ಬ್ಯಾಡಗಿ: ಬ್ಯಾಡಗಿ-ರಾಣಿಬೆನ್ನೂರು ಮಾರ್ಗದಲ್ಲಿ ಸಿಡಿ ಮತ್ತು ರಾಜಕಾಲುವೆ ನಿರ್ಮಿಸದಿರುವ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಖಂಡಿಸಿ ತಾಲೂಕಿನ ಕದರಮಂಡಲಗಿ ಗ್ರಾಮಸ್ಥರು ಸುಮಾರು ನಾಲ್ಕೈದು ತಾಸುಗಳ ಕಾಲ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಶಾಸಕರ ಭರವಸೆಯಿಂದ ಪ್ರತಿಭಟನೆ ವಾಪಸ್: ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ಗ್ರಾಮದ ಮುಖಂಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಗ್ರಾಮ ರಸ್ತೆ ಸೇರಿದಂತೆ ಐದಾರು ರಸ್ತೆ ಕಾಮಗಾರಿಗಳ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸೇರಿದಂತೆ ಲೋಕೋಪಯೋಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ, ಎರಡ್ಮೂರು ತಿಂಗಳಲ್ಲಿ ಮಂಜೂರಾಗಲಿವೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಭಕ್ತರು ಆಂಜನೇಯ ಕ್ಷೇತ್ರಕ್ಕೆ ಬಂದು ಹೋಗಲಿದ್ದು, ಇಲ್ಲಿನ ರಸ್ತೆ ಕಾಮಗಾರಿಗೆ ವಿಶೇಷ ಒತ್ತು ನೀಡುವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಸ್ಸು ಪಡೆದರು. ಈ ಸಂದರ್ಭದಲ್ಲಿ ಗ್ರಾ.ಪಂ. ಸದಸ್ಯರಾದ ಕಾಂತೇಶ ಕರಲಿಂಗಣ್ಣನವರ, ಈರಣ್ಣ ಬಡಿಗೇರ, ಶ್ರೀಶೈಲ ಸಣ್ಣಪ್ಪನವರ, ಪ್ರದೀಪ ನಂದಿಕೇಶ್ವರಮಠ, ನಾಗರಾಜ ಹೊಂಬರಡಿ, ಹನುಮಂತಪ್ಪ ಬುಡಪನಹಳ್ಳಿ, ಮೌನೇಶ ಬಡಿಗೇರ ಇದ್ದರು.ಭಕ್ತರಿಗೂ ಪ್ರತಿಭಟನೆ ಬಿಸಿ: ವಿಜಯದಶಮಿ ಶನಿವಾರದಂದು ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ್ದರು, ಆದರೆ ಬ್ಯಾಡಗಿ ಮಾರ್ಗವಾಗಿ ಆಗಮಿಸುವ ಭಕ್ತರಿಗೆ ದೇವಸ್ಥಾನದಿಂದ ಅರ್ಧ ಕೀ.ಮೀ.ದೂರದಿಂದ ಪಾದಯಾತ್ರೆ ಮೂಲಕ ನಡೆದು ದರ್ಶನ ಪಡೆಯುವಂತಾಯಿತು, ಅನಿವಾರ್ಯವಾಗಿ ವಾಹನಗಳು ರಾಮನಹಳ್ಳಿ ಕ್ರಾಸ್ ಮಾರ್ಗವಾಗಿ ಸುತ್ತುವರೆದು ಓಡಾಡಬೇಕಾಯಿತು, ರಸ್ತೆಯಲ್ಲಿ ಚಕ್ಕಡಿ, ಎತ್ತುಗಳನ್ನು ಕಟ್ಟಿಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ ಎಲ್ಲ ಬೈಕ್, ಕಾರುಇತ್ಯಾದಿ ವಾಹನಗಳನ್ನು ಕೆಲಕಾಲರಸ್ತೆ ಬಳಿ ನಿಲ್ಲಿಸಿ ದೇವರಿಗೆ ನಡೆದು ಸಾಗಿದರು.