ಅದ್ಧೂರಿ ಕನಕದಾಸ ಜಯಂತಿ ಆಚರಣೆಗೆ ನಿರ್ಧಾರ: ತಹಸೀಲ್ದಾರ್‌ ರಾಘವೇಂದ್ರ ರಾವ್

KannadaprabhaNewsNetwork |  
Published : Oct 30, 2025, 02:15 AM IST
ಪೋಟೊ-೨೯ ಎಸ್.ಎಚ್.ಟಿ- ೨ಕೆ-ತಹಸೀಲ್ದಾಯ ಕಾರ್ಯಾಲಯದ ಸಭಾ ಭವನದಲ್ಲಿ ನಡೆದ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ ಮಾತನಾಡಿದರು. | Kannada Prabha

ಸಾರಾಂಶ

ಸಮಾಜದ ಮುಖಂಡರಾದ ಸಂತೋಷ ಕುರಿ ಮಂಜುನಾಥ ಘಂಟಿ ಮಾತನಾಡಿ, ಅಂದು ನಡೆಯುವ ಮೆರವಣಿಗೆಯಲ್ಲಿ ಶಿಕ್ಷಣ ಇಲಾಖೆಯ ಸಹಭಾಗಿತ್ವ ಮುಖ್ಯವಾಗಿದೆ ಎಂದರು.

ಶಿರಹಟ್ಟಿ: ನ. ೮ರಂದು ಸಂತ ಶ್ರೇಷ್ಠ ಕವಿ ಕನಕದಾಸರ ಜಯಂತ್ಯುತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆ ಮಾಡಲಾಗುವುದು. ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಮಗೆ ನೀಡಿದ ಜವಾಬ್ದಾರಿ ಜತೆಗೆ ಕಡ್ಡಾಯವಾಗಿ ಜಯಂತಿ ಮೆರವಣಿಗೆ, ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು.ಬುಧವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಬಾರಿ ನಡೆಯ ಕಾರ್ಯಕ್ರಮದಂತೆ ಅಚ್ಚುಕಟ್ಟಾಗಿ ನಡೆಸಲು ಎಲ್ಲ ಇಲಾಖೆ ಅಧಿಕಾರಿಗಳು ಸಹಕರಿಸಬೇಕು. ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಆಗದ ಹಾಗೆ ಸಮಾಜದ ಹಾಗೂ ಸರ್ವ ಜನಾಂಗದವರು ಸೇರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಎಂದರು.ಸಮಾಜದ ಮುಖಂಡರ ಸಲಹೆ, ಸೂಚನೆಯಂತೆ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದಂತೆ ನ. ೮ರಂದು ನಡೆಯುವ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಬೆಳಗ್ಗೆ ೯ ಗಂಟೆಯಿಂದ ಕನಕದಾಸ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ, ಭಕ್ತ ಕನಕದಾಸ ವೃತ್ತಕ್ಕೆ ಬಂದು ಸೇರಲಿದ್ದು, ಅಲ್ಲಿಯೇ ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದರು.ಮೆರವಣಿಗೆ ಕಾರ್ಯಕ್ರಮದಲ್ಲಿ ತಾಲೂಕಾಡಳಿತ, ಹಾಲುಮತ ಸಮಾಜ ಹಾಗೂ ಸಕಲ ಧರ್ಮದ ಗುರುಹಿರಿಯರು ಸೇರಿ ಅದ್ಧೂರಿಯಾಗಿ ಆಚರಿಸೋಣ. ಕನಕದಾಸರು ಯಾವುದೇ ಒಂದು ಜಾತಿ ಜನಾಂಗಗಳಿಗೆ ಸೀಮಿತವಾಗಿಲ್ಲ. ಅವರು ಮಾನವಕುಲಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಜಯಂತಿಯನ್ನು ಸಮಾಜದ ಎಲ್ಲರೂ ಆಚರಿಸುವ ಮೂಲಕ ಅವರ ತತ್ವ- ಸಿದ್ಧಾಂತಗಳಿಂದ ಪ್ರೇರಣೆ ಪಡೆದುಕೊಳ್ಳಬೇಕಾಗಿದೆ. ಎಲ್ಲರೂ ತಪ್ಪದೇ ಭಾಗವಹಿಸಬೇಕು ಎಂದರು.ಸಮಾಜದ ಮುಖಂಡರಾದ ಸಂತೋಷ ಕುರಿ ಮಂಜುನಾಥ ಘಂಟಿ ಮಾತನಾಡಿ, ಅಂದು ನಡೆಯುವ ಮೆರವಣಿಗೆಯಲ್ಲಿ ಶಿಕ್ಷಣ ಇಲಾಖೆಯ ಸಹಭಾಗಿತ್ವ ಮುಖ್ಯವಾಗಿದ್ದು, ಆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಮಹಾನ್ ದಾರ್ಶನಿಕರ ವೇಷಭೂಷಣಗಳನ್ನು ಹಾಗೂ ಅನೇಕ ಮಹನೀಯರ ಪಾತ್ರಗಳಲ್ಲಿ ಕಾಣಿಸುವಂತೆ ಮಕ್ಕಳನ್ನು ತಯಾರು ಮಾಡಬೇಕು ಎಂದು ಮನವಿ ಮಾಡಿದರು.ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನೇಶ ಪೋಟಿ, ತಾಪಂ ಇಒ ರಾಮಪ್ಪ ದೊಡ್ಡಮನಿ, ಕೃಷಿ ಇಲಾಖೆ ಅಧಿಕಾರಿ ರೇವಣೆಪ್ಪ ಮನಗೂಳಿ, ಖಜಾನೆ ಇಲಾಖೆಯ ಶಿವಪ್ಪ ಹದ್ಲಿ, ಸಮಾಜ ಕಲ್ಯಾಣ ಇಲಾಖೆಯ ಎಂ.ಎಸ್. ಸಂಕನೂರ, ಡಿ.ಕೆ. ಹೊನ್ನಪ್ಪನವರ, ದೇವಪ್ಪ ಬಟ್ಟೂರ, ಆನಂದ ಮಾಳೆಕೊಪ್ಪ, ಹೇಮಂತ ಕೆಂಗೊಂಡ, ಹನುಮೇಶ ಕೊಂಡಿಕೊಪ್ಪ, ಸುಭಾಸ ದೈಗೊಂಡ, ಎಂ.ಕೆ. ಲಮಾಣಿ, ಪರಶುರಾಮ ಡೊಂಕಬಳ್ಳಿ, ಸೋಮನಗೌಡ ಮರಿಗೌಡ್ರ, ಹನುಮಂತ ಗೊಜನೂರ, ರಾಜೀವ ಬಮ್ಮನಕಟ್ಟಿ, ಆನಂದ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ದೇವಪ್ಪ ಪೂಜಾರ ಇತರರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು