ಕನ್ನಡಪ್ರಭ ವಾರ್ತೆ ಮುಧೋಳ
ಘಟಪ್ರಭಾ ನದಿಯ ಎಡ ಮತ್ತು ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ತಹಸೀಲ್ದಾರ್ ಕಚೇರಿಯ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ರೈತ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಲಕಂ ಹಾಗೂ ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, 40 ಸಾವಿರ ಹೆಕ್ಟೆರ್ ಭೂಮಿ ಇದ್ದು, ಈ ಜಮೀನಿನಲ್ಲಿ ಯಾವ ಯಾವ ಬೆಳೆ ಬೆಳೆದಿದ್ದಾರೆ. ಈ ಬಗ್ಗೆ ಸರ್ವೇ ಮಾಡಿ ಮೇಲಧಿಕಾರಿಗಳಿಗೆ ಮಾತನಾಡಿದರು. ಕೂಡಲೇ ನೀರು ಬಿಡಿಸುವ ವ್ಯವಸ್ಥೆ ಆಗಬೇಕು. ವಿದ್ಯುತ್ ಪೂರೈಕೆ 7 ಗಂಟೆ ಕೊಡುತ್ತಿದ್ದು, ಅದರಲ್ಲಿ ಪದೇ ಪದೇ ಕಡಿತಗೊಳಿಸುತ್ತಿದ್ದು, ಕಡಿಮೆ ಹೊಲ್ಟೇಜ್ ನೀಡುತ್ತಿದ್ದಾರೆ. ಇದರಿಂದ ಮೋಟರಗಳು ಸುಟ್ಟು ಹಾನಿಯಾಗುತ್ತಿವೆ, ಸಮರ್ಪಕ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿ ಎಂ.ಎಸ್.ದಡೂತಿ ಮಾತನಾಡಿ, ಇನ್ನು ಮೇಲೆ ಸಮರ್ಪಕ ವಿದ್ಯುತ್ ನೀಡಲಾಗುವುದೆಂದು ಭರವಸೆ ನೀಡಿದರು.ಜಿ.ಎಲ್.ಬಿ.ಸಿ ಅಧಿಕಾರಿ ಶ್ರೀಶೈಲ ಕಲ್ಯಾಣಿ ಮಾತನಾಡಿ, ಕಾಲುವೆಗೆ ನೀರು ಬಿಡಿಸುವ ಬಗ್ಗೆ ನಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ, ಗುರುವಾರ ಸಂಜೆಯೊಳಗಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಭೇಟಿಯಾಗಿ ನೀರು ಬಿಡಿಸುವ ಬಗ್ಗೆ ಮಾಹಿತಿಯನ್ನು ತಹಶೀಲ್ದಾರರ ಮುಖಾಂತರ ತಿಳಿಸಲಾಗುವುದು ಎಂದರು. ಇದಕ್ಕೆ ಒಪ್ಪಿದ ರೈತರು ಪ್ರತಿಭಟನೆ ಹಿಂಪಡೆದರು. ಈ ಕುರಿತು ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕಗೆ ಮನವಿ ಪತ್ರ ಸಲ್ಲಿಸಲಾಯಿತು.