ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಕೊಡಗಿಗೆ ಕೇಂದ್ರಾಡಳಿತ ಪ್ರದೇಶದ (ಯುಟಿ) ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಭಾನುವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಶಾಂತಿಯುತ ಸತ್ಯಾಗ್ರಹ ನಡೆಸಲಾಯಿತು.
ಮಡಿಕೇರಿ ; ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಹಾಗೂ ಕೊಡಗಿಗೆ ಕೇಂದ್ರಾಡಳಿತ ಪ್ರದೇಶದ (ಯುಟಿ) ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಭಾನುವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಆವರಣದ ಬಳಿ ಶಾಂತಿಯುತ ಸತ್ಯಾಗ್ರಹ ನಡೆಸಲಾಯಿತು.ರಾಜ್ಯ ಪುನರ್ ವಿಂಗಡಣಾ ದಿನದ ಅಂಗವಾಗಿ ಬೆಳಗ್ಗೆ 10.30ಕ್ಕೆ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಕೊಡವ ಸಮುದಾಯದ ಪ್ರಮುಖರು ಹಾಗೂ ಸಂಘಟನೆಯ ಸದಸ್ಯರು ಪಾಲ್ಗೊಂಡಿದ್ದರು.
ಪ್ರತಿ ವರ್ಷ ದೆಹಲಿಯಲ್ಲಿ ನಡೆಸುತ್ತಿದ್ದ ಸತ್ಯಾಗ್ರಹವನ್ನು ಈ ಬಾರಿ ಕೊಡವಲ್ಯಾಂಡ್‌ನಲ್ಲಿಯೇ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ತಿಳಿಸಿದೆ.
ಡಬಲ್ ಸ್ಪೆಷಲ್ ಸ್ಟೇಟಸ್‌ಗೆ ಆಗ್ರಹ
ಕೊಡಗಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಹಾಗೂ ಕೊಡವಲ್ಯಾಂಡ್‌ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕಲ್ಪಿಸುವ ಮೂಲಕ ಕೊಡವ ಸಮುದಾಯದ ಅಸ್ತಿತ್ವ, ಭೂಮಿ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಬೇಕು ಎಂಬುದು ಸಿಎನ್‌ಸಿಯ ಪ್ರಮುಖ ಬೇಡಿಕೆಯಾಗಿದೆ.
1956ರ ರಾಜ್ಯ ಪುನರ್ ವಿಂಗಡಣೆಯ ಸಂದರ್ಭದಲ್ಲಿ ಕೊಡಗು ಪ್ರತ್ಯೇಕ ಪಾರ್ಟ್-ಸಿ ರಾಜ್ಯದ ಸ್ಥಾನಮಾನ ಕಳೆದುಕೊಂಡು ವಿಶಾಲ ಮೈಸೂರು ರಾಜ್ಯದಲ್ಲಿ ವಿಲೀನಗೊಂಡಿತು. ಇದು ಕೊಡವ ಸಮುದಾಯಕ್ಕೆ ಐತಿಹಾಸಿಕ ಅನ್ಯಾಯವಾಗಿದೆ ಎಂದು ಸಿಎನ್‌ಸಿ ಪ್ರತಿಪಾದಿಸಿದೆ.
1950ರಿಂದ 1956ರವರೆಗೆ ಕೇಂದ್ರದ ಆರ್ಥಿಕ ನೆರವಿಲ್ಲದೆ ಸ್ವಾವಲಂಬಿಯಾಗಿ ಆಡಳಿತ ನಡೆಸಿದ ಕೊಡಗಿನ ಐತಿಹಾಸಿಕ ಹಿನ್ನೆಲೆಯನ್ನು ಉಲ್ಲೇಖಿಸಿರುವ ಸಿಎನ್‌ಸಿ, ಸಂವಿಧಾನದ 2, 3 ಮತ್ತು 4ನೇ ವಿಧಿಗಳ ಅಡಿಯಲ್ಲಿ ಕೊಡಗಿಗೆ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನ ಮರುಸ್ಥಾಪಿಸಬೇಕೆಂದು ಆಗ್ರಹಿಸಿದೆ.ಕೊಡವಲ್ಯಾಂಡ್‌ಗೆ ಸ್ವಾಯತ್ತತೆಕೊಡವರು ಪ್ರತ್ಯೇಕ ಏಕ-ಜನಾಂಗೀಯ, ಪ್ರಕೃತಿ ಆರಾಧಕ ಸಮುದಾಯವಾಗಿದ್ದು, 1871ರಿಂದ 1941ರವರೆಗಿನ ಜನಗಣತಿಗಳಲ್ಲಿ ಪ್ರತ್ಯೇಕ ಸಮುದಾಯವಾಗಿ ಗುರುತಿಸಲ್ಪಟ್ಟಿದ್ದರು. ನಂತರದ ಅವಧಿಯಲ್ಲಿ ತಮ್ಮ ಜನಾಂಗೀಯ ಗುರುತನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎನ್‌ಸಿ ಕಳವಳ ವ್ಯಕ್ತಪಡಿಸಿದೆ.ಕೊಡವಲ್ಯಾಂಡ್‌ಗೆ ಭೌಗೋಳಿಕ- ರಾಜಕೀಯ ಸ್ವಾಯತ್ತತೆ ಕಲ್ಪಿಸುವುದು, ಕೊಡವ ಪೂರ್ವಜರ ಭೂಮಿಗೆ ಸಾಂವಿಧಾನಿಕ ರಕ್ಷಣೆ, ಭೂಮಿ ವರ್ಗಾವಣೆ ನಿಯಂತ್ರಣ, ಕೊಡವ ಸ್ವಾಯತ್ತ ಮಂಡಳಿ ರಚನೆ ಹಾಗೂ ಕೊಡವ ವೈಯಕ್ತಿಕ ಮತ್ತು ಸಾಂಪ್ರದಾಯಿಕ ಕಾನೂನು ಮಂಡಳಿ ಸ್ಥಾಪನೆಗೆ ಸಂಘಟನೆ ಒತ್ತಾಯಿಸಿದೆ.
ಅಲ್ಲದೆ ಕೊಡವ ಭಾಷೆಗೆ ಮಾನ್ಯತೆ, ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ, ಕೊಡವರನ್ನು ಆದಿಮ ಸಂಜಾತ ಜನಾಂಗವೆಂದು ಗುರುತಿಸುವುದು, ಕೊಡವ ಸಂಸ್ಕೃತಿ ಹಾಗೂ ಪರಂಪರೆಗೆ ಯುನೆಸ್ಕೋ ಮಾನ್ಯತೆ, ತೋಕ್-ಗನ್ ಮತ್ತು ಸಾಂಪ್ರದಾಯಿಕ ಆಚರಣೆಗಳ ರಕ್ಷಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.