ಶಿರಸಿಯಲ್ಲಿ ಅಂಡಬೇಡ್ಕರ ವೃತ್ತ ನಾಮಕರಣಕ್ಕೆ ಆಗ್ರಹ

KannadaprabhaNewsNetwork | Published : Jan 9, 2025 12:48 AM

ಸಾರಾಂಶ

ನಗರದ ಐದು ರಸ್ತೆ ಸರ್ಕಲ್‌ಗೆ ಜಮಾಯಿಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ, ಟೈರ್‌ ಸುಟ್ಟು ಪ್ರತಿಭಟನೆ ನಡೆಸಿ, ಅಂಬೇಡ್ಕರ ಪ್ರತಿಮೆ ಸ್ಥಾಪಿಸುವಂತೆ ಸರ್ಕಾರ ಹಾಗೂ ನಗರಸಭೆಯನ್ನು ಆಗ್ರಹಿಸಿದರು.

ಶಿರಸಿ: ನಗರದ ಐದು ರಸ್ತೆ ವೃತ್ತಕ್ಕೆ ಅಂಬೇಡ್ಕರ ವೃತ್ತ ಎಂದು ನಾಮಕರಣ ಮಾಡುವುದರ ಜತೆಗೆ ಅಂಬೇಡ್ಕರ ಪ್ರತಿಮೆ ಸ್ಥಾಪಿಸಬೇಕೆಂದು ಆಗ್ರಹಿಸಿ, ಭೀಮಘರ್ಜನೆ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಐದು ರಸ್ತೆ ಸರ್ಕಲ್‌ಗೆ ಜಮಾಯಿಸಿದ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ, ಟೈರ್‌ ಸುಟ್ಟು ಪ್ರತಿಭಟನೆ ನಡೆಸಿ, ಅಂಬೇಡ್ಕರ ಪ್ರತಿಮೆ ಸ್ಥಾಪಿಸುವಂತೆ ಸರ್ಕಾರ ಹಾಗೂ ನಗರಸಭೆಯನ್ನು ಆಗ್ರಹಿಸಿದರು.ಭೀಮಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ ಮಿಂಟಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆ ಸ್ಥಾನದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿರುವುದು ಡಾ. ಬಿ.ಆರ್. ಅಂಬೇಡ್ಕರ ಅವರು ನೀಡಿದ ಸಂವಿಧಾನದಿಂದ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ಐದು ಸರ್ಕಲ್‌ಗೆ ಅಂಬೇಡ್ಕರ ವೃತ್ತ ಎಂದು ನಾಮಕರಣ ಮಾಡಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ ಪ್ರತಿಮೆ ಸ್ಥಾಪಿಸಬೇಕೆಂದು ಕಳೆದ ೩ ಬಾರಿ ಹೋರಾಟ ಮಾಡಿದ್ದೇವೆ. ಶಾಸಕ ಭೀಮಣ್ಣ ನಾಯ್ಕ ಅವರಿಗೆ ಮನವಿ ನೀಡಿದ್ದೇವು. ಆಶ್ವಾಸನೆ ನೀಡಿದ್ದರು. ಆದರೆ ಇನ್ನೂವರೆಗೂ ಉತ್ತರ ಬಂದಿಲ್ಲ. ಅಲ್ಲದೇ ಸಂಸದರಿಗೆ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಕೆ ಮಾಡಲಾಗಿತ್ತು. ಯಾರಿಂದಲೂ ಸಕಾರಾತ್ಮಕ ಉತ್ತರ ಬಂದಿಲ್ಲ. ಈ ಬಗ್ಗೆ ನಗರಸಭೆ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಆದಷ್ಟು ಶೀಘ್ರವಾಗಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ತಿಲಕ್ ಹುಬ್ಬಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜಯ್ ಮಡಗಾವಂಕರ್, ತಾಲೂಕಾಧ್ಯಕ್ಷ ಪುನೀತ್ ಮರಟೆ ಉಪಾಧ್ಯಕ್ಷ ಶ್ಯಾಮ್ ದೇಶಭಾಗ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಮಿತ್ ಜೋಗಳೇಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಧೋತ್ರೆ ಕಾರ್ಯಕರ್ತರಾದ ಅಜಿತ ಮಿಂಟಿ, ಹರ್ಷ, ಪಿಂಟು, ಆದರ್ಶ, ನವೀನ್ ಕಾನಡೆ, ಗೌತಮ್ ನೇತ್ರೇಕರ, ವಿಶ್ವ ಪಾವಸ್ಕರ್ ಮತ್ತಿತರರು ಇದ್ದರು.ನಾಳೆ ಕೊಡಸೆ ಶಾಲೆಯ ಅಮೃತ ಮಹೋತ್ಸವ

ಯಲ್ಲಾಪುರ: ತಾಲೂಕಿನ ಕೊಡಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವ ಜ. ೧೦ ಹಾಗೂ ೧೧ರಂದು ಅದ್ಧೂರಿಯಾಗಿ ನಡೆಯಲಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮೆಣಸುಪಾಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ. ೧೦ರಂದು ಅಮೃತ ಮಹೋತ್ಸವದ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ, ದಾನಿಗಳಿಗೆ ಗೌರವ ಕಾರ್ಯಕ್ರಮ ನಡೆಯಲಿದೆ. ಯೋಧರಾಗಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು ಹಾಗೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು.

ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜ. ೧೧ರ ರಾತ್ರಿ ವಿದ್ಯಾ ಗಜಾನನ ಕಲಾ ಬಳಗದ ಕಲಾವಿದರಿಂದ ಕಳಚಿದ ಕುಂಡಲ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಅಮೃತ ಮಹೋತ್ಸವ ಸಮಿತಿ ಪ್ರಮುಖರಾದ ವಿಶ್ವೇಶ್ವರ ಹೆಗಡೆ, ರವೀಂದ್ರ ದೇಸಾಯಿ, ರವಿ ಕೈಟ್ಕರ್, ಗ್ರಾಪಂ ಸದಸ್ಯ ಗಣಪತಿ ಸಿದ್ದಿ, ನಿತ್ಯಾನಂದ ಮಳಿಕ, ನಾಗರಾಜ ಸಾವಂತ, ನಾರಾಯಣ ಕೈಟ್ಕರ್ ಇತರರಿದ್ದರು.

Share this article