ಅರ್ಹರಿಗೆ ಪಂಚ ಗ್ಯಾರಂಟಿ ಯೋಜನೆ ತಲುಪಿಸಿ: ಶೇಖಪ್ಪ ಮಣಕಟ್ಟಿ

KannadaprabhaNewsNetwork |  
Published : Jun 16, 2025, 02:30 AM IST
ಪೊಟೋ ಪೈಲ್ ನೇಮ್ ೧೪ಎಸ್‌ಜಿವಿ೩     ತಾಲೂಕು ಪಂಚಾಯತಿ ಸಭಾಭವನದಲ್ಲಿ  ಪೂರ್ವಬಾವಿ ಸಭೆಯಲ್ಲಿ  ಆಯೋಜಿಸಲಾದ ರಾಜ್ಯ ಸರ್ಕಾರ ಘೋಷಣೆ ಮಾಡಿದ ಪಂಚ ಗ್ಯಾರಂಟಿ ಯೋಜನೆಯು ಪ್ರತಿಶತ ನೂರರಷ್ಟು ಸಮರ್ಪಕ, ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನ ತರುವ ಉದ್ದೇಶದಿಂದ ಆಹಾರ ನಿರೀಕ್ಷಕರು, ಹಾಗೂ ,ಶಿಶು ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೋಂಡ ದೃಶ್ಯ | Kannada Prabha

ಸಾರಾಂಶ

ಅನ್ನಭಾಗ್ಯ ಯೋಜನೆಯಡಿ ಪೂರೈಸುವ ಆಹಾರ ಧಾನ್ಯ ಹಲವು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ದೂರುಗಳಿವೆ. ಅವುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ ತಿಳಿಸಿದರು.

ಶಿಗ್ಗಾಂವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನಾ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳು ಹಲವು ತಾಂತ್ರಿಕ ಕಾರಣಗಳಿಂದ ಪ್ರಯೋಜನ ಪಡೆಯದೇ ಉಳಿದವರನ್ನು ಗುರುತಿಸಿ ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶೇಖಪ್ಪ ಮಣಕಟ್ಟಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಪಂಚ ಗ್ಯಾರಂಟಿ ಯೋಜನೆಯ ಸಮರ್ಪಕ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ಗೃಹಜೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮಿ ಹಾಗೂ ಯುವನಿಧಿಗಳ ಫಲಾನುಭವಿಗಳ ಯಶೋಗಾಥೆ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ಪೂರೈಸುವ ಆಹಾರ ಧಾನ್ಯ ಹಲವು ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ದೂರುಗಳಿವೆ. ಅವುಗಳನ್ನು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಜೂ. ೨೧ರಂದು ಕ್ಷೇತ್ರದ ಶಾಸಕ ಯಾಸೀರಖಾನ್ ಪಠಾಣ ಅವರು ಪಂಚ ಗ್ಯಾರಂಟಿ ಯೋಜನೆಗಳ ಗುರಿ ಹಾಗೂ ಪ್ರಗತಿ ಸಾಧನೆ ಬಗ್ಗೆ ಸಭೆ ನಡೆಸುವರು. ಅಗತ್ಯ ಮಾಹಿತಿ ಒದಗಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು.

ತಾಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಸೋಳಂಕಿ, ಸಿಡಿಪಿಒ ಗಣೇಶಗೌಡ, ಆಹಾರ ನಿರೀಕ್ಷಕ ಶಿವಾನಂದ ಅಜಂಪೂರ, ನಾಮನಿರ್ದೇಶಿತ ಸದಸ್ಯರಾದ ಚಂದ್ರಶೇಖರ ಮಾನೋಜಿ, ವಿಠಲ ನಡಹಟ್ಟಿ, ಅತ್ತಾಉಲ್ಲಾಖಾನ್ ಖಾಜೇಖಾನವರ, ಸುರೇಶ ಕರಿಯಪ್ಪ ಹರಿಜನ, ಪರಶುರಾಮ್ ಕಾಳೆ, ಬಸವರಾಜ ಹಾದಿಮನಿ ಪ್ರಕಾಶ, ಯುನಿಸ್‌ ಅಹ್ಮದ್ ಖಾನ ಕಲ್ಯಾಣ, ಡಿ.ಆರ್. ಬೊಮ್ಮನಹಳ್ಳಿ, ಅಶೋಕ ಶಿಗ್ಗಾವಿ ಸುರೇಶ ಚಿನ್ನಪ್ಪನವರ, ಕುಬೇರ ಬಳಲಕೊಪ್ಪ ಶಂಕ್ರಪ್ಪ ಗಂಗಣ್ಣವರ, ಷಣ್ಮುಖ ಉಳ್ಳಾಗಡ್ಡಿ ಇದ್ದರು. ಸಹಾಯಕ ನಿರ್ದೇಶಕ ಪ್ರಕಾಶ ಔಂಧಕರ ಸ್ವಾಗತಿಸಿ, ವಂದಿಸಿದರು.6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕಿನ ಮಹಾರಾಜಪೇಟೆ ಬಳಿ ಇರುವ ಜವಾಹರ ನವೋದಯ ವಿದ್ಯಾಲಯದಲ್ಲಿ 2026- 27ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಆನ್‌ಲೈನ್ ಆರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಜು. 29ರೊಳಗಾಗಿ ಆನ್‌ಲೈನ್ https://cbseitms.rcil.gov.nvs ಅಥವಾ https://navodaya.gov.nvs ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರವೇಶ ಪರೀಕ್ಷೆ ಡಿ. 13ರಂದು ಜರುಗಲಿದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ