ವಿದ್ಯುತ್ ಮಗ್ಗಗಳಿಗೆ ಉಚಿತ ವಿದ್ಯುತ್‌ ನೀಡಲು ಆಗ್ರಹ

KannadaprabhaNewsNetwork |  
Published : Oct 09, 2023, 12:45 AM IST
ರಾಜ್ಯದಲ್ಲಿನ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಾಜ್ಯದಲ್ಲಿನ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರಾಜ್ಯನೇಕಾರ ಸೇವಾ ಸಂಘ ಗದಗ-ಬೆಟಗೇರಿ ಘಟಕದಿಂದ ಇಲ್ಲಿಯ ಹೆಸ್ಕಾಂ ಶಾಖೆ ನಂ.೩ರ ಸಹಾಯಕ ಎಂಜಿನಿಯರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ಹೆಸ್ಕಾಂ ಸಹಾಯಕ ಎಂಜಿನಿಯರ್‌ಗೆ ರಾಜ್ಯ ನೇಕಾರ ಸೇವಾ ಸಂಘದಿಂದ ಮನವಿಕನ್ನಡಪ್ರಭ ವಾರ್ತೆ ಗದಗ

ರಾಜ್ಯದಲ್ಲಿನ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ರಾಜ್ಯನೇಕಾರ ಸೇವಾ ಸಂಘ ಗದಗ-ಬೆಟಗೇರಿ ಘಟಕದಿಂದ ಇಲ್ಲಿಯ ಹೆಸ್ಕಾಂ ಶಾಖೆ ನಂ.೩ರ ಸಹಾಯಕ ಎಂಜಿನಿಯರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯಾದ್ಯಂತ ನೇಕಾರ ಮತ್ತು ನೇಕಾರಿಕೆ ಆರ್ಥಿಕ ಮುಗ್ಗಟ್ಟಿನಿಂದ ಮಾರುಕಟ್ಟೆಯ ಅಸ್ಥಿರತೆಯಿಂದ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡದ ಕಾರಣ ಸರ್ಕಾರದ ಸಮರ್ಪಕವಾದ ಯೋಜನೆಗಳು ಕಟ್ಟ ಕಡೆಯ ನೇಕಾರರಿಗೆ ತಲುಪದೇ ವಂಚಿತರಾಗಿದ್ದಾರೆ. ಮಗ್ಗ ಮತ್ತು ಮಗ್ಗ ಪೂರ್ವ ಚಟುವಟಿಕೆಯಲ್ಲಿ ತೊಡಗಿರುವ ಲಕ್ಷಾಂತರ ಜನ ನೇಕಾರರಿಗೆ ಕಾರ್ಮಿಕ ಸೌಲಭ್ಯಗಳ ಅವಶ್ಯಕತೆ ಇದ್ದು, ಈಗಾಗಲೇ ಘೋಷಣೆಯಾಗಿರುವ ಉಚಿತ ವಿದ್ಯುತ್ ಶೀಘ್ರವಾಗಿ ಜಾರಿ ಮಾಡಬೇಕು. ಅಲ್ಲದೇ ಸಾಲದ ಹೊರೆಯಿಂದ ಸಾಕಷ್ಟು ಜನ ನೇಕಾರರ ಉದ್ಯಮವು ಸಂಕಷ್ಟದಲ್ಲಿದೆ. ಪ್ರತಿದಿನ ನೇಕಾರಿಕೆಯಲ್ಲಿರುವ ನಾವುಗಳು ೧೦ರಿಂದ ೧೨ ಗಂಟೆಗಳ ಕಾಲ ಕಾರ್ಯನಿರ್ವಹಿಸಿದರೂ, ಆರ್ಥಿಕವಾಗಿ ಸಬಲರಾಗದ ಸ್ಥಿತಿ ಇದೆ. ವಿದ್ಯುತ್ ದರ ಏರಿಕೆ ಮತ್ತು ಕಚ್ಚಾ, ನೂಲು, ರೇಷ್ಮೆ ದರ ಏರಿಕೆಯಾಗಿರುವುದರಿಂದ ನೇಕಾರ ವೃತ್ತಿಯು ಅವನತಿಯ ಅಂಚಿಗೆ ಬಂದು ತಲುಪಿದೆ. ಉಚಿತ ವಿದ್ಯುತ್ ಪೂರೈಕೆ ಸರಕಾರ ಮಟ್ಟದಲ್ಲಿ ಪರಿಷ್ಕರಣೆಯ ಇತ್ಯರ್ಥ ಆಗುವವರೆಗೂ ನಮ್ಮ ಭಾಗದ ವಿದ್ಯುತ್ ಮಗ್ಗಗಳ ಮಾಲೀಕರು ವಿದ್ಯುತ ಬಿಲ್ಲನ್ನು ಕಟ್ಟುವುದಿಲ್ಲ. ಇದಕ್ಕೆ ಇಲಾಖೆ ಸಹಕರಿಸಬೇಕೆಂದು ಮನವಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಮಾಧೂಸಾ ಮೇರವಾಡೆ, ಶಿವಲಿಂಗ ಟರಕಿ, ರಾಜು ದಡಿ, ವಿರೂಪಾಕ್ಷಪ್ಪ ಐಲಿ, ರವಿ ಗಂಜಿ, ಶ್ರೀನಿವಾಸ ತಟ್ಟಿ, ಸಣ್ಣಚೌಡಪ್ಪ ಮಾತಗುಂಡಿ, ಬಸವರಾಜ ಕರಿ, ಮಹೇಶ ವಗ್ಗ, ಪ್ರಕಾಶ ಹಿಂಡಿ, ಶ್ರೀಕಾಂತ, ಚಿಕ್ಕಪ್ಪ ಅರಣಿ ಸೇರಿದಂತೆ ಇತರರು ಇದ್ದರು.

೮ಜಿಡಿಜಿ೭

ರಾಜ್ಯದಲ್ಲಿನ ವಿದ್ಯುತ್ ಮಗ್ಗಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!