ಕನ್ನಡಪ್ರಭ ವಾರ್ತೆ ಜಮಖಂಡಿ
ಗುರುವಾರ ಸಾರ್ವನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಸರ್ಕಾರ ನೀಡುತ್ತಿದ್ದ ಪಥ್ಯಾಹಾರ ಸ್ಥಗಿತಗೊಂಡಿದೆ. ಆಹಾರ ಒದಗಿಸುತ್ತಿದ್ದ ಗುತ್ತಿಗೆದಾರರಿಗೆ ಕಳೆದ 15 ತಿಂಗಳಿನಿಂದ ಬಿಲ್ ಪಾವತಿಸಲಾಗಿಲ್ಲ. ಜೊತೆಗೆ ಗುತ್ತಿಗೆಯ ಅವಧಿ ಮುಕ್ತಾಯವಾಗಿದ್ದರಿಂದ ರೋಗಿಗಳಿಗೆ ಒದಗಿಸಬೇಕಾದ ಆಹಾರ ವಿತರಣೆ ನಡೆಯುತ್ತಿಲ್ಲ. ಕಳೆದ 15 ತಿಂಗಳಿನಿಂದ ಪಥ್ಯಾಹಾರ ವಿತರಿಸುತ್ತಿದ್ದ ಗುತ್ತಿಗೆದಾರರಿಗೆ ₹1,13,46,072 ಗಳನ್ನು ಪಾವತಿಸಬೇಕಿದೆ. ಸದ್ಯ ಅವಧಿಯು ಮುಕ್ತಾಯವಾಗಿದ್ದು, ಸರ್ಕಾರ ಪುನಃ ಆದೇಶ ಹೊರಡಿಸಿದ ನಂತರ ಆಹಾರ ವಿತರಣೆ ನಡೆಸಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ತೊಂದರೆಯಾಗಿದೆ. ಶಾಸಕರು, ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಗುತ್ತಿಗೆದಾರರ ಹಣ ಬಿಡುಗಡೆ ಮಾಡಬೇಕು ಹಾಗೂ ರೋಗಿಗಳಿಗೆ ತೊಂದರೆಯಾಗದಂತೆ ಆಹಾರದ ವ್ಯವಸ್ಥೆ ಮಾಡಬೇಕು ಎಂದರು.ಕಳೆದ ವರ್ಷ ಜನವರಿಯಿಂದ ಮಾರ್ಚ್ 2025 ರವರೆಗಿನ ಬಿಲ್ ಪಾವತಿಯಾಗಿಲ್ಲ. ಆಸ್ಪತ್ರೆಯಲ್ಲಿ ಶೇ.40ರಷ್ಟು ಔಷಧಿಗಳ ಪೂರೈಕೆ ನಡೆಯುತ್ತಿದೆ. ಉಳಿದ ಔಷಧಿಯನ್ನು ಹೊರಗಿನಿಂದ ತರಬೇಕಾಗುತ್ತದೆಂಬ ದೂರುಗಳು ಕೇಳಿ ಬರುತ್ತಿದ್ದು, ಅಧಿಕಾರಿಗಳು ಸೂಕ್ತಕ್ರಮ ಜರುಗಿಸಬೇಕು. ಸರ್ಕಾರಕ್ಕೆ ಸಮಸ್ಯೆಯ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ. ಬಡ ರೋಗಿಗಳೇ ಹೆಚ್ಚಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅಂತವರಿಗೆ ಅನುಕೂಲ ಕಲ್ಪಿಸಿಕೊಡಬೇಕು.
-ಜಗದೀಶ ಗುಡಗುಂಟಿ, ಶಾಸಕರು.