ಮುಂಡರಗಿ ತಾಲೂಕಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಸರಳ ಆಚರಣೆ ಮುಂಡರಗಿ: ತಾಲೂಕಿನಲ್ಲಿ ಬರಗಾಲ ಪರಿಸ್ಥಿತಿ ಇದ್ದು, ಅ. 28ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರಳವಾಗಿ ಆಚರಿಸಲು ತಹಸೀಲ್ದಾರ್ ಎಂ. ಧನಂಜಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಮಾತನಾಡಿ, ವಿಶ್ವಮಾನ್ಯ ಪಡೆದ ಮಹರ್ಷಿ ವಾಲ್ಮೀಕಿ ವಿಚಾರಧಾರೆಗಳು, ಕೃತಿಗಳು ಸದಾ ಕಾಲ ಮಾರ್ಗದರ್ಶಿಯಾಗಿದ್ದು ಅವರನ್ನು ತಾಲೂಕು ಆಡಳಿತದೊಂದಿಗೆ ವಾಲ್ಮೀಕಿ ಸಮುದಾಯದ ಜತೆಗೆ ಇತರ ಎಲ್ಲ ವರ್ಗದವರು ಒಟ್ಟಾಗಿ ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು, ಎಲ್ಲರ ಸಹಾಯ ಸಹಕಾರ ಅವಶ್ಯ ಎಂದರು. ಸಭೆಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ರಾಮಣ್ಣ ಕೋಳಿ, ಗರುಡಪ್ಪ ಜಂತ್ಲಿ, ಮೈಲಾರಪ್ಪ ಕಲಕೇರಿ, ವಿಜಯಕುಮಾರ ರಾಟಿ, ಗಣೇಶ ಭರಮಕ್ಕನವರ ಸೇರಿದಂತೆ ಅನೇಕರು ತಾಲೂಕಿನಲ್ಲಿ ಬರಗಾಲ ಸ್ಥಿತಿ ಇದೆ, ಹೀಗಾಗಿ ತಹಸೀಲ್ದಾರ್ ಕಚೇರಿಯಲ್ಲಿ ಸಾಂಕೇತಿಕ ಆಚರಣೆ ಜತೆಗೆ ತಾಲೂಕಿನ ಎಲ್ಲ ಸರಕಾರಿ ಅನುದಾನಿತ ಪ್ರೌಢಶಾಲೆ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಪಿಯುಸಿ ಕಲಾ, ವಾಣಿಜ್ಯ, ವಿಜ್ಞಾನ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡುವ ಬಗ್ಗೆ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳಿಗೆ ವಾಲ್ಮೀಕಿ ಅವರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸುವ ಬಗ್ಗೆ ಸಲಹೆ ನೀಡಿದರು. ವಿವಿಧ ಸಮುದಾಯ ಮತ್ತು ಸಮಾಜದವರ ನಿರ್ಧಾರವನ್ನು ಶ್ಲಾಘಿಸಿದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಂ. ಧನಂಜಯ ವಿದ್ಯಾರ್ಥಿಗಳಿಗೆ ಅವಶ್ಯ ಇರುವ ಪಠ್ಯಪುಸ್ತಕ ಮತ್ತು ಧನಸಹಾಯ ಮಾಡುವದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಾಯ ಮಾಡಿದಂತಾಗುತ್ತದೆ. ಇದು ಸ್ವಾಗತಾರ್ಹ ಎಂದರು. ಸಾಮಾಜಿಕ ಕಾರ್ಯಕರ್ತ ಅಡಿವೆಪ್ಪ ಚಲವಾದಿ, ಸುರೇಶ ಕಲ್ಲಕುಟಗರ ಸೇರಿದಂತೆ ಅನೇಕರು ಮಾತನಾಡಿ, ಪ್ರತಿಯೊಬ್ಬ ದಾರ್ಶನಿಕರ ಜಯಂತಿ ಆಚರಣೆಯ ಪೂರ್ವಭಾವಿ ಸಭೆಗೆ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದರು. ಸುರೇಶ ಕೊರ್ಲಗಟ್ಟಿ, ಸುರೇಶ ಮಾಗಡಿ, ಶಿವಾನಂದ ಇಟಗಿ, ಬಸವರಾಜ ನವಲಗುಂದ, ಸುರೇಶ ಹಲವಾಗಲಿ, ಪ್ರಕಾಶ ಹಲವಾಗಲಿ, ಮಂಜುನಾಥ ಮುಧೋಳ, ವೀರೇಶ ಜಲ್ಲಿಗೇರಿ, ದ್ಯಾಮಣ್ಣವರ, ಅಶ್ವಿನಿ ಗೌಡರ, ಮೇಘರಾಜ ನಾಯ್ಕರ, ವೆಂಕಟೇಶ ಬಂಡೆಣ್ಣವರ, ಕನಕಪ್ಪ ಕಾತರಕಿ, ಲಕ್ಷ್ಮಣ ಬೂದಿಹಾಳ, ದೃವಕುಮಾರ ಹೂಗಾರ, ರಾಜಾಭಾಕ್ಷಿ ಬೆಟಗೇರಿ ಹಾಗೂ ಬಿಇಒ ಜಿ.ಎಸ್. ಅಣ್ಣಿಗೇರಿ, ಎಸ್.ಎಸ್. ಬಿಚ್ಚಾಲಿ, ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ, ರಂಜಿತಾ ತಳಗೇರಿ, ಸಾಸ್ವಿಹಳ್ಳಿ, ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್, ಸಿಂಗಟಾಲೂರು ಏತ ನೀರಾವರಿ ಎಇಇ, ತೋಟಗಾರಿಕೆ ಬಸವರಾಜ ಬೆನಹಾಳ, ಪ್ರಾ.ಎಸ್.ಆರ್.ಚಿಗರಿ, ಪೂಜಾರ, ಪಿಎಸ್‌ಐ ಸುಮಾ ಗೋರಬಾಳ, ಡಾ.ರಾಜೇಶ ಇದ್ದರು.