ಮಹಿಳೆಯರೊಂದಿಗೆ ಅಸಭ್ಯ ಹಾಗೂ ಆಶ್ಲೀಲವಾಗಿ ವರ್ತಿಸಿದ ಡಿಐಜಿ ರಾಮಚಂದ್ರರಾವ್ ಅವರನ್ನು ಅಮಾನತಿನ ಬದಲಾಗಿ ಸೇವೆಯಿಂದಲೇ ವಜಾ ಮಾಡುವಂತೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಬ್ಯಾಡಗಿ: ಮಹಿಳೆಯರೊಂದಿಗೆ ಅಸಭ್ಯ ಹಾಗೂ ಆಶ್ಲೀಲವಾಗಿ ವರ್ತಿಸಿದ ಡಿಐಜಿ ರಾಮಚಂದ್ರರಾವ್ ಅವರನ್ನು ಅಮಾನತಿನ ಬದಲಾಗಿ ಸೇವೆಯಿಂದಲೇ ವಜಾ ಮಾಡುವಂತೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಮಹಿಳಾ ಮೋರ್ಚಾ ತಾಲೂಕಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ, ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ರಕ್ಷಣೆ ನೀಡಬೇಕಾದ ಪೊಲೀಸರೆ ಭಕ್ಷಕರಾಗುತ್ತಿದ್ದು ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಡಿಐಜಿ ಅವರನ್ನು ಅಮಾನತಿನ ಬದಲಾಗಿ ಸೇವೆಯಿಂದಲೇ ವಜಾ ಮಾಡುವಂತೆ ಆಗ್ರಹಿಸಿದರು.ಸಾಕ್ಷಿ ಇದ್ದರೂ ಪ್ರೊಟೆಕ್ಟ್: ಪ್ರಧಾನ ಕಾರ‍್ಯದರ್ಶಿ ಕಲಾವತಿ ಬಡಿಗೇರ ಮಾತನಾಡಿ, ಡಿಐಜಿ ರಾಮಚಂದ್ರರಾವ್ ಅವರು ತಮ್ಮ ಕಚೇರಿಯಲ್ಲಿಯೇ ಮಹಿಳಾ ಪೇದೆ ಹಾಗೂ ಇನ್ನಿತರರೊಂದಿಗೆ ಕರ್ತವ್ಯದ ವೇಳೆಯಲ್ಲಿಯೆ ಅಸಭ್ಯ ಹಾಗೂ ಅಶ್ಲೀಲವಾಗಿ ವರ್ತಿಸಿದ ವಿಡಿಯೋ ದೇಶಾದ್ಯಂತ ವೈರಲ್ ಆಗಿದೆ, ಇಷ್ಟೆಲ್ಲ ಸಾಕ್ಷಿಗಳು ಕಣ್ಣ ಮುಂದೆಯೇ ಇದ್ದರೂ ಸರಕಾರ ಅವರನ್ನು ಕೇವಲ ಸೇವೆಯಿಂದ ಅಮಾನತು ಮಾಡಿ ಕೈತೊಳೆದುಕೊಂಡಿದೆ, ಮತ್ತೆ ಅವರು ಕೆಲವೇ ತಿಂಗಳಲ್ಲಿ ಸೇವೆಗೆ ಹಾಜರಾಗಲು ಅವಕಾಶವನ್ನು ಸರ್ಕಾರವೇ ಕಲ್ಪಿಸಿದೆ ಇದು ಖಂಡನೀಯ ಎಂದರು.ಕಠಿಣ ಕ್ರಮ ಕೈಗೊಳ್ಳಿ:ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ‍್ಯಕರ್ಶಿ ವಿದ್ಯಾ ಶೆಟ್ಟಿ ಮಾತನಾಡಿ, ಮಹಿಳೆಯ ರಕ್ಷಣೆ ಬಗ್ಗೆ ಫುಂಕಾನುಪುಂಕವಾಗಿ ಮಾತನಾಡುವ ಕಾಂಗ್ರೆಸ್ ನಾಯಕರು ರಾಮಚಂದ್ರರಾವ್ ಅವರಂತಹ ಅಧಿಕಾರಿಗಳಿಗೆ ಸೊಪ್ಪು ಹಾಕುವ ಕೆಲಸ ಮಾಡದೇ ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಿ, ಪ್ರತಿ ಪೊಲೀಸ್ ಇಲಾಖೆ ಕಚೇರಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಇಂತಹ ಅಧಿಕಾರಿಗಳಿಂದ ಮಹಿಳಾ ಪೊಲೀಸರು ಹಾಗೂ ಸಾರ್ವಜನಿಕರ ರಕ್ಷಣೆ ಮಾಡಲು ಮುಂದಾಗಲಿ ಎಂದರು. ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಪುರಸಭೆ ಮಾಜಿ ಸದಸ್ಯೆ ಗಾಯತ್ರಾ ರಾಯ್ಕರ ಬಸಮ್ಮ ಹೆಡಿಯಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.