ವಿವಿಧ ಇಲಾಖೆ ಖಾಲಿ ಹುದ್ದೆಗಳ ನೇಮಕಾತಿಗೆ ಒತ್ತಾಯ

KannadaprabhaNewsNetwork |  
Published : Apr 08, 2026, 01:15 AM IST
೭ಕೆಎಲ್‌ಆರ್-೧ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿಗಾಗಿ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯ ಕಾರ್ಯಕರ್ತರು ಕೋಲಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವುದು. | Kannada Prabha

ಸಾರಾಂಶ

ಪಿಎಸ್‌ಐ ಸಿವಿಲ್ ೬೦೦ ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಬೇಕು, ಪ್ರಬುದ್ಧ ಅಕಾಡೆಮಿಯ ಉಚಿತ ಐಎಎಸ್, ಕೆಎಎಸ್ ಸ್ವರ್ಧಾತ್ಮಕ ತರಬೇತಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಹಣ ಬಿಡುಗಡೆ ಮಾಡಬೇಕು.

ಕನ್ನಡಪ್ರಭ ವಾರ್ತೆ ಕೋಲಾರಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘಟನೆಯಿಂದ ನೇಮಕಾತಿ ಹಾಗೂ ಕೆಪಿಎಸ್‌ಸಿಯಲ್ಲಿ ನೇಮಕಾತಿಗಳ ಅಕ್ರಮ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಚಂದ್ರಪ್ಪ ಜಿ.ಕೆ ಮಾತನಾಡಿ, ಸರ್ಕಾರವು ರಾಜ್ಯದಲ್ಲಿನ ೫೬.೪೩೨ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಜಾರಿ ಮಾಡಿ ೮ ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಕೆಪಿಎಸ್‌ಸಿಯಲ್ಲಿ ಅಕ್ರಮವಾಗಿರುವ ಕೆಎಎಸ್‌ಸಿಟಿಐ, ಪಿಡಿಒ ಮುಂತಾದ ನೇಮಕಾತಿಗಳ ಬಗ್ಗೆ ತನಿಖೆಗೆ ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಪಿಎಸ್‌ಐ ಸಿವಿಲ್ ೬೦೦ ಆರ್ಥಿಕ ಅನುಮೋದನೆ ದೊರೆತಿದ್ದು ಕೂಡಲೇ ನೇಮಕಾತಿ ಪ್ರಾರಂಭಿಸಬೇಕು, ಪ್ರಬುದ್ಧ ಅಕಾಡೆಮಿಯ ಉಚಿತ ಐಎಎಸ್, ಕೆಎಎಸ್ ಸ್ವರ್ಧಾತ್ಮಕ ತರಬೇತಿ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಹಣ ಬಿಡುಗಡೆ ಮಾಡಬೇಕು. ಜಿಲ್ಲೆಗೆ ೫೦೦ ಆಸನಗಳ ಸಾಮರ್ಥ್ಯದ ಹೊಸ ಗ್ರಂಥಾಲಯ ಮಂಜೂರು ಮಾಡುವುದು, ಕೆಎಸ್ಆರ್‌ಪಿ ಆರ್.ಎಸ್.ಐ. ಕೆ.ಎಸ್.ಐ.ಎಸ್.ಎಫ್. ವೈರ್‌ಲೇಸ್ ಅಂಡ್ ಐ.ಬಿ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು. ಎಸ್.ಓ.ಸಿ.ಓ.ನೇಮಕಾತಿ ಪ್ರಾರಂಭಿಸಬೇಕು ಎಂದರು.ಪಿಎಸ್‌ಟಿಆರ್, ಜಿಪಿಎಸ್‌ಟಿಆರ್, ಎಚ್ಎಸ್‌ಟಿಆರ್ ಕೂಡಲೇ ನೇಮಕಾತಿ ಪ್ರಾರಂಭಿಸಬೇಕು. ಪಿಯು ಉಪನ್ಯಾಸಕರನ್ನು ಮತ್ತು ಸಹಾಯಕ ಪ್ರೊಫೆಸರ್‌ಗಳನ್ನು ಕೂಡಲೇ ನೇಮಕಾತಿ ಮಾಡಬೇಕೆಂದು ಆಗ್ರಹಿಸಿದರು. ದೈಹಿಕ ಶಿಕ್ಷಕರು ಮತ್ತು ಕಂಪ್ಯೂಟರ್ ಅಪರೇಟರ್‌ಸ್ ಮತ್ತು ವಾರ್ಡನ್‌ಗಳ ನೇಮಕಾತಿ, ಗ್ರಂಥಪಾಲಕ ಹಾಗೂ ಗ್ರಂಥಾಲಯ ಸಹಾಯಕರ ನೇಮಕಾತಿ ಕೂಡಲೇ ಪ್ರಾರಂಭಿಸಬೇಕು. ೩೮೪ ಕೆಎಎಸ್ ಕನ್ನಡ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಬೇಕು. ೨ ಸಾವಿರ ಎಫ್‌ಡಿಎ ಮತ್ತು ಎಸ್.ಡಿ.ಎ. ನೇಮಕಾತಿ ಕೂಡಲೇ ಪ್ರಾರಂಭಿಸಬೇಕು. ಅಬಕಾರಿ ಸಬ್ ಇನ್ಸ್‌ಪೆಕ್ಟರ್ ೨೪೭ ಹುದ್ದೆಗಳ ನೇಮಕಾತಿ ಕೂಡಲೇ ಮಾಡಬೇಕು. ಅಬಕಾರಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ, ಸಬ್ ರಿಜಿಸ್ಟರ್‌ ಮತ್ತು ಕಂದಾಯ ನಿರೀಕ್ಷಕರ ಹುದ್ದೆಗಳ ನೇಮಕಾತಿ ಪ್ರಾರಂಭಿಸಬೇಕು ಎಂದರು. ಸಿ.ಟಿ.ಐ. ಮತ್ತು ಆರ್.ಟಿ.ಓ ಹೊಸ ನೇಮಕಾತಿ ಕೂಡಲೇ ಪ್ರಾರಂಭಿಸಬೇಕು. ಪಿಡಿಒ ದರ್ಜೆ ೧ ಮತ್ತು ೨ ಎಫ್.ಡಿ.ಎ ಹಾಗೂ ಎಸ್.ಡಿ.ಎ. ಲೆಕ್ಕಾಧಿಕಾರಿಗಳ ನೇಮಕಾತಿ. ಓ.ಬಿ.ಸಿ. ಎಸ್.ಡಬ್ಲೂಡಿ, ಅಲ್ಪಸಂಖ್ಯಾತರ ಇಲಾಖೆ ಡಿ.ಎಂ.ಓ. ಮತ್ತು ತಾಲ್ಲೂಕು ಕ್ಷೇಮಾಭಿವೃದ್ಧಿ ಅಧಿಕಾರಿ ಹೊಸ ನೇಮಕಾತಿ ಪ್ರಕ್ರಿಯೆ ಜರುಗಿಸಬೇಕೆಂದು ಒತ್ತಾಯಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕರು ಹೊಸ ನೇಮಕಾತಿ, ಭೂ ಸರ್ವೇಯರ್ ಇಲಾಖೆಯ ಎ.ಓ ಮತ್ತು ಎ.ಎ.ಓ. ಹುದ್ದೆಗಳನ್ನು ಕೂಡಲೇ ಕೆ.ಇ.ಎ. ಮೂಲಕ ನೇಮಕಾತಿ, ಎ.ಸಿ.ಎಪ್ ಆರ್.ಎಫ್.ಓ.. ಮತ್ತು ಡಿ.ಆರ್.ಎಫ್,ಓ.ಗಳ ನೇಮಕಾತಿಗಳಾಗಬೇಕು. ಭ್ರಷ್ಚಾಚಾರ ಮುಕ್ತ ನೇಮಕಾತಿಯಾಗಬೇಕು. ಪ್ರತಿವರ್ಷ ಎಲ್ಲಾ ಇಲಾಖೆಗಳಿಂದ ಎಲ್ಲಾ ನೇಮಕಾತಿಗಳನ್ನು ಕಡ್ಡಾಯಗೊಳಿಸಬೇಕೆಂದರು. ಯು.ಪಿ.ಎಸ್.ಸಿ. ಮಾದರಿಯಲ್ಲಿ ನಮ್ಮ ರಾಜ್ಯದಲ್ಲಿ ಪರೀಕ್ಷಾ ಶುಲ್ಕ ಅಳವಡಿಸಬೇಕು. ಪೊಲೀಸ್ ಕಾನ್ಸ್ಟೇಬಲ್ ಹುದ್ದೆಯ ನಿಗಧಿತ ವಯೋಮಿತಿ ಎಸ್.ಸಿ/ಎಸ್.ಟಿ. ಹಾಗೂ ಓ.ಬಿ.ಸಿ-೩೩ವರ್ಷ ಸಾಮಾನ್ಯ ವರ್ಗಗಳಿಗೆ ೩೦ ವರ್ಷ ಖಾಯಂಗೊಳಿಸಬೇಕು. ಎ.ಸಿ. ಎಸ್.ಎ.ಎ.ಡಿ. ಮುಖ್ಯ ಪರೀಕ್ಷೆಗಳ ಫಲಿತಾಂಶ ಬಿಟ್ಟು ಕೊಡಲೇ ನೇಮಕಾತಿ ಪೂರ್ಣಗೊಳಿಸಬೇಕೆಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಉಪಾಧ್ಯಕ್ಷ ಶ್ರೇಯಸ್ ಎಂ.ಎಸ್, ಪದಾಧಿಕಾರಿಗಳಾದ ರಂಗನಾಥ್, ಪ್ರಮುದ್ ಕುಮರ್, ರಾಕೇಶ್, ಕಿರಣ್ ಕುಮಾರ್ ಅರುಣ್ ಕುಮಾರ್, ದರ್ಶನ್, ಸುರೇಶ್, ಪುತ್ವಿರಾಜ್ ಆನಂದ್, ವಿನೋದ್, ಮನೋಜ್, ವಿಶ್ವನಾಥ್ ಪ್ರದೀಪ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಪ್‌ ಚುಪ್‌ ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ನನಗೆ ಸುಪ್ರೀಂ ಕೋರ್ಟಿನಲ್ಲಿ ಜಯ: ಕೊಂಡವಾಡಿ ಚಂದ್ರಶೇಖರ್