ಗಳಿಸಿದ ಆದಾಯದಲ್ಲಿ ಸ್ವಲ್ಪ ಭಾಗ ಸಮಾಜದ ಅಭಿವೃದ್ಧಿಗೆ ಮೀಸಲಿಡಿ: ಯೋಗೇಶ ಶುಕ್ಲಾ

KannadaprabhaNewsNetwork |  
Published : Oct 05, 2026, 02:45 AM IST
ಲೋಕಾಪುರ | Kannada Prabha

ಸಾರಾಂಶ

ಲೋಕಾಪುರ ಸಮೀಪದ ಪೆಟ್ಲೂರ ಸರ್ಕಾರಿ ಶಾಲೆಗೆ ಜೆಕೆ ಸಿಮೆಂಟ್ ವತಿಯಿಂದ ಸ್ಕೂಲ್‌ ಬ್ಯಾಗ್ ಹಾಗೂ ಟ್ರ‍್ಯಾಕ್ಸೂಟ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ದೊರೆತರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಜೆಕೆ ಸಿಮೆಂಟ್‌ ಕಾರ್ಖಾನೆಯ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಯೋಗೇಶ ಶುಕ್ಲಾ ಹೇಳಿದರು.

ಸಮೀಪದ ಪೆಟ್ಲೂರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೧ ರಿಂದ ೧೦ನೇ ತರಗತಿಯ ೩೦೦ ವಿದ್ಯಾರ್ಥಿಗಳಿಗೆ ಜೆಕೆ ಸಿಮೆಂಟ್‌ ಕಾರ್ಖಾನೆಯ ಸಂಸ್ಥಾಪಕರಾದ ದಿ.ಯಧುಪತಿ ಸಿಂಗಾನಿಯಾ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ಸ್ಕೂಲ್‌ ಬ್ಯಾಗ್‌ ಹಾಗೂ ಒಂದು ಜತೆ ಟ್ರ‍್ಯಾಕ್ಸೂಟ್‌ ವಿತರಿಸಿ ಮಾತನಾಡಿ, ಕಾರ್ಖಾನೆಯ ಸಂಸ್ಥಾಪಕರಾದ ದಿ.ಯಧುಪತಿ ಸಿಂಗಾನಿಯಾ ಅವರ ಕನಸಾದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಮಹದಾಶಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಲು ಇಂತಹ ಮಹತ್ಕಾರ್ಯವನ್ನು ಮಾಡಲಾಗುತ್ತಿದೆ. ಜೆಕೆ ಸಿಮೆಂಟ್‌ ಕಾರ್ಖಾನೆಯಿಂದ ಹಲವು ಸಮಾಜಿಕಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಗಳಿಸಿದ ಒಟ್ಟು ಆದಾಯದಲ್ಲಿ ಸಮಾಜದ ಅಭಿವೃದ್ಧಿಗೆ ಸ್ವಲ್ಪ ಹಣ ಮೀಸಲಿಡಲಾಗಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ವಿ.ಎ. ವರ್ಚಗಲ್ ಮಾತನಾಡಿ, ಸಮಾಜ ಪ್ರಗತಿ ಹೊಂದಲು ಸಮಾಜದಲ್ಲಿನ ಕೌಶಲ್ಯಭರಿತ ಮಾನವ ಸಂಪನ್ಮೂಲ ಕಾರಣ. ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ಆ ಸಮಾಜದ ಶಿಕ್ಷಣ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಇಂದು ಸರ್ಕಾರ ಹಾಗೂ ಹಲವಾರು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೇರವಾಗಿ ಶಿಕ್ಷಣ ನೀಡಿದರೆ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಇಂದು ಜೆ.ಕೆ. ಸಿಮೆಂಟ್‌ ಕಾರ್ಖಾನೆಯ ಸಂಸ್ಥಾಪಕ ದಿ.ಯಧುಪತಿ ಸಿಂಗಾನಿಯಾ ಅವರ ಹುಟ್ಟುಹಬ್ಬದ ನಿಮಿತ್ತ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಸ್ಕೂಲ್‌ ಬ್ಯಾಗ್‌ ಹಾಗೂ ಟ್ರ‍್ಯಾಕ್ಸೂಟ್‌ ನೀಡುವುದರೊಂದಿಗೆ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬಹು ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ಜೆ.ಕೆ. ಸಿಮೆಂಟ್ ಸಿ.ಎಸ್.ಆರ್. ವಿಭಾಗದ ಬಸವರಾಜ, ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರ ಅಂಗಡಿ, ಸದಸ್ಯ ಗಂಗಾರಾಮ ಪುಜಾರಿ ಮತ್ತು ಶಿಕ್ಷಕವೃಂದ , ಮಕ್ಕಳು ಇದ್ದರು. ಶಿಕ್ಷಕ ಎಂ.ಎಸ್. ಭಜಂತ್ರಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್‌ಐಆರ್‌ ಆಕ್ಷೇಪಣೆಯಲ್ಲಿ ನಕಲಿ ಮರಣ ಪ್ರಮಾಣಪತ್ರ ಸಲ್ಲಿಕೆ
ಯುವಕರಲ್ಲಿ ನಾಯಕತ್ವ ಬೆಳೆಸಲು ಯುವ ಸಂಘ ಯೋಜನೆ