ಪ್ರಮೋದ್ ಮಧ್ವರಾಜ್ ವಿರುದ್ಧ ಕೇಸ್ ವಾಪಸ್‌ಗೆ ಆಗ್ರಹ

KannadaprabhaNewsNetwork |  
Published : Mar 29, 2025, 12:37 AM IST
೨೮ಕೆಎಂಎನ್‌ಡಿ-೨ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಿಸಿರುವ ಸುಮೋಟೋ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿ ಗಂಗಾಮತಸ್ಥ ಸಮುದಾಯದವರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದುಕೊಟ್ಟಂತಹ ಮಹಿಳೆಯರ ಮೇಲೆ ಕೇಸ್ ಹಾಕಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ಇದನ್ನು ಪ್ರಶ್ನಿಸಿದ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ರೀತಿಯ ಸಂವಿಧಾನ ವಿರೋಧಿ ನಡೆಯನ್ನು ಸಮಸ್ತ ಮೀನುಗಾರ ಸಮಾಜ ತೀವ್ರವಾಗಿ ಖಂಡಿಸುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಉಡುಪಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದಾಖಲಿಸಿರುವ ಸುಮೋಟೋ ಪ್ರಕರಣವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಜಿಲ್ಲಾ ಗಂಗಾಮತಸ್ಥರು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಗಂಗಾಮತಸ್ಥ ಸಮುದಾಯದವರು, ಮೀನುಗಾರರ ಅನ್ನಕ್ಕೆ ಕೈ ಹಾಕಿದ ಕಳ್ಳರನ್ನು ಹಿಡಿದುಕೊಟ್ಟಂತಹ ಮಹಿಳೆಯರ ಮೇಲೆ ಕೇಸ್ ಹಾಕಿ ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಪರ ನಡೆದ ಸಮಾಲೋಚನಾ ಸಭೆಯಲ್ಲಿ ಇದನ್ನು ಪ್ರಶ್ನಿಸಿದ ಪ್ರಮೋದ್ ಮಧ್ವರಾಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ರೀತಿಯ ಸಂವಿಧಾನ ವಿರೋಧಿ ನಡೆಯನ್ನು ಸಮಸ್ತ ಮೀನುಗಾರ ಸಮಾಜ ತೀವ್ರವಾಗಿ ಖಂಡಿಸುತ್ತದೆ.

ಕಳ್ಳರನ್ನು ಹಿಡಿದು ಕೊಟ್ಟಂತಹ ಮೀನುಗಾರ ಮಹಿಳೆಯರ ಮೇಲೆ ಕೇಸ್ ದಾಖಲು ಮಾಡಿದ್ದು ಎಷ್ಟರಮಟ್ಟಿಗೆ ಸರಿ. ಇದನ್ನು ಪ್ರಶ್ನಿಸಿದ್ದನ್ನೇ ಪ್ರಚೋದನೆ ಎಂದು ಬಿಂಬಿಸಿ ಸುಮೋಟೋ ಪ್ರಕರಣ ದಾಖಲಿಸಿರುವುದು ಹೋರಾಟವನ್ನು ಹತ್ತಿಕ್ಕುವ ತಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮಟ್ಟದ ನಾಯಕನ ಮೇಲೆ ಪ್ರಕರಣ ದಾಖಲಿಸಿರುವುದು ಮೀನುಗಾರ ಸಮುದಾಯವನ್ನು ಹತ್ತಿಕ್ಕುವ ಹುನ್ನಾರವಾಗಿದೆ. ಆದ್ದರಿಂದ ನಮ್ಮ ಹಕ್ಕು ಮತ್ತು ನಾಯಕರ ಸಮಗ್ರತೆ ರಕ್ಷಿಸಲು ದಿಟ್ಟ ನಿರ್ಧಾರ ನಡೆಸಬೇಕಾಗುತ್ತದೆ. ಅಂತೆಯೇ ಸುಮೋಟೋ ಪ್ರಕರಣ ಹಿಂಪಡೆಯದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ರಮೇಶ್, ಬಿ.ಲಿಂಗಯ್ಯ, ಹಾಡ್ಯ ಉಮೇಶ್ ಇತರರಿದ್ದರು.

ಕನ್ನಿಕಾ ನವೋದಯ ವಿದ್ಯಾಸಂಸ್ಥೆಯ 42 ವಿದ್ಯಾರ್ಥಿಗಳು ಆಯ್ಕೆ

ಕನ್ನಡಪ್ರಭ ವಾರ್ತೆ ಮಂಡ್ಯ

ಇಲ್ಲಿನ ಗಾಂಧಿನಗರದ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್‌ ಟ್ರಸ್ಟ್‌ನ 42 ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಸತತ ಎಂಟು ವರ್ಷದಿಂದ ಸಂಸ್ಥೆಯ ಶೇ.50ರಷ್ಟು ವಿದ್ಯಾರ್ಥಿಗಳು ನವೋದಯ ಪರೀಕ್ಷೆಗೆ ಆಯ್ಕೆಯಾಗುತ್ತಿದ್ದಾರೆ.

ಸಂಸ್ಥೆಯಲ್ಲಿ ತರಬೇತಿ ಪಡೆದ ಪುಷ್ಕಲ್ ಎಸ್.ರಮೇಶ್, ಅನಿಲ್.ಎಂ.ಗೌಡ, ಎಂ.ಎಸ್.ಹಿತೇಷ್‌ ಗೌಡ, ಪಿ.ವಿಷ್ಣು, ಕೆ.ಎಂ.ಮೌರ್ಯ, ನೀರಜ್ ಸೂರ್ಯ, ಕೆ.ತೇಜಸ್ ಗೌಡ, ಕೆ.ಎಸ್.ಪ್ರಣಮ್ಯ, ಸುರೇಶ್, ಎಚ್.ಎಂ.ಜ್ಞಾನವಿ, ಅವನಿ. ಜಿ. ಗೌಡ, ರಿತಿಕ್, ರುಚಿಕಾ ಶಿವಾನಂದ್, ಸಿದ್ದಾರ್ಥ, ಟಿ.ಎಸ್. ಭುವನ, ಬಿ.ಆರ್.ಪ್ರಜನ್ಯ, ಪಿ. ಗಾನಿಷ್ಕ, ಎಸ್.ಆರ್.ಸೌರಭ, ಕೆ.ವೈ. ಹರಿಪ್ರಿಯ, ಕೆ.ಕೃತಿಕಾ, ಜೆ.ಶ್ರೇಯ, ಆರ್.ವಿಜಯಸೂರ್ಯ, ನಿಧಿ .ಎಸ್.ಗೌಡ , ಕೆ.ಎಂ.ಲಿಷಾ, ಮಧುಶ್ರೀ, ಭುವನ್ ಆರ್.ಗೌಡ,

ರಿಷಿತಾ.ಎಸ್ , ಪವನ್ ಆದಿತ್ಯ, ಆರ್.ದೈವಿಕ್, ಜಿ.ಎನ್.ಗಣನ್‌ ಇತರರು ನವೋದಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಎಂಟರಿಂದ ಒಂಭತ್ತನೇ ತರಗತಿಗೆ ನಡೆಯುವ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಸಂಸ್ಥೆಯ ಜೆ.ನಿಹಾರಿಕಾ ಆಯ್ಕೆಯಾಗಿದ್ದಾರೆ. ಜೊತೆಗೆ ಜಿಲ್ಲೆಯ ಎಂಟು ಟಾಪರ್‌ಗಳಲ್ಲಿ ಆರು ಟಾಪರ್ ವಿದ್ಯಾರ್ಥಿಗಳು ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ನಲ್ಲಿ ತರಬೇತಿ ಪಡೆದ ಮಕ್ಕಳಾಗಿದ್ದಾರೆ.

ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಮುಖ್ಯಸ್ಥೆ ಎಚ್.ಆರ್.ಕನ್ನಿಕಾ ಶುಭ ಹಾರೈಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ