ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ತಾಪಂ ಅವರಣದಲ್ಲಿ ಜಿಪಂ, ಗ್ರಾಮೋದ್ಯಮ ಮತ್ತು ಸಣ್ಣ ಉದ್ಯಮಗಳು(ಗ್ರಾಮೀಣ ಕೈಗಾರಿಕೆ) ಹಾಗೂ ಸುನೋದಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ಗಳ ಸಂಯುಕ್ತಾಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ, ಕುಶಲ ಕರ್ಮಿಗಳಿಗೆ ವಿವಿಧ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಗುಡಿ ಕೈಗಾರಿಕೆಗಳಿಗೆ, ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದೆ, ಅವುಗಳು ಆಯಾಯಾ ಇಲಾಖೆಗಳು ಅನುಷ್ಠಾನಗೊಳಿಸುವ ಕೆಲಸ ಮಾಡುತ್ತಿವೆ. ಇದರ ಮಧ್ಯದಲ್ಲಿ ಕೆಲ ಮಧ್ಯವರ್ತಿಗಳು ಅರ್ಹ ಫಲಾನುಭವಿಗಳನ್ನು ಬಿಟ್ಟು ತಮಗೆ ಬೇಕಾದವರಿಗೆ ಇಂತಹ ಯೋಜನೆಗಳನ್ನು ತಲುಪಿಸುವ ಮುಖೇನ ಜನಪರ ಯೋಜನೆಗಳ ಹೆಸರಿಗೆ ಕಳಂಕ ಉಂಟು ಮಾಡುತ್ತಾರೆ. ಆ ಬಗ್ಗೆ ನಿಗಾ ವಹಿಸುವಂತೆ ಕಿವಿ ಮಾತು ಹೇಳಿದರು.ಇಂದು ಕುಶಲ ಕರ್ಮಿಗಳು, ನಿರುದ್ಯೋಗ ಮಹಿಳೆಯರು, ಸೇರಿದಂತೆ ಒಟ್ಟು ೧೯೩ ಮಂದಿಗೆ ಹಾಗೂ ಹೊಲಿಗೆ ತರಬೇತಿ ಪೂರ್ಣಗೊಳಿಸಿದ ೫೫ ಮಂದಿಗೆ ಯಂತ್ರೋಪಕರಣಗಳನ್ನು ವಿತರಿಸಿದ್ದು, ಇವುಗಳನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಕಾರ್ಯಕ್ರಮದಲ್ಲಿ ಹಾಜರಿದ್ದ ಪಲಾನುಭವಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಂಗನಾಥ್, ತಾಪಂ ಇಒ ಸಂದೀಪ್, ನಗರಸಭಾ ಸದಸ್ಯ ಸತೀಶ್ ಬಾಬು, ಫರೀದ್, ಸಿದ್ದರಾಮಯ್ಯ ಇತರರು ಹಾಜರಿದ್ದರು.