ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಚನ್ನರಾಯಪಟ್ಟಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಆಗ್ರಹ

KannadaprabhaNewsNetwork |  
Published : Feb 29, 2024, 02:04 AM IST
28ಎಚ್ಎಸ್ಎನ್13 : ಪಟ್ಟಣದಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚನ್ನರಾಯಪಟ್ಟಣದಲ್ಲಿರುವ ಅಂಗಡಿ ಮುಂಗಟ್ಟುಗಳ ಮುಂದೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕವನ್ನು ಹಾಕಬೇಕೆಂದು ಬುಧವಾರ ಡಾ.ರಾಜ್‌ಕುಮಾರ್ ಸಂಘ, ರಕ್ಷಣಾ ವೇದಿಕೆ, ರೈತ ಸಂಘಟನೆ ಮುಖಂಡರು ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.

ಡಾ.ರಾಜ್‌ಕುಮಾರ್‌ ಸಂಘ ಸೇರಿ ವಿವಿಧ ಸಂಘಟನೆಗಳ ಒತ್ತಾಯ । ಪುರಸಭೆ ಮುಖ್ಯಾಧಿಕಾರಿಗೆ ಮನವಿ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದಲ್ಲಿರುವ ಅಂಗಡಿ ಮುಂಗಟ್ಟುಗಳ ಮುಂದೆ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕವನ್ನು ಹಾಕಬೇಕೆಂದು ಬುಧವಾರ ಡಾ.ರಾಜ್‌ಕುಮಾರ್ ಸಂಘ, ರಕ್ಷಣಾ ವೇದಿಕೆ, ರೈತ ಸಂಘಟನೆ ಮುಖಂಡರು ಪುರಸಭೆ ಮುಖ್ಯಾಧಿಕಾರಿ ಹೇಮಂತ್ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಪುಟ್ಟಣ್ಣ ಗೋಕಾಕ್, ಮಧು ಕರಡೇವು, ಸಿ.ಜಿ.ರವಿ ಮಾತನಾಡಿ, ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಖಾಯಂ ಬಗ್ಗೆ ವ್ಯಾಪಾರ ಹಾಗೂ ಎಲ್ಲಾ ಕ್ಷೇತ್ರದ ಮತ್ತು ಸಂಸ್ಥೆಗಳ ನಾಮಫಲಕ ಶೇ.೬೦ ಕನ್ನಡದಲ್ಲಿ ಇರಬೇಕು ಎಂಬುದನ್ನು ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಒಕ್ಕೊರಲಿನ ನಿರ್ಧಾರ ಕೈಗೊಳ್ಳಬೇಕು. ನಾಡಿನಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡ ಪ್ರಪಂಚದ ಅತ್ಯಂತ ಹಿರಿಯ ಶ್ರೀಮಂತ ಭಾಷೆ, ಅನ್ನದ ಭಾಷೆ, ಇದನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಪಟ್ಟಣದಲ್ಲಿ ಶೇ.೬೦ ಕನ್ನಡ ಭಾಷೆ ಇಲ್ಲದ ವಾಣಿಜ್ಯ ಸಂಸ್ಥೆಗಳ ಪರಾನಗಿಯನ್ನು ರದ್ದುಪಡಿಸಿ, ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ. ಸಾರ್ವಜನಿಕವಾಗಿ ಮತ್ತು ಇದಕ್ಕೆ ಸ್ಥಳೀಯ ಸಂಘ ಸಂಸ್ಥೆಗಳು ಬೆಂಬಲ ಸ್ಪಂದನೆ ಇದೆ. ಕಳೆದ ಅಕ್ಟೋಬರ್ ತಿಂಗಳ ಕಡೆಯ ವಾರದಲ್ಲಿ ಭೂಮಿ ಸಂಘದವರು ಪತ್ರಿಕಾಗೋಷ್ಠಿ ನೆಡೆಸಿ ಎಲ್ಲಾ ಅಂಗಡಿಗಳಲ್ಲಿ ಹಿಂದೆ ಡಾ.ರಾಜ್‌ಕುಮಾರ್ ಸಂಘದವರು ನಾಮಫಲಕದಲ್ಲಿ ಕನ್ನಡ ಕಡ್ಡಾಯದ ಬಗ್ಗೆ ತಿಳಸಿದ್ದಾರೆ ಎಂದರು.

ಕನ್ನಡದ ಬಗ್ಗೆ ಎಲ್ಲರೂ ಪಕ್ಷತೀತವಾಗಿ ಶೇ.೬೦ ಕಡ್ಡಾಯಕ್ಕೆ ಅಂಗೀಕಾರದ ನಿರ್ಣಯಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಫೆ.೨೨ ರಂದು ನಡೆದ ಸಭೆಯಲ್ಲಿ ಸರ್ಕಾರವನ್ನು ಅಭಿನಂದಿಸಿದೆ. ಪಟ್ಟಣದಲ್ಲಿ ಶೇ.೬೦ ಕನ್ನಡ ಕಡ್ಡಾಯ ಜಾರಿಗೊಳಿಸಬೇಕು. ಈಗಾಗಲೇ ಸ್ಪಂದಿಸಿರುವ ವಾಣಿಜ್ಯೋದ್ಯಮಿಗಳು, ಸಂಸ್ಥೆಯವರಿಗೆ ಅಭಿನಂದನೆಗಳು. ಗೋಕಾಕ್ ಚಳುವಳಿಯನ್ನು ಆರಂಭಿಸಿದ ಪಟ್ಟಣದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಲು ಅಧಿಕಾರಿಗಳು ಸ್ಪಂದಿಸಬೇಕು ಎಂದರು.

ಮುಖ್ಯಾಧಿಕಾರಿ ಹೇಮಂತ್ ಮನವಿ ಸ್ವೀಕರಿಸಿ ಮಾತನಾಡಿ, ನೂತನ ಅಂಗಡಿ ಪರವಾನಗಿ ಕೊಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಕನ್ನಡದ ನಾಮಫಲಕವಿರಬೇಕು ಎಂದು ಷರತ್ತು ವಿಧಿಸಿ ಪರವಾನಗಿ ಪತ್ರ ನೀಡಲಾಗುತ್ತಿದೆ. ಈಗಾಗಲೇ ಇರುವ ಕಟ್ಟಡಗಳ ಮೇಲೆ ಕಡ್ಡಾಯ ಕನ್ನಡದ ಬಗ್ಗೆ ಆಟೋ ಮೂಲಕ ಪ್ರಚಾರ ಮಾಡಿಸಿ ಸರ್ಕಾರದ ನಿಮಯವನ್ನು ಪಾಲಿಸುವಂತೆ ಅಂಗಡಿ, ಬ್ಯಾಂಕ್ ಹಾಗೂ ವಾಣಿಜ್ಯ ಮಳಿಗೆಯವರಿಗೆ ತಿಳಿಸಲಾಗುತ್ತದೆ ಎಂದರು.

ಶಿವಣ್ಣ ಸೊಪ್ಪಿನಹಳ್ಳಿ, ಪುಟ್ಟೇಗೌಡ, ತಾಂಡವೇಶ್, ಶಿವರಾಜು, ಶಂಕರಲಿಂಗೇಗೌಡ, ಪ್ರೇಮಮ್ಮ, ಸಿ.ಎನ್.ರವಿ, ಶಾಂತರಾಜ್, ಶೆಟ್ಟಿಹಳ್ಳಿ ಶ್ರೀನಿವಾಸ್, ಬಾಬು ಇದ್ದರು.

ಚನ್ನರಾಯಪಟ್ಟಣದಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಲಾಯಿತು.

PREV

Recommended Stories

ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ
ಮೋದಿ ರಸ್ತೆ ಮಾರ್ಗದಲ್ಲಿ ಜನರಿಗೆ ದರ್ಶನ, ಮೆಟ್ರೋದಲ್ಲಿ ಸಂಚಾರ