ಕೊಡಗಿನ ಸಮಸ್ಯೆ ಪರಿಹಾರಕ್ಕೆ ಕೇಂದ್ರಕ್ಕೆ ಬೇಡಿಕೆ: ರಾಕೇಶ್ ದೇವಯ್ಯ

KannadaprabhaNewsNetwork |  
Published : Oct 27, 2024, 02:38 AM IST
 ಬಿಜೆಪಿ  | Kannada Prabha

ಸಾರಾಂಶ

ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಒಡೆಯರ್‌ ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ವಿರಾಜಪೇಟೆ ತಾಲೂಕು ಬಿಜೆಪಿ ಮಂಡಲ ವಕ್ತಾರ ಚೆಪ್ಪುಡೀರ ರಾಕೇಶ್‌ ದೇವಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಮತ್ತು ರಾಜ್ಯ ಮಂತ್ರಿಗಳನ್ನು ಸಂಪರ್ಕಿಸಿ ಸೂಕ್ತ ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ ಎಂದು ವಿರಾಜಪೇಟೆ ತಾಲೂಕು ಬಿಜೆಪಿ ಮಂಡಲ ವಕ್ತಾರ ಚೆಪ್ಪುಡೀರ ರಾಕೇಶ್ ದೇವಯ್ಯ ಮಾಹಿತಿ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಕಳೆದು ಈ ಐದು ತಿಂಗಳ ಅವಧಿಯಲ್ಲಿ ಕೊಡಗು ಕ್ಷೇತ್ರಾದ್ಯಾಂತ ಪ್ರವಾಸ ಕೈಗೊಂಡ ಸಂಸದರು, ಇಲ್ಲಿನ ಬೆಳೆಗಾರರ ಸಮಸ್ಯೆ, ಆನೆ ಮಾನವ ಸಂಘರ್ಷ, ವನ್ಯ ಪ್ರಾಣಿಗಳ ಉಪಟಳಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ ಎಂದರು.

ಬಿಜೆಪಿಯ ಬೂತ್ ಮಟ್ಟಗಳಿಗೆ ಭೇಟಿ ನೀಡಿದ ಅವರು, ಕಾರ್ಯಕರ್ತರೊಂದಿಗೆ ಸ್ನೇಹ ಸಮ್ಮಿಲನ ನಡೆಸಿ ಇಲ್ಲಿನ ಸಮಸ್ಯೆಗಳನ್ನ ಆಲಿಸಿದ್ದಾರೆ. ಗ್ರಾಮೀಣ ಭಾಗದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವ ವಿಶೇಷ ಕಾಳಜಿ ಹೊಂದಿದ್ದಾರೆ. ಬಡವರು, ದಲಿತರ ಸಮಸ್ಯೆಗಳನ್ನ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನ ನೀಡಿದ್ದಾರೆ. ಸಂಸದರು ಮೈಸೂರು ಮತ್ತು ಕೊಡಗು ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿಯನ್ನು ನಿಭಾಯಿಸುವವರಾಗಿದ್ದು, ಹೆಚ್ಚಿನ ಒತ್ತಡಗಳಿರುತ್ತದೆ. ಹಾಗಾಗಿ ಒಂದೊಂದು ಕ್ಷೇತ್ರವನ್ನು ವಿಶೇಷವಾಗಿ ಪರಿಗಣಿಸುತ್ತ ತಮ್ಮ ರಾಜಕೀಯ ಸೇವೆಯನ್ನ ಮುಂದುವರಿಸುತ್ತಿದ್ದಾರೆ. ಅಲ್ಲದೇ ಕೊಡಗಗಿನ ವಿರಾಜಪೇಟೆ ಮತ್ತು ಮಡಿಕೇರಿ ಕ್ಷೇತ್ರದ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿದ್ದಾರೆ. ಈ ಬಗ್ಗೆ ಕ್ಷೇತ್ರದ ಜನತೆಗೆ ಮತ್ತು ಕಾರ್ಯಕರ್ತರಿಗೆ ಯಾವುದೇ ಸಂದೇಹ ಬೇಡ ಎಂದು ಭರವಸೆ ನೀಡಿದರು.

ರಾಜಕೀಯವಾಗಿ ಕಾಲೆಳೆಯುವ ತಂತ್ರಗಾರಿಕೆಯ ಮುಂದುವರಿದ ಭಾಗವಾಗಿ ಸಂಸದರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ದುರುದ್ದೇಶದ ಸಂದೇಶಗಳನ್ನು ಹರಿಯಬಿಡುವ ಮೂಲಕ ಸಂಸದರ ವಿರುದ್ಧ ಜನರಲ್ಲಿ ಬಿನ್ನಭಿಪ್ರಾಯ ಮೂಡಿಸಲು ಪ್ರಯತ್ನಿಸಿದ್ದಾರೆ. ಈ ವಿಚಾರಗಳು ಸತ್ಯಕ್ಕೆ ದೂರವಾಗಿದೆ ಎಂದರು.

ಬಿಜೆಪಿ ಪಕ್ಷ ಸೋಲಿನ ಹೊಡೆತದಿಂದ ಚೇತರಿಸಿಕೊಂಡಿಲ್ಲ ಎಂಬ ಆರೋಪಗಳನ್ನ ವಿರೋಧ ಪಕ್ಷಗಳು ಹರಡುತ್ತಿದೆ. ಈ ವಿಚಾರಕ್ಕೆ ಯಾವುದೇ ತಿರುಳಿಲ್ಲ. ಬಿಜೆಪಿ ತನ್ನ ಕ್ಷೇತ್ರದಲ್ಲಿ ಅಸ್ಮಿತೆಯನ್ನು ಉಳಿಸಿಕೊಂಡಿದೆ. ವಿಧಾನಸಭೆ ಚುನಾವಣೆಯ ನಂತರ ನಡೆದ ಲೋಕಸಭಾ ಕ್ಷೇತ್ರವನ್ನು ಕೊಡಗಿನಲ್ಲಿ ಹೆಚ್ಚು ಮತಗಳ ನೀಡುವ ಮೂಲಕ ಬಿಜೆಪಿ ಸಂಸದರ ಆಯ್ಕೆ ನಡೆದಿದೆ, ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯತೆಯನ್ನ ಮೆರೆದಿದೆ. ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ 13 ಸದಸ್ಯರಲ್ಲಿ 12 ಸದಸ್ಯರು ಗೆಲ್ಲುವ ಮೂಲಕ ಬಿಜೆಪಿ ಮತ್ತೆ ತನ್ನ ಜೀವಂತಿಕೆಯ ಸಂಚಾರಕ್ಕೆ ಮುನ್ನಡೆ ಹಾಡಿದೆ ಎಂದು ಹೇಳಿದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ