ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸಲು ಆಗ್ರಹ

KannadaprabhaNewsNetwork |  
Published : Oct 24, 2025, 01:00 AM IST
ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂದಿಸದಿದ್ದರೆ ಭೀಮ ಆರ್ಮಿಯಿಂದ ಪ್ರತಿಚಟುವಟಿಕೆ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸದಿದ್ದರೆ ಭೀಮ್ ಆರ್ಮಿಯಿಂದ ಪಥಸಂಚಲನ ನಡೆಸಬೇಕಾಗುತ್ತದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಆಯ್ಯನಪುರ ಶಿವಕುಮಾರ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲೆಯಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಿಸದಿದ್ದರೆ ಭೀಮ್ ಆರ್ಮಿಯಿಂದ ಪಥಸಂಚಲನ ನಡೆಸಬೇಕಾಗುತ್ತದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿಯ ಆಯ್ಯನಪುರ ಶಿವಕುಮಾರ್ ಎಚ್ಚರಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ನವರು ನಮ್ಮ ರಾಷ್ಟ್ರಗೀತೆ, ಸಂವಿಧಾನ, ಪ್ರಜಾಪ್ರಭುತ್ವ ಒಪ್ಪುವುದಿಲ್ಲ. ನಮ್ಮ ಸಮಾನತೆ ಒಪ್ಪುವುದಿಲ್ಲ ಅಂದ ಮೇಲೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಗೆ? ಎಂದರು.

ಸರ್ವಧರ್ಮದವರು ನಾವೆಲ್ಲರೂ ಸಹೋದರತೆಯಿಂದ ಬಾಳಬೇಕು. ಆರ್‌ಎಸ್‌ಎಸ್‌ ಕಚೇರಿಯಲ್ಲಿ ನಮ್ಮ ರಾಷ್ಟ್ರಧ್ವಜ ಹಾರಿಸದೆ ಪ್ರತ್ಯೇಕ ಧ್ವಜ ಹಾರಿಸುತ್ತಾರೆ. ಅದಕ್ಕೆ ಈ ದೇಶದಲ್ಲಿ ಅವಕಾಶ ಇದೆಯೇ. ನಮ್ಮ ದೇಶದಲ್ಲಿ ಸುಭದ್ರ ಸಂವಿಧಾನದಿಂದ ದೇಶ ಉತ್ತಮವಾಗಿದೆ, ಇವರು ಸಂವಿಧಾನ ವಿರೋಧಿಗಳು. ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು, ಒಂದು ವೇಳೆ ಅವಕಾಶ ಕೊಟ್ಟರೆ ಗುಲ್ಬರ್ಗಾ ಜಿಲ್ಲೆಯ ಮಾದರಿಯಲ್ಲಿ ಭೀಮ ಪಥಸಂಚಲನ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರುಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆಯಲು ಯತ್ನಿಸಿದ ಪ್ರಕರಣ ಖಂಡಿಸಿ ಅ. ೧೮ರಂದು ಕರೆ ನೀಡಿದ ಚಾಮರಾಜನಗರ ಸ್ವಯಂಪ್ರೇರಿತ ಬಂದ್ ವಿಫಲಗೊಳಿಸಲು ಆರ್‌ಎಸ್‌ಎಸ್ ಕಾರ್ಯಕರ್ತರು ಪರೋಕ್ಷವಾಗಿ ಯತ್ನಿಸಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಪದಗಳನ್ನು ಉಪಯೋಗಿಸಿದ್ದಾರೆ. ಇದನ್ನು ಬಹಿರಂಗಪಡಿಸಿದ್ದರೆ ಕೋಮೂ ಸಂಘರ್ಷಕ್ಕೆ ದಾರಿಯಾಗುತ್ತಿತ್ತು ಎಂದರು.

ವಿಡಿಯೋ ಒಂದನ್ನು ಎಡಿಟ್ ಮಾಡಿ, ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಕೆಲವರನ್ನು ಎತ್ತಿಕಟ್ಟಿ ಪ್ರಚೋದಿಸಿದ್ದಾರೆ, ಆದರೆ ನಾವು ಯಾವುದೇ ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ. ನಮ್ಮ ಮನವಿಗೆ ಎಲ್ಲರೂ ಸ್ಪಂದಿಸಿ ಸ್ವಯಂ ಬಂದ್ ಮಾಡಿ ಯಶಸ್ಸುಗೊಳಿಸಿದ್ದಾರೆ. ಇದಕ್ಕಾಗಿ ನಾವು ಕೃತಜ್ಷತೆ ಸಲ್ಲಿಸುತ್ತೇವೆ ಎಂದರು.

ಅಂಗಡಿ ತೆರವುಗೊಳಿಸಲು ಆಗ್ರಹ:

ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡಿದ್ದು, ನಗರಸಭಾ ಕಚೇರಿಯ- ಅಂಗಡಿ ಮಳಿಗೆಯಲ್ಲಿ ನಟರಾಜು ಎಂಬುವರು ಆರ್‌ಎಸ್‌ಎಸ್ ಸಮವಸ್ತ್ರ ಮಾರಾಟ ಮಾಡುವ ಮೂಲಕ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡು ಗುಂಡಾವರ್ತನೆ ತೋರಿಸುತ್ತಿದ್ದಾರೆ. ಕೂಡಲೇ ನಗರಸಭಾಧ್ಯಕ್ಷ, ಜಿಲ್ಲಾಧಿಕಾರಿಗಳು ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಪಂ ಮಾಜಿ ಅಧ್ಯಕ್ಷ ಆರ್.ಮಹದೇವು ಮಾತನಾಡಿ, ಬಂದ್‌ಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶಸ್ವಾಮಿಜೀ ಹಾಗೂ ಎಲ್ಲ ಸಮುದಾಯದ ಮುಖಂಡರು, ಸಂಘ, ಸಂಸ್ಥೆಗಳು, ಎಲ್ಲ ರಾಜಕೀಯ ಪಕ್ಷದವರು, ವರ್ತಕರು, ರೈತ, ವಿವಿಧ ಕನ್ನಡಪರ ಸಂಘಟನೆಗಳು, ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಎಸ್‌ಡಿಪಿಐ, ಗಡಿಮನೆ, ಕಟ್ಟೆಮನೆ ಯಜಮಾನರು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿ ಮಾಡಿಕೊಟ್ಟಿದ್ದಾರೆ. ಅವರಿಗೆಲ್ಲ ಸಂವಿಧಾನ ಸಂರಕ್ಷಣಾ ಸಮಿತಿಯು ಈ ಮೂಲಕ ಅಭಿನಂದನೆ ಸಲ್ಲಿಸುತ್ತದೆ ಎಂದರು.

ನಲ್ಲೂರು ಸೋಮೇಶ್ವರ ಮಾತನಾಡಿ, ಸಾಮಾಜಿಕ ಜಾಲತಾಣದ ಹಾಕುವ ಮೂಲಕ ಅಗೌರವ ತೋರಿಸಿರುವ ನಗರಸಭಾ ಸದಸ್ಯ ಶಿವರಾಜ್ ವಿರುದ್ದ ಪ್ರಕರಣ ದಾಖಲಿಸಿಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಮುಖಂಡರಾದ ರಂಗಸ್ವಾಮಿ, ನಾಗಯ್ಯ, ಯ. ಸೋಮಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ