ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Mar 17, 2024, 01:46 AM IST
೧೫ಕೆಎಲ್‌ಆರ್-೧೪ಅರಣ್ಯ ಇಲಾಖೆ ಅಧಿಕಾರಿಗಳು ಜನರಿಗೆ ತೊಂದರೆ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಬೊಮ್ಮಸಂದ್ರ ಹೋಬಳಿ ಕೊಂಡು ತಿಮ್ಮೇನಹಳ್ಳಿ ಸರ್ವೆ ನಂ.೭೦ ರಲ್ಲಿ ಖರಾಬು ಗೋಮಾಳ ೨೬೪ ಎಕರೆ ಜಮೀನಿನಲ್ಲಿ ಓಬಲೇಶ್ವರ ಬಂಡೆ ಸಹ ಇರುತ್ತದೆ ಇದರಲ್ಲಿ ಸುಮಾರು ೨೦೦ ವರ್ಷದಿಂದ ಈ ಪ್ರದೇಶದ ೫೦ ಹಳ್ಳಿಗಳ ಜಾತ್ಯತೀತವಾಗಿ ಕಲ್ಲುಕಟಿಗ ವೃತ್ತಿಯಲ್ಲಿದ್ದಾರೆ

ಕನ್ನಡಪ್ರಭ ವಾರ್ತೆ ಮುಳಬಾಗಿಲು

ತಾಲೂಕಿನ ಓಬಲೇಶ್ವರ ಬೆಟ್ಟದ ಕಂದಾಯ ಜಮೀನಿನಲ್ಲಿ ಸುಮಾರು ೫೦ ಹಳ್ಳಿಗಳ ಭೋವಿ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದ ಜನರು ಬಂಡೆ ಒಡೆಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಇದಕ್ಕೆ ತಡೆಯೊಡ್ಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ. ನೀಲಕಂಠೇಗೌಡ ಒತ್ತಾಯ ಮಾಡಿದರು.

ನಗರದ ತಹಸೀಲ್ದಾರ್ ಕಚೇರಿ ಮುಂಭಾಗ ಓಬಲೇಶ್ವರ ಕಲ್ಲು, ಜೆಲ್ಲಿ ಮತ್ತು ಬಂಡೆ ಒಡೆಯುವವರ ವಿವಿಧೋದ್ದೇಶ ಸಹಕಾರ ಸಂಘದಿಂದ ಅರಣ್ಯ ಇಲಾಖೆ ವಿರುದ್ಧ ಅನಿರ್ದಿಷ್ಟ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ವಂಶಪಾರಂಪರ್ಯ ವೃತ್ತಿ

ಬೊಮ್ಮಸಂದ್ರ ಹೋಬಳಿ ಕೊಂಡು ತಿಮ್ಮೇನಹಳ್ಳಿ ಸರ್ವೆ ನಂ.೭೦ ರಲ್ಲಿ ಖರಾಬು ಗೋಮಾಳ ೨೬೪ ಎಕರೆ ಜಮೀನಿನಲ್ಲಿ ಓಬಲೇಶ್ವರ ಬಂಡೆ ಸಹ ಇರುತ್ತದೆ ಇದರಲ್ಲಿ ಸುಮಾರು ೨೦೦ ವರ್ಷದಿಂದ ಈ ಪ್ರದೇಶದ ೫೦ ಹಳ್ಳಿಗಳ ಜಾತ್ಯತೀತವಾಗಿ ಬಂಡೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ, ಇದಕ್ಕೆ ತಡೆಯೊಡ್ಡುವುದು ಸರಿಯಲ್ಲ ಎಂದರು.ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಪ್ರತಿಭಟನೆಕಾರರು ಆರ್‌ಎಫ್‌ಒ ವಿರುದ್ಧ ನೀಡಿರುವ ದೂರಿನ ಮನವಿ ಪತ್ರ ಮೇಲಾಧಿಕಾರಿಗಳಿಗೆ ಕಳಿಸಲಾಗುವುದು ಎಂದು ತಹಸೀಲ್ದಾರ್ ಟಿ. ರೇಖಾ ತಿಳಿಸಿದರು. ಡಿವೈಎಸ್ಪಿ ನಂದಕುಮಾರ್ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರಗೌಡ, ರೈತ ಮುಖಂಡ ಗೋಪಾಲ್, ಗುಜ್ಜನಹಳ್ಳಿ ಮಂಜುನಾಥ್, ತಾ.ಪಂ ಮಾಜಿ ಸದಸ್ಯ ಸಿ.ವಿ. ಗೋಪಾಲ್, ಕಾಂಗ್ರೆಸ್ ಕಾರ್ಯದರ್ಶಿ ಮಂಡಿಕಲ್ ಮಂಜುನಾಥ್, ವಕೀಲರಾದ ಜಯಪ್ಪ, ಅಂಬ್ಲಿಕಲ್ ಶಿವು, ಗಂಗಾಧರ್, ಮುಖಂಡರಾದ ವೆಂಕಟಪತಿ, ಸಂಗೊಳ್ಳಿ ವೆಂಕಟೇಶ್, ವೆಂಕಟರಮಣಪ್ಪ, ಸಿದ್ದನಹಳ್ಳಿ ರಾಮಾಂಜಿ, ವಾಸುದೇವ್, ರವಿ, ಮುನಿರಾಜು, ಶಂಕರಪ್ಪ, ಆದಿಲಕ್ಷ್ಮಮ್ಮ, ಜಯಮ್ಮ, ಕುಮಾರಿ, ಈರಮ್ಮ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!