ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್‌ಗೆ ಮನವಿ ಸಲ್ಲಿಸಿ ಆರೋಗ್ಯ ಇಲಾಖೆಗೆ ಹೊರಗುತ್ತಿಗೆ ನೌಕರರನ್ನು ಸರಬರಾಜು ಮಾಡಲು ಟೆಂಡರ್ ಪಡೆದಿರುವ ಮೈಸೂರಿನ ಪನ್ನಗ ಎಂಟರ್ ಪ್ರೈಸಸ್ ಖಾಸಗಿ ಸಂಸ್ಥೆಯು ಕಳೆದ ಐದಾರು ತಿಂಗಳುಗಳಿಂದ ನೌಕರರಿಗೆ ವೇತನ ಪಾವತಿ ಮಾಡದೆ ವಂಚಿಸುತ್ತಿದೆ ಎಂದು ದೂರಿದರು.
ಈ ಬಗ್ಗೆ ವಿಚಾರಿಸಿದರೆ ಮುಂದುವರಿದ ಆದೇಶ ನೀಡಿಲ್ಲ ಎಂಬ ಸಬೂಬು ಹೇಳುತ್ತಿದೆ. ವೇತನದ ಮೇಲೆ ಅವಲಂಬಿತವಾಗಿರುವ ನೌಕರರ ಕುಟುಂಬಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿ ನೌಕರರಿಗೆ ನ್ಯಾಯ ದೊರಕಿಸಿಕೊಡಬೇಕು. ಸದರಿ ಖಾಸಗಿ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿ, ಬಾಕಿ ಇರುವ ವೇತನವನ್ನು ತುರ್ತಾಗಿ ಪಾವತಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.ಸಂಘದ ರಾಜ್ಯಾಧ್ಯಕ್ಷ ಅಕ್ಷಯ್ ಡಿ. ಎನ್. ಗೌಡ, ನೌಕರರು ಇದ್ದರು.