ ಆಗಸ್ಟ್ ತಿಂಗಳಿನಲ್ಲಿ ಪುರಸಭೆಯ ಪರವಾಗಿ ತೀರ್ಪು ಬಂದಿದೆ.
ತೀರ್ಪು ಹೊರಬಿದ್ದು ವರ್ಷ ಕಳೆದರು ನಿವೇಶನ ಹಂಚಿಕೆ ಸಂಬಂದ ಯಾವುದೇ ಕ್ರಮಗಳು ಪುರಸಭೆ ಅಧಿಕಾರಿಗಳಿಂದ ನಡೆದಿರಲಿಲ್ಲ. ಆದರೆ ಕಳೆದ ಎರಡು ದಿನಗಳ ಹಿಂದೆ ಶಾಸಕ ಸಿಮೆಂಟ್ ಮಂಜು ಪುರಸಭೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಆಶ್ರಯ ನಿವೇಶನ ಕಡತ ಪರಿಶೀಲಿಸಿದ್ದು ನಿವೇಶನ ಹಂಚಿಕೆ ಸಂಬಂದ ಕಾಲಮಿತಿಯಲ್ಲಿ ಮುಂದಿನಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಸೂಚಿಸಿದ್ದಾರೆ. ಪುರಸಭೆ ಅಧಿಕಾರಿಗಳು ಕಡತವನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿ ಲೇಔಟ್ ಪ್ಲಾನ್ ಸಿದ್ಧಪಡಿಸುವುದು ಹಾಗೂ ಕಂದಾಯ ಇಲಾಖೆ ಸರ್ವೇ ನಡೆಸಿ ನಿವೇಶನಕ್ಕೆ ಕಾದಿರಿಸಿರುವ ಜಮೀನಿನ ಎಲ್ಲೆಯನ್ನು ಗುರುತಿಸುವ ಕೆಲಸವನ್ನು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದು ಕಾಲಮಿತಿಯಲ್ಲಿ ಈ ಕಾರ್ಯ ನಡೆಸಿ ಮುಂದಿನ ಸಭೆಯ ವೇಳೆಗೆ ವರದಿ ಒಪ್ಪಿಸುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ. ಈ ಬೆಳವಣಿಗೆ ಸದ್ಯ ಆಶ್ರಯ ನಿವೇಶನಕ್ಕಾಗಿ ಕಾದುಕುಳಿತಿರುವ ನಿವೇಶನ ರಹಿತರಿಗೆ ಆಶಾದಾಯಕ ಬೆಳವಣಿಗೆಯಾಗಿದ್ದು ಕನಿಷ್ಠ ಮುಂದಿನ ಆರು ತಿಂಗಳ ಒಳಗಾಗಿ ನಿವೇಶನದಾರರಿಗೆ ನಿವೇಶನ ದೊರೆಯುವ ಸಾದ್ಯತೆ ದಟ್ಟವಾಗಿದೆ. ಭಾರೀ ಗೋಲ್ ಮಾಲ್:ನಿವೇಶನ ರಹಿತರಿಂದ ಸತತ ಮೂರು ಬಾರಿ ಪುರಸಭೆ ನಿವೇಶನಕ್ಕಾಗಿ ಅರ್ಜೀ ಆಹ್ವಾನಿಸಿದೆ ಪ್ರತಿಬಾರಿ ಅರ್ಜಿ ಆಹ್ವಾನಿಸಿದ ವೇಳೆ ಒಂದಿಷ್ಟು ಜನರು ವಾಮಮಾರ್ಗದಲ್ಲಿ ನಿವೇಶನ ಪಡೆಯಲು ಮುಂದಾಗಿದ್ದು, ಈ ಬಗ್ಗೆ ಅರ್ಜೀ ಸಲ್ಲಿಕೆಯ ವೇಳೆಯೆ ಅಪಸ್ವರಗಳು ಎದ್ದಿದ್ದವು. ನಿವೇಶನ ಹೊಂದಿದ್ದು ಆರ್ಥೀಕವಾಗಿ ಸಬಲರಾಗಿರುವವರೆ ಕಾನುನು ಬಾಹಿರ ದಾರಿಯಲ್ಲಿ ಎರಡರಿಂದ ಮೂರು ಅರ್ಜಿಗಳನ್ನು ನಿವೇಶನಕ್ಕಾಗಿ ಸಲ್ಲಿಸಿದ್ದಾರೆ ಈ ಬಗ್ಗೆ ಪರಿಶೀಲನೆ ನಡೆಸಿ ನಿವೇಶನ ಹಂಚ ಬೇಕು ಎಂಬ ಕೂಗು ಅರ್ಜಿ ಸಲ್ಲಿಕೆಯ ವೇಳೆಯ ಕೇಳಿ ಬಂದಿತ್ತು. ತಾಲೂಕು ಕ್ರೀಡಾಂಗಣ ಉಳಿವಿಗೆ ಹೋರಾಟ: ಸದ್ಯ ಹಳೇ ಸಂತೆ ಮೈದಾನದ ೨.೨೪ ಎಕರೆ ಭೂಮಿ ಸುದೀರ್ಘ ಕಾನೂನು ಹೋರಾಟದ ನಂತರ ಖಾಸಗಿ ವ್ಯಕ್ತಿಯ ಪಾಲಾಗಿದೆ. ಸದ್ಯ ಈ ಜಮೀನನ್ನು ಪುರಸಭೆ ವಶಕ್ಕೆ ಪಡೆಯಲು ಸುಪ್ರೀಂ ಕೋರ್ಟ್ ಕದತಟ್ಟ ಬೇಕಿದೆ. ಹಿಂದೆ ಪುರಸಬೆ ಅಧಿಕಾರಿಗಳು ಮಾಡಿದ ಎಡವಟ್ಟುಗಳು ಚಿನ್ನದಂತ ಭೂಮಿ ಖಾಸಗಿ ವ್ಯಕ್ತಿಯ ಪಾಲಾಗುತ್ತಿದೆ, ಹೀಗಾದರೆ ಹೇಗೆ ಎಂಬ ಆತಂಕ ಹೊರಹಾಕಿರುವ ಶಾಸಕ ಸಿಮೆಂಟ್ ಮಂಜು ಜಮೀನು ಉಳಿಸುವ ನಿಟ್ಟಿನಲ್ಲಿರುವ ಮಾರ್ಗಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಮುಂದುವರೆದ ಹಂತವಾಗಿ ಉಪವಿಭಾಗಾಧಿಕಾರಿ ಹುಲ್ಲಮನಿತಿಮ್ಮಣ್ಣ ಪುರಸಭೆ ಕಾನೂನು ಸಲಹೆಗಾರರನ್ನು ಕರೆಸಿ ಮಾತನಾಡುವ ಮೂಲಕ ಪ್ರಕರಣಕ್ಕೆ ಹೊಸ ತಿರುವ ನೀಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.ಸದ್ಯ ಜಾತ್ರೆ ನಡೆಸಲು ಜಾಗವಿಲ್ಲ: