ಸಂಪುಟ ಸಭೆಯಲ್ಲಿ ಒಳಮೀಸಲಾತಿಗೆ ಒಪ್ಪಿಗೆ ನೀಡಲು ಆಗ್ರಹ

KannadaprabhaNewsNetwork |  
Published : Aug 16, 2025, 12:00 AM IST
ಒಳ ಮೀಸಲಾತಿ ಜಾರಿಗೆ ಆಗಸ್ಟ್ 19 ರಂದು ಬೆಂಗಳೂರಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಬೇಕೆಂದು ಆಗ್ರಹಿಸಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ್ ಅವರಿಗೆ ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ರಾಜ್ಯ ಉಪಾದ್ಯಕ್ಷ ದೇವೀಂದ್ರನಾಥ್ ನಾದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಒಳ ಮೀಸಲಾತಿ ಜಾರಿಗೆ ಆಗಸ್ಟ್ 19 ರಂದು ಬೆಂಗಳೂರಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ರಾಜ್ಯ ಉಪಾದ್ಯಕ್ಷ ದೇವೀಂದ್ರನಾಥ್ ನಾದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಯಾದಗಿರಿ: ಒಳ ಮೀಸಲಾತಿ ಜಾರಿಗೆ ಆಗಸ್ಟ್ 19 ರಂದು ಬೆಂಗಳೂರಲ್ಲಿ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಮಾದಿಗ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಮಿತಿ ರಾಜ್ಯ ಉಪಾದ್ಯಕ್ಷ ದೇವೀಂದ್ರನಾಥ್ ನಾದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ದರ್ಶನಾಪುರ ಭೇಟಿ ಮಾಡಿ ಮನವಿ ಸಲ್ಲಿಸಿದ ಮುಖಂಡರು, ಒಳ ಮೀಸಲಾತಿ ಜಾರಿ ಮಾಡಲು ಆಯಾ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟಿನ ಏಳು ಸದಸ್ಯರ ನ್ಯಾಯಪೀಠ ಸೂಚಿಸಿರುವ ಪ್ರಯುಕ್ತ ಸಂವಿಧಾನ ಉಲ್ಲಂಘನೆ ಮಾಡದೆ ತಕ್ಷಣ ಜಾರಿ ಮಾಡಲು ಸಂಪುಟ ಸಭೆಯಲ್ಲಿ ಅನುಮೋದನೆಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಿದರು.

ಸುಪ್ರೀಂಕೋರ್ಟ್‌ ಆದೇಶ ಮಾಡಿ ಒಂದು ವರ್ಷವಾಗಿದೆ. ಆದರೆ, ಸುಪ್ರೀಂ ಆದೇಶ ಜಾರಿ ಮಾಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸಚಿವರಿಗೆ ವಿವರಿಸಿದರು. ಇದೇ ತಿಂಗಳ 19 ರಂದು ನಡೆಯುವ ಸಂಪುಟ ಸಭೆಯಲ್ಲಿ ನಮ್ಮ 35 ವರ್ಷಗಳ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಹಣಮಂತ ಇಟಗಿ, ಗೋಪಾಲ ದಾಸನಕೇರಿ, ಮಲ್ಲಣ್ಣ ದಾಸನಕೇರಿ, ಲಿಂಗಪ್ಪ ವಡ್ನಳ್ಳಿ, ಶಿವರಾಜ ದಾಸನಕೇರಿ, ಆಂಜಿನೇಯ ಬಬಲಾದಿ, ಚೆನ್ನಯ್ಯ ಮಾಳಿಕೇರಿ, ತಿಪ್ಪಣ್ಣ ಕೊನಿಮನಿ, ಅನಿಲ್ ಕರಾಟೆ, ಚಂದ್ರಶೇಖರ ಕಡೆಸೂರ, ರಾಜಶೇಖರ ಎದುರುಮನಿ, ಶಿವು ಮುದ್ನಾಳ, ಮಲ್ಲಿಕಾರ್ಜುನ ಬಬಲಾದ, ಸಲ್ಮಾನ್ ಯಡ್ಡಳ್ಳಿ, ಮರಲಿಂಗ ಜಿನಕೇರಿ, ಅಜಯಕುಮಾರ ಮೀಸಿ, ಮಹಾದೇವ ಧರೇನ್ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ