ಲಕ್ಷ್ಮೇಶ್ವರ: ಪಟ್ಟಣದ ಯುನಿಕ್ ಕಾಟನ್ ಮಿಲ್ಲಿನ ಮಾಲಿಕ ಬಸವರಾಜ ಹುಡೇದ ಎಂಬಾತ ರೈತರಿಂದ ಬಿಟಿ ಹತ್ತಿ ಖರೀದಿಸಿ ಹಣ ನೀಡದೆ ಸತಾಯಿಸುತ್ತಿರುವುದರಿಂದ ರೋಸಿ ಹೋದ ರೈತರು ಮಂಗಳವಾರ ಗ್ರೇಡ್ -2 ತಹಸೀಲ್ದಾರ್ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪಿಎಸ್ಐ ಈರಣ್ಣ ರಿತ್ತಿ ಬಸವರಾಜ ಅವರೊಂದಿಗೆ ಮಾತನಾಡಿದ ಬಳಿಕ ₹3.11 ಲಕ್ಷ ಹಣ ನೀಡಿದ್ದಾರೆ. ಇನ್ನುಳಿದ ₹ 2.36 ಲಕ್ಷ ಹಣ ನೀಡುವುದಾಗಿ ಹೇಳಿ ಇದುವರೆಗೂ ನೀಡಿದೆ ಸತಾಯಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ.
ಬಸವರಾಜ ಹುಡೇದ ಅವರು ನಮ್ಮಂತೆ ಹಲವಾರು ರೈತರಿಂದ ಹತ್ತಿ ಖರೀದಿಸಿ ಅವರಿಗೂ ಹಣ ನೀಡದೆ ಮೋಸ ಮಾಡಿದ್ದಾರೆ. ಆದ್ದರಿಂದ ಬಸವರಾಜ ಅವರಿಂದ ನಮಗೆ ಬರಬೇಕಾದ ಹಣ ಕೊಡಿಸಬೇಕು ಹಾಗೂ ರೈತರಿಗೆ ವಂಚನೆ ಮಾಡುತ್ತಿರುವ ಇಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ವೇಳೆ ಮಂಜುನಾಥ ಅಮಾಸಿ ಮಾತನಾಡಿ, ರೈತರಿಗೆ ಅನ್ಯಾಯ ಮಾಡಿರುವ ಬಸವರಾಜ ಅವರೊಂದಿಗೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಈ ವೇಳೆ ಕುಂದಗೋಳ ತಾಲೂಕಿ ರೈತ ಸೊಮಪ್ಪ ಸರಾವರಿ, ಹನುಮಂತಪ್ಪ ದಿವಾನದ ಹಾಗೂ ಕೆಂಚಪ್ಪ ಕುಂದಗೋಳ, ಹನಮಂತಗೌಡ ಪಾಟೀಲ ಇದ್ದರು.