ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಮಾತನಾಡಿ, ಕಳೆದ 20 ವರ್ಷಗಳಿಂದ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬಸವ ಜನ್ಮಸ್ಥಳ ಬಸವನ ಬಾಗೇವಾಡಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಆಗಬೇಕೆಂದು ಹೋರಾಟಗಳನ್ನು ನಡೆಸುತ್ತಾ ಬಂದಿತ್ತು. ಶುಕ್ರವಾರ ರಾಜ್ಯ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಘೋಷಣೆ ಮಾಡಿರುವುದು ಬಸವ ನಾಡಿನ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸಿದ ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರ ಶ್ರಮ ಬಹಳಷ್ಟಿದೆ. ಸಚಿವರಿಗೆ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಎಂ.ಜಿ.ಆದಿಕೊಂಡ ಮಾತನಾಡಿ, ಕಾಯಕ, ದಾಸೋಹ,ಸಮಾನತೆ ಸಂದೇಶ ಸಾರಿದ ಬಸವೇಶ್ವರ ಜನಿಸಿದ ಬಸವನಬಾಗೇವಾಡಿ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚನೆಗೆ ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು ಬಸವ ಭಕ್ತರಿಗೆ ಹರ್ಷ ಉಂಟುಮಾಡಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಲೋಕನಾಥ ಅಗರವಾಲ, ಬಸಣ್ಣ ದೇಸಾಯಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ, ಶೇಖರ ಗೊಳಸಂಗಿ, ಸಂಗಮೇಶ ಓಲೇಕಾರ, ಸಂಗಣ್ಣ ಕಲ್ಲೂರ, ಅಶೋಕ ಹಾರಿವಾಳ, ಶ್ರೀಕಾಂತ ಕೊಟ್ರಶೆಟ್ಟಿ, ಸುನಿಲಗೌಡ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ಮನ್ನಾನ ಶಾಬಾದಿ, ನಿಂಗಪ್ಪ ಅವಟಿ, ಸಂಜು ಬಿರಾದಾರ ಸುರೇಶಗೌಡ ಪಾಟೀಲ, ಪ್ರಶಾಂತ ಮುಂಜಾನೆ, ಅರವಿಂದ ಸಾಲವಾಡಗಿ, ಮಾಂತೇಶ ಸಾಸಾಬಾಳ ,ಶೇಖರಗೌಡ ಪಾಟೀಲ, ಪರಶುರಾಮ ದಿಂಡವಾರ, ಪ್ರವೀಣ ಪೂಜಾರಿ, ಅನಿಲ ದುಂಬಾಳಿ, ಶಾಂತು ಡಂಬಳ, ಶಿವಾನಂದ ಮಂಗಾನವರ ಇದ್ದರು.