ಕೊಡಗು ಗೌಡ ಯುವ ವೇದಿಕೆ ವತಿಯಿಂದ ಸೌಹಾರ್ದ ಸಹಕಾರ ಸಂಘ ರಚನೆ ಮಾಡಲು ತೀರ್ಮಾನಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಗೌಡ ಯುವ ವೇದಿಕೆ ವತಿಯಿಂದ ಸೌಹಾರ್ದ ಸಹಕಾರ ಸಂಘ ರಚನೆ ಮಾಡಲು ತೀರ್ಮಾನಿಸಲಾಗಿದೆ.
ಕೊಡಗು ಗೌಡ ಸಮಾಜದಲ್ಲಿರುವ ಯುವ ವೇದಿಕೆ ಕಚೇರಿ ಸಭಾಂಗಣದಲ್ಲಿ ನಡೆದ ಯುವ ವೇದಿಕೆ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಯುವ ವೇದಿಕೆ ಮುಖಾಂತರ ಸೌಹಾರ್ದ ಸಹಕಾರ ಸಂಘ ರಚನೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ರಚನೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಸಭೆಗೆ ಆಗಮಿಸಿದ್ದ ರಾಜ್ಯ ಸೌಹಾರ್ದ ಸಂಯುಕ್ತ ನಿಯಮಿತದ ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ, ಜಿಲ್ಲಾ ಸಂಯೋಜಕ ಸುರೇಶ್ ಅವರು ಸಹಕಾರ ಸಂಘ ರಚನೆ ಮಾಡುವ ಬಗ್ಗೆ ಮಾಹಿತಿ ಒದಗಿಸಿ, ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸಿದರು.
ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ ಮಾತನಾಡಿ, ಏಪ್ರಿಲ್, ಮೇ ತಿಂಗಳಿನಲ್ಲಿ ಏರ್ಪಡಿಸಿದ್ದ ಕೊಡಗು ಗೌಡ ಯುವ ವೇದಿಕೆ ಕ್ರೀಡಾಕೂಟ ಬಹಳ ಅದ್ದೂರಿಯಾಗಿ ನಡೆದಿದೆ. ಇದೇ ಪ್ರಥಮ ಬಾರಿಗೆ ನಡೆಸಲಾದ ರಿಂಕ್ ಹಾಕಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಜೊತೆಗೆ ಮಿಸ್ಟರ್ ಗೌಡ, ಮಿಸಸ್ ಗೌಡತಿಗೂ ಹಲವು ಪ್ರಶಂಸೆಗಳು ಬಂದಿವೆ ಎಂದರು.
ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಚನ ಸತೀಶ್, ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ, ಸಹಕಾರ್ಯದರ್ಶಿ ಕೆದಂಬಾಡಿ ಕಾಂಚನ, ಖಜಾಂಚಿ ನವೀನ್ ದೇರಳ, ಗೌರವ ಸಲಹೆಗಾರ ಪೈಕೇರ ಮನೋಹರ್, ಕ್ರೀಡಾ ಅಧ್ಯಕ್ಷ ಕುಟ್ಟನ ಪ್ರಶಾಂತ್, ಪರಿಚನ ಸೋನಿಯ, ಕಟ್ಟೆಮನೆ ರೋಶನ್, ಕುಕ್ಕೇರ ಲಕ್ಷ್ಮಣ, ಕಲ್ಲುಮುಟ್ಲು ಅನುದೀಪ್, ದುಗ್ಗಳ ಕಪಿಲ್, ಚೆರಿಯಮನೆ ಪೆಮ್ಮಯ್ಯ, ಪೊಕ್ಕುಳಂಡ್ರ ಮನೋಜ್, ಧನೋಜ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.