ಮುಂಡಗೋಡ: ಮಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಆಟದ ಮೈದಾನಕ್ಕೆ ಜಾಗ ಕಲ್ಪಿಸುವಂತೆ ಆಗ್ರಹಿಸಿ ಮಳಗಿ ಸುತ್ತಮುತ್ತಲಿನ ಗ್ರಾಮಸ್ಥರು ಗುರುವಾರ ಪಿಡಿಒ ಶ್ರೀನಿವಾಸ ಮರಾಟೆಗೆ ಅವರಿಗೆ ಮನವಿ ಅರ್ಪಿಸಿದರು.
ಕ್ರೀಡಾಂಗಣದ ಕೊರತೆಯಿಂದ ಕ್ರೀಡೆಯಲ್ಲಿ ಉತ್ತಮ ಕೌಶಲ್ಯವಿರುವ ಆಸಕ್ತ ಸಾರ್ವಜನೀಕರಿಗೆ, ಕ್ರೀಡೆಯಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳವಂತಹ ಪ್ರತಿಭಾವಂತ ವಿದ್ಯಾರ್ಥಿಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಶಾಲಾ ಕ್ರೀಡಾಕೂಟಗಳನ್ನು ವ್ಯವಸ್ಥಿತವಾಗಿ ನಡೆಸಲು ತುಂಬ ತೊಂದರೆಯಾಗುತ್ತದೆ. ಮಳಗಿ ಪಂಚಾಯತ ವ್ಯಾಪ್ತಿಯಲ್ಲಿ ಸಾಕಷ್ಟು ಗ್ರಾಮಠಾಣಾ ಜಾಗೆ ಇದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥಿತವಾಗಿ ಕ್ರೀಡಾಂಗಣ ನಿರ್ಮಿಸಿಕೊಳ್ಳಲು ಪಂಚಾಯತ ವ್ಯಾಪ್ತಿಗೆ ಬರುವ ಗ್ರಾಮಠಾಣಾ ಜಾಗೆಯನ್ನು ಕ್ರೀಡಾಂಗಣಕ್ಕೆ ಮಂಜೂರಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಕಸ್ತೂರಿ ತಳವಾರ, ಗುಲ್ಜಾರ್ ಸಂಗೂರ, ಪ್ರಜ್ವಲ್ ಕುಲಕರ್ಣಿ, ರಮೇಶ್ ಸಿರ್ಸಿಕರ್, ಮುಜಫರ್ ದೇವಗೇರಿ, ಸುಭಾಸ ತಲಗಟ್ಟಿ, ಜಗದೀಶ್ ನಾಯಕ್, ರಾಘು ರಾಯ್ಕರ್, ಸಮೀರ್ ಶೇಖ, ಪ್ರಸಾದ್ ಮೇದಾರ್, ಮಾರುತಿ ಚಿತ್ರಗಾರ, ಮುಸ್ತಾಕ್ ಶೇಕ್, ರಾಹುಲ್ ಕಾಮತ್ ಇದ್ದರು.