ಚನ್ನಪಟ್ಟಣ: ತಾಲೂಕಿನ ಕೋಲೂರು ಗ್ರಾಮದ ಸರ್ಕಾರಿ ಜಾಗದಲ್ಲಿ ಜನಪ್ರತಿನಿಧಿಗಳ ಕ್ಷೇತ್ರಾಭಿವೃದ್ಧಿ ಅನುದಾನದಡಿ ನಿರ್ಮಿಸುತ್ತಿರುವ ಸಾಂಸ್ಕೃತಿಕ ಭವನಕ್ಕೆ ಖಾಸಗಿ ವ್ಯಕ್ತಿ ಹೆಸರಿಡುವುದನ್ನು ವಿರೋಧಿಸಿ, ಅನುದಾನದ ಲೆಕ್ಕಪತ್ರ ಮಂಡಿಸಬೇಕು ಎಂದು ಕೋಲೂರು ಗ್ರಾಮಸ್ಥರು ಆಗ್ರಹಿಸಿದರು.
ಕೆಲ ವರ್ಷಗಳ ಹಿಂದೆ ಟ್ರಸ್ಟ್ ರಚಿಸಿಕೊಂಡು ಭವನ ನಿರ್ಮಿಸಲಾಗಿದೆ. ಭವನದ ಹೆಸರಿನ ಎಲ್ಲಾ ದಾಖಲೆಗಳಲ್ಲಿ ಸಾಂಸ್ಕೃತಿಕ ಭವನ ಎಂದೇ ಇದೆ. ಇದೀಗ ಉದ್ಘಾಟನೆ ಆದ ಬಳಿಕ ಭವನಕ್ಕೆ ಕೆ.ಪಿ.ಭವನ ಎಂದು ಹೆಸರಿಡುವುದು ನಿಯಮ ಬಾಹಿರ. ಈ ಬಗ್ಗೆ ಜಿಪಂ ಸಿಇಒ ಹಾಗೂ ತಾಪಂ ಇಒ ಅವರ ಗಮನಕ್ಕೆ ತಂದು, ಜತೆಗೆ ಗ್ರಾಪಂ ಸಭೆಯಲ್ಲೂ ಹೆಸರು ತೆರವು ಮಾಡಲು ಸೂಚಿಸಲಾಗಿತ್ತು. ಆದರೆ ಇದೀಗ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಸಹ ನಿರ್ಣಯ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಜಿಲ್ಲಾ ಪಂಚಾಯ್ತಿಯ ಸಿಇಒ ಅವರೆ ಕಾರಣವಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಮಾಜಿ ಸದಸ್ಯ ಮಹೇಶ್, ಯಜಮಾನ್ ಶಂಕರೇಗೌಡ, ಪುಟ್ಟರಾಜು, ರಾಮಚಂದ್ರು, ಮಹೇಶ್, ಶಿವರಾಮು, ಶಿವಲಿಂಗಯ್ಯ, ಮರಿಯಪ್ಪ, ಮರಿದೇವರು, ಉಮಾಶಂಕರ್, ಗೋಪಾಲಕೃಷ್ಣ, ಮದುಕುಮಾರ್, ದೊರೆಸ್ವಾಮಿ, ಸುಮಂತ್ ಇತರರಿದ್ದರು.ಪೊಟೋ೧೯ಸಿಪಿಟಿ:
ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮಸ್ಥರು ಗ್ರಾಮದಲ್ಲಿ ಸಾಂಸ್ಕೃತಿಕ ಭವನಕ್ಕೆ ಹೆಸರಿಡುವುದನ್ನು ವಿರೋಧಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.