)
ಕನ್ನಡಪ್ರಭ ವಾರ್ತೆ ಯಲಹಂಕ
ತಾಲೂಕು ಒಕ್ಕಲಿಗರ ಸಂಘ ಯಲಹಂಕದ ವತಿಯಿಂದ ಜೂ.27ರಂದು ಆಯೋಜಿಸಿದ್ದ ಕೆಂಪೇಗೌಡರ 517ನೇ ಜಯಂತಿ ಹಿನ್ನೆಲೆಯಲ್ಲಿ, ಅದಕ್ಕೆ ಸಹಕಾರ ನೀಡಿದ ಮುಖಂಡರನ್ನು ಅಭಿನಂದಿಸಲು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕುರಿತು ಒತ್ತಾಯಿಸಲಾಯಿತು.
ಈ ವೇಳೆ ಯಲಹಂಕ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ, ಮಾಜಿ ಶಾಸಕ ವಿ.ಕೃಷ್ಣಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಬಗ್ಗೆ ಅವರು ಒಕ್ಕಲಿಗರೇ ಅಲ್ಲ ಎಂದು ಲಘುವಾಗಿ ಮಾತನಾಡುವ ಮೂಲಕ ಶಾಸಕ ವಿಶ್ವನಾಥ್ ರಾಜ್ಯದ ಬಹು ಸಂಖ್ಯಾತ ಒಕ್ಕಲಿಗ ಸಮುದಾಯವನ್ನು ಅಪಮಾನಿಸಿದ್ದಾರೆ, ಇದು ಅಕ್ಷಮ್ಯ, ಈ ಕುರಿತು ಅವರು ಒಕ್ಕಲಿಗ ಸಮುದಾಯದ ಬಹಿರಂಗ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಒಕ್ಕಲಿಗ ಸಮುದಾಯದ ಜನತೆ ರಾಜ್ಯವ್ಯಾಪಿ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ ಮಾತನಾಡಿ, ಮಾಜಿ ಸಿಎಂ ಡಿ.ವಿ.ಸದಾನಂದಗೌಡರ ಬಗ್ಗೆ ಲಘುವಾಗಿ ಮಾತನಾಡುವ ಮೂಲಕ ಶಾಸಕ ವಿಶ್ವನಾಥ್ ಮಾಡಿರುವ ಅಪಮಾನ ಕೇವಲ ಸದಾನಂದಗೌಡರಿಗೆ ಮಾಡಿರುವ ಅಪಮಾನವಲ್ಲ ಅದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಾಡಿರುವ ಅಪಮಾನ, ರಾಜ್ಯದಲ್ಲಿ ಎಲ್ಲಾ ಸಮುದಾಯಗಳು ತಮ್ಮ ಮಿತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಲು ಸಂಘಗಳನ್ನು ರಚಿಸುವುದು ಸಹಜ ಪ್ರಕ್ರಿಯೆ. ಆದರೆ ಯಲಹಂಕ ಶಾಸಕರು ಯಲಹಂಕ ತಾಲೂಕು ಒಕ್ಕಲಿಗ ಸಂಘದ ಯಾವೊಂದು ಮನವಿಯನ್ನು ಈಡೇರಿಸಿಲ್ಲ, ಸಂಘಕ್ಕಾಗಿ ಜಾಗ ನೀಡಬೇಕೆಂದು ಕಳೆದ ಹಲವು ವರ್ಷಗಳ ಹಿಂದೆಯೇ ಮನವಿ ಪತ್ರ ಸಲ್ಲಿಸಿದ್ದೇವೆ, ಆದರೆ ಶಾಸಕರು ಯಾವ ಮನವಿ ಪತ್ರವನ್ನು ಸಲ್ಲಿಸಿಲ್ಲ ಎಂದು ಹೇಳುತ್ತಿರುವುದು ವಿಷಾದಕರ ಸಂಗತಿ. ಈ ಕುರಿತು ಶಾಸಕರು ಯಾವುದೇ ದೇವಾಲಯ ಅಥವಾ ಆದಿಚುಂಚನಗಿರಿ ಮಠದಲ್ಲಿ ಪ್ರಮಾಣ ಮಾಡಲಿ ಎಂದರು.