ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಿಸಲು ನಿರ್ಧಾರ

KannadaprabhaNewsNetwork |  
Published : Oct 17, 2024, 12:49 AM IST
ರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ರಾಮದುರ್ಗ ಪಟ್ಟಣದಲ್ಲಿ ಈ ಬಾರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಸುಮಾರು 15 ರೂಪಕ, ಸ್ತಬ್ಧ ಚಿತ್ರಗಳನ್ನು ಬಳಸಿಕೊಂಡು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರರ ಕಾರ್ಯಾಲಯದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆ ಜರುಗಿತು. ಈ ವೇಳೆ ಮುಖ್ಯ ವೇದಿಕೆಯನ್ನು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಯಿತು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಪಟ್ಟಣದಲ್ಲಿ ಈ ಬಾರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಸುಮಾರು 15 ರೂಪಕ, ಸ್ತಬ್ಧ ಚಿತ್ರಗಳನ್ನು ಬಳಸಿಕೊಂಡು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಪಟ್ಟಣದ ಮಿನಿ ವಿಧಾನಸೌಧದ ತಹಶೀಲ್ದಾರರ ಕಾರ್ಯಾಲಯದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆ ಜರುಗಿತು. ಈ ವೇಳೆ ಮುಖ್ಯ ವೇದಿಕೆಯನ್ನು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಯಿತು.

ರೂಪಕ ಮತ್ತು ಸ್ತಬ್ದ ಚಿತ್ರಗಳಲ್ಲಿ ಪಾಲ್ಗೊಳ್ಳುವ ಶಾಲಾ ಮಕ್ಕಳಿಗೆ ತೊಂದರೆಯಾಗದಂತೆ ಕೆಲವು ನಿರ್ಣಯಗಳನ್ನು ತೆಗೆದುಕೊಂಡ ತಾಲೂಕು ಆಡಳಿತವು, ಮಕ್ಕಳಿಗೆ ಕುಡಿಯುವ ನೀರು, ಅಲ್ಪೋಪಹಾರ ಲಭಿಸುವಂತೆ ಸೂಚನೆ ನೀಡಿತು. ಮೆರವಣಿಗೆ ವೇಳೆ ಸಂಚಾರ ದಟ್ಟಣೆಯಾಗದಂತೆ ಪೊಲೀಸ್‌ ಇಲಾಖೆ ನೋಡಿಕೊಳ್ಳಲೂ ಸೂಚಿಸಲಾಯಿತು.ಮೆರವಣಿಗೆ ಮಾರ್ಗವನ್ನು ನೇಕಾರ ಪೇಟೆಯಿಂದ ಸಾಗಿದರೆ ಮಕ್ಕಳಿಗೆ ತೊಂದರೆಯಾಗುತ್ತದೆ. ತಾಪಂನಿಂದ ನೇರವಾಗಿ ಮಿನಿ ವಿಧಾನಸೌಧಕ್ಕೆ ತರುವಂತೆ ಕೆಲವರು ಅಭಿಪ್ರಾಯಪಟ್ಟರು. ಆದರೆ ನೇಕಾರ ಪೇಟೆಯ ಹಿರಿಯರು ಮೊದಲಿನಂತೆಯೇ ಮೆರವಣಿಗೆಯು ನೇಕಾರ ಪೇಟೆ ಮೂಲಕವೇ ಮಿನಿ ವಿಧಾನಸೌಧಕ್ಕೆ ಸಾಗಿಸಬೇಕು ಎಂದು ಪಟ್ಟು ಹಿಡಿದರು. ಸ್ತಬ್ದಚಿತ್ರ ಮತ್ತು ರೂಪಕಗಳಲ್ಲಿ ಪಾಲ್ಗೊಳ್ಳುವ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲು ಸಭೆ ಒಪ್ಪಿಗೆ ಸೂಚಿಸಿದರು.ರಾಜ್ಯೋತ್ಸವದ ಮೆರವಣಿಗೆಯಲ್ಲಿ ರೂಪಕ, ಸ್ತಬ್ದಚಿತ್ರಗಳನ್ನು ನಿರ್ಮಿಸಲು ಪೊಲೀಸರು 15 ಟ್ರ್ಯಾಕ್ಟರ್‌ಗಳನ್ನು ಇಂಧನ ಸಮೇತ ಒಂದು ದಿನ ಮುಂಚೆಯೇ ಶಾಲಾ ಮುಖ್ಯಸ್ಥರಿಗೆ ಪೂರೈಸಬೇಕು. ಪ್ರತಿ ಟ್ರ್ಯಾಕ್ಟರ್‌ ಅಲಂಕರಿಸಲು ಮತ್ತು ರೂಪಕಗಳನ್ನು ಸಿದ್ಧಪಡಿಸಲು ತಲಾ ₹2 ಸಾವಿರ ವಂತಿಕೆಯನ್ನು ತಾಲೂಕಾಡಳಿತ ನೀಡಬೇಕು ಎಂದು ಸಭೆ ನಿರ್ಧರಿಸಿತು.ಮೆರವಣಿಗೆ ಸಾಗುವ ಮಾರ್ಗದ ವಿದ್ಯುತ್‌ ಕಂಬಗಳಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕನ್ನಡ ಧ್ವಜ ಮತ್ತು ಅಲಂಕಾರಿಕ ವಸ್ತುಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲಿ ಉತ್ತಮ ಸ್ತಬ್ದಚಿತ್ರ ಮತ್ತು ರೂಪಕಗಳಿಗೆ ತಲಾ ಮೂರು ಬಹುಮಾನಗಳನ್ನು ಪ್ರೆಸ್‌ಕ್ಲಬ್‌ನವರು ನೀಡಲು ಒಪ್ಪಿಗೆ ಪಡೆದುಕೊಂಡರು.ಪುರಸಭೆಯು ಸ್ವಚ್ಛತೆ ಮತ್ತು ನೀರು ಪೂರೈಸಲು, ತೋಟಗಾರಿಕೆ ಹೂಕುಂಡಗಳನ್ನು ಅಳವಡಿಸಿ ಶೃಂಗರಿಸಲು, ಹೆಸ್ಕಾಂನವರು ಲೈಟಿಂಗ್‌ ವ್ಯವಸ್ಥೆ ಮಾಡಲು, ಪೊಲೀಸರು ಸಂಚಾರ ದಟ್ಟಣೆ ನಿರ್ವಹಿಸಲು ಜವಾಬ್ದಾರಿ ವಹಿಸಿಕೊಳ್ಳಲು ಸೂಚಿಸಲಾಯಿತು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ