ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾಗಿ ಕಬ್ಬು ಮಳೆ ಇಲ್ಲದೆ ಬೆಳೆ ಒಣಗುತ್ತಿದೆ. ಕಬ್ಬಿನ ಉತ್ಪಾದನೆ ವೆಚ್ಚಕ್ಕೆ ನ್ಯಾಯಯುತ ಎಫ್ಆರ್ ಪಿ ದರ ನಿಗದಿಯಾಗಿಲ್ಲ. ಕಳೆದ ಎರಡು ತಿಂಗಳಿಂದಲೂ ಕರ್ನಾಟಕದ ರೈತರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಎಸ್‌ಎಪಿ ದರವನ್ನು ನಿಗದಿ ಮಾಡಿಲ್ಲ. ಆದರೆ ಕಬ್ಬಿನ ಎಫ್ಆರ್ ಪಿ ದರ 4450 ರು.ಗೆ ಏರಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದರ ಪ್ರಕಾರ 10.25 ಕನಿಷ್ಠ ಇಳುವರಿಗೆ 4500 ದರ ನಿಗದಿ ಮಾಡಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಕೂಡಲೇ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಬ್ಬಿನಿಂದ ಉತ್ಪಾದನೆ ಮಾಡುವ ಸಕ್ಕರೆ ಬೆಲೆಯನ್ನು ವಾಣಿಜ್ಯ ಬಳಕೆಗೆ ಹೆಚ್ಚು ದರ ಹಾಗೂ ಸಾಮಾನ್ಯ ಗ್ರಾಹಕ ಬಳಕೆ ಸಾಮಾನ್ಯ ದರ ಎಂದು ನಿಗದಿ ಮಾಡಬೇಕು. ಹೆಚ್ಚುವರಿ ದರದಿಂದ ಸಿಗುವ ಲಾಭವನ್ನು ರೈತರಿಗೆ ಎಫ್ಆರ್ ಪಿ ದರಕ್ಕೆ ಸೇರಿಸಿ ಕೊಡಬೇಕು. ಕಬ್ಬಿನ ಎಫ್ಆರ್ ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಿ. ಕಬ್ಬು ಬೆಳೆಗಾರರ ಕಟಾವು ಕೂಲಿ ಸಾಗಾಣಿಕೆ ವೆಚ್ಚ ಶೋಷಣೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.ರಾಜ್ಯದಲ್ಲಿ 224 ತಾಲೂಕು ಬರಗಾಲಕ್ಕೆ ತುತ್ತಾಗಿದ್ದು, ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ ಹಣ ಕೊಡ ವಾಪಸ್ ಸಿಗದೇ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ರೈತರ ಎಲ್ಲಾ ಕೃಷಿ ಸಾಲ ಮನ್ನಾ ಮಾಡಬೇಕು. ರಾಜ್ಯದಲ್ಲಿ ಬರಗಾಲಕ್ಕೆ ತುತ್ತಾಗಿರುವ ರೈತರಿಗೆ ಸುಮಾರು 45000 ಕೋಟಿ ಬೆಳೆ ನಷ್ಟವಾಗಿದೆ. ರಾಜ್ಯ ಸರ್ಕಾರದಿಂದ ಪುಡಿಗಾಸಿನ ಪರಿಹಾರ ನೀಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಎನ್ ಡಿಆರ್ ಎಫ್ ಪರಿಹಾರ ಮಾನದಂಡವನ್ನು ವೈಜ್ಞಾನಿಕವಾಗಿ ಪರಿಸ್ಕರಿಸಿ ಏರಿಕೆ ಮಾಡಿ. ಎಕರೆಗೆ 25000 ರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಬರ ಪರಿಹಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.