ಅತಿವೃಷ್ಟಿಯಿಂದ ಹಾಳಾದ‌ ಮುಂಗಾರು ಹಂಗಾಮಿನ ಬೆಳೆಗಳಿಗೆ ಪರಿಹಾರಕ್ಕೆ ಆಗ್ರಹ

KannadaprabhaNewsNetwork |  
Published : Aug 20, 2025, 02:00 AM IST
ಪೊಟೋ-ಪಟ್ಟಣದ ತಹಸೀಲ್ದಾರ ಅವರಿಗೆ ವಿವಿಧ ರೈತ ಸಂಘಟನೆಗಳು ಸೇರಿ ಮುಂಗಾರು ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಲಕ್ಷ್ಮೇಶ್ವರತಾಲೂಕಿನಲ್ಲಿ ಕಳೆದ 15-20 ದಿನಗಳಿಂದ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವುದರಿಂದ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಈರುಳ್ಳಿ, ಬಿಟಿ ಹತ್ತಿ, ಬೊಳ್ಳೊಳ್ಳಿ, ಮೆಣಸಿನಕಾಯಿ ಗಿಡಗಳು, ಎಳ್ಳು, ಗೋವಿನ ಜೋಳ ಮುಂತಾದ ಬೆಳೆಗಳು ಹಾಳಾಗಿ ಹೋಗುತ್ತಿದ್ದು ಸರ್ಕಾರ ಕೂಡಲೆ ಬೆಳೆ ವಿಮೆ ಹಾಗೂ ಅತಿವೃಷ್ಟಿಯ ಪರಿಹಾರ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಲಕ್ಷ್ಮೇಶ್ವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಕಳೆದ 15-20 ದಿನಗಳಿಂದ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವುದರಿಂದ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹೆಸರು, ಈರುಳ್ಳಿ, ಬಿಟಿ ಹತ್ತಿ, ಬೊಳ್ಳೊಳ್ಳಿ, ಮೆಣಸಿನಕಾಯಿ ಗಿಡಗಳು, ಎಳ್ಳು, ಗೋವಿನ ಜೋಳ ಮುಂತಾದ ಬೆಳೆಗಳು ಹಾಳಾಗಿ ಹೋಗುತ್ತಿದ್ದು ಸರ್ಕಾರ ಕೂಡಲೆ ಬೆಳೆ ವಿಮೆ ಹಾಗೂ ಅತಿವೃಷ್ಟಿಯ ಪರಿಹಾರ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಲಕ್ಷ್ಮೇಶ್ವರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನಪ್ಪ ಷಣ್ಮುಖಿ ಆಗ್ರಹಿಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮಂಗಳವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಿಂದ ಪಾದಯಾತ್ರೆಯ ಮೂಲಕ ತಹಸೀಲ್ದಾರ್ ಕಚೇರಿಗೆ ಹೋಗಿ ತಹಸೀಲ್ದಾರ್ ಧನಂಜಯ ಎಂ. ಅವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ರೈತರು ಅತಿವೃಷ್ಟಿಯಿಂದ ತಮ್ಮ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ‌. ರೈತರು ಇಂತಹ ಸ್ಥಿತಿಯಲ್ಲಿ ಜೀವನ ಸಾಗಿಸುವುದು ಕಷ್ಟದಾಯಕವಾಗಿದೆ. ಆದ್ದರಿಂದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಅತಿವೃಷ್ಟಿಯಿಂದ ಹಾಳಾದ ಮಳೆಗೆ ವಿಮಾ ಕಂಪನಿಗಳು ಮಧ್ಯಂತರ ಪರಿಹಾರ ನೀಡಲು ವಿಮಾ‌ ಕಂಪನಿಗಳು ಹಿಂದೇಟು ಹಾಕುತ್ತಾರೆ. ಬೆಳೆ ವಿಮೆ ಕಟ್ಟಿಸಿಕೊಳ್ಳುವ ಕಂಪನಿಗಳು ಪರಿಹಾರ ನೀಡಲು ಸರ್ಕಾರ ಕೂಡಲೇ ಪರಿಹಾರ ಕೊಡುವಂತೆ‌ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಮಾಡಳ್ಳಿ ಗ್ರಾಮದ ಕರ್ನಾಟಕ ರಾಜ್ಯ ಹಸಿರು ಸೇನೆಯ ಅಧ್ಯಕ್ಷ ಸುರೇಶ ಸಿಂದಗಿ ಮಾತನಾಡಿ, ತಾಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಕಪ್ಪ ಹಾಗೂ ಕೆಂಪು ಮಣ್ಣಿನ ಬೆಳೆದ ಎಲ್ಲ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ ಹಾಳಾಗಿ ಹೋಗುತ್ತಿವೆ. ಹೆಸರು, ಈರುಳ್ಳಿ, ಬೊಳ್ಳೊಳ್ಳಿ, ಬಿಟಿ ಹತ್ತಿ, ಮೆಣಸಿನಕಾಯಿ ಗಿಡಗಳು ಹಾಗೂ ಗೋವಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಕೊಳೆತು ಹೋಗಿವೆ. ಆದ್ದರಿಂದ ರಾಜ್ಯ ಸರ್ಕಾರ ಕಷ್ಟದಲ್ಲಿರುವ ರೈತರ ಕುಟುಂಬಗಳ ಆಸರೆಗೆ ನಿಲ್ಲಬೇಕು. ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರು ರೈತರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ರೈತ ಸಂಘದ ನಶಗರಾಜ ಕಳ್ಳಿಹಾಳ ಮಾತನಾಡಿ, ಕೃಷಿ, ತೋಟಗಾರಿಕೆ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿ ಹೋಗಿವೆ. ಸರ್ಕಾರ ಕೂಡಲೆ ರೈತರಿಗೆ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದರು. ಟಾಕಪ್ಪ ಸಾತಪೂತೆ ಮಾತನಾಡಿ, ಕಳೆದ 1 ತಿಂಗಳಿಂದ ಸುರಿಯುತ್ತಿರುವ‌ ಮಳೆಗೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳು ಕೊಳೆತು ಹೋಗುತ್ತಿವೆ. ರೈತರಿಗೆ ಅದು‌ ಮಾಡ್ತಿನಿ ಇದು ಮಾಡ್ತಿನಿ ಎನ್ನುವ ರಾಜಕಾರಣಿಗಳು ಈಗ ರೈತರು ಸಂಕಷ್ಟದಲ್ಲಿ ಇದ್ದಾಗ ಅವರ ನೆರವಿಗೆ ಬರುತ್ತಿಲ್ಲ. ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರು ಇಂತಹ ಸ್ಥಿತಿಯಲ್ಲಿ ಜೀವನ ನಿರ್ವಹಣೆ ಮಾಡುವುದು ಸಾಧ್ಯವಿಲ್ಲವಾಗಿದೆ ಎಂದು ಅವರು ಹೇಳಿದರು.

ಯೂರಿಯಾ ಗೊಬ್ಬರ ಸಮರ್ಪಕವಾಗಿ ದೊರೆಯದೆ ರೈತರು ಬೆಳೆ ಕಳೆದುಕೊಳ್ಳುಲು ಹಂತದಲ್ಲಿದ್ದಾರೆ. ಹೀಗಾಗಿ ರೈತರ‌ಸ್ಥಿತಿ ಶೋಚನೀಯವಾಗಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ರೈತರಿಗೆ ಸರ್ಕಾರದಿಂದ ಬರುವ ಸಹಾಯ ನೀಡಬೇಕು ಎಂದು ಹೇಳಿದರು.

ಈ ವೇಳೆ ಶಿವಾನಂದ ಲಿಂಗಶೆಟ್ಟಿ, ಸಂಜೀವ ಹುಡೇದ, ಶಿವಪುತ್ರಪ್ಪ ತಾರಿಕೊಪ್ಪ, ಅನಂದ ಅಮರಶೆಟ್ಟರ, ಮಹಾದೇವಪ್ಪ ಕುಂದಗೋಳ, ಶಂಕ್ರಣ್ಣ ಬ್ಯಾಡಗಿ, ಬಸಪ್ಪ ಧರೆಣ್ಣವರ, ಹೊಳಲಪ್ಪ ಹಾವನೂರ, ಫಕ್ಕೀರಪ್ಪ ಹಾವನೂರ, ಗುರುರಾಜ ಬಡಿಗೇರ, ಬಸವರಾಜ ಗಡೇದ, ಸೇರಿದಂತೆ ಅನೇಕ ರೈತರು ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ