ಕಾಳಗಿ: ತಾಲೂಕಿನ ಸಾಲಹಳ್ಳಿ ಬಸ್ ನಿಲ್ದಾಣವು ಶಿಥಿಲಾವಸ್ಥೆಗೆ ತಲುಪಿದೆ. ಆದರೆ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನಾದರೂ ಹೊಸ ಬಸ್ ನಿಲ್ದಾಣ ನಿರ್ಮಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಾಲಹಳ್ಳಿ (ಕೆ) ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಇದು ತಾಲೂಕು, ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿರುವುದರಿಂದ ಇಗಿರುವ ಬಸ್‌ನಿಲ್ದಾಣ ದುರಸ್ಥಿಗೊಳಿಸ ನೂತನ ಬಸ್ ನಿಲ್ದಾಣ ಅಗತ್ಯವಿದೆ. ಹಿಂದೆ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ಬಾಬುರಾವ ಚಿಂಚನಸೂರ ಅವರ ಅವಧಿಯಲ್ಲಿ ನಿರ್ಮಾಣಗೊಂಡಿದ್ದು ಇಲ್ಲಿಯವರೆಗೆ ೨೦ ವರ್ಷದ ಹಳೆಯ ಕಟ್ಟಡವಿದ್ದು ಬಳಸುವುದಕ್ಕೆ ಯೋಗ್ಯವಿಲ್ಲದಂತಾಗಿದೆ. ಸಾಲಹಳ್ಳಿ ಜನರು ಶಾಸಕರಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಬೇಸರಿಸಿದ್ದಾರೆ.
ಚಿಂಚೋಳಿ ಮತಕ್ಷೇತ್ರದಿಂದ ಎರಡ್ಮೂರ ಶಾಸಕರು ಬಂದರೂ ಬಸ್ ನಿಲ್ದಾಣದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರಯಾಣಿಕರು ಹಾಗೂ ಗ್ರಾಮಸ್ಥರು ಮಳೆ ಗಾಳಿ, ಚಳಿ, ಬಿಸಿಲಿನಲ್ಲಿ ನಿಂತು ಬಸ್ ಹತ್ತಬೇಕಾದ ಸ್ಥಿತಿಯಿದೆ. ಹೀಗಾಗಿ ಇನ್ನಾದರೂ ಅಧಿಕಾರಿಗಳು ಹೊಸ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಯುವ ನಾಯಕ ಸಂತೋಷ ಹುಳಗೇರಿ ಒತ್ತಾಯಿಸಿದ್ದಾರೆ.ಸ್ವತಂತ್ರ ಬಂದು ಏಪ್ಪತ್ತೇಂಟು ವರ್ಷಗಳು ಗತಿಸಿದರು ಸಾಲಹಳ್ಳಿ ಗ್ರಾಮಕ್ಕೆ ಬಸ್ ನಿಲ್ದಾಣ ಇಲ್ಲದಂತಾಗಿದೆ. ಈ ಗ್ರಾಮದ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಅಧಿಕಾರ ಯಾರದಾದರೂ ಇರಲಿ ಗ್ರಾಮದ ಅಭಿವೃದ್ಧಿಗೆ ಸಹಕರಿಸುವುದು ಅಗತ್ಯವಿದೆ ಎಂದಿದ್ದಾರೆ.