ತೊಂಡಿತೇವರಪ್ಪ ದೇವಸ್ಥಾನ ಪ್ರದೇಶ ಸ್ವಚ್ಛಗೊಳಿಸಲು ಆಗ್ರಹ

KannadaprabhaNewsNetwork |  
Published : Mar 26, 2026, 02:30 AM IST
ಪೋಟೋಮಲೀನಗೊಂಡಿರುವ ಇತಿಹಾಸ ಪ್ರಸಿದ್ಧ ತೊಂಡಿತೇವರಪ್ಪ ದೇವಸ್ಥಾನ ಪ್ರದೇಶವನ್ನು ಸ್ವಚ್ಛಗೊಳಿಸುವಂತೆ ಆಗ್ರಹಿಸಿ ಹನುಮ ಮಾಲಾ ಸೇವಾ ಸಮಿತಿಯಿಂದ ಪ.ಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿಗೆ ಮನವಿ ಸಲ್ಲಿಸಲಾಯಿತು.    | Kannada Prabha

ಸಾರಾಂಶ

ಹಲವು ದಿನಗಳಿಂದ ತೊಂಡಿತೇವರಪ್ಪ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶ ಮಲೀನಗೊಂಡಿದೆ

ಕನಕಗಿರಿ: ಮಲೀನಗೊಂಡಿರುವ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ತೊಂಡಿತೇವರಪ್ಪ ದೇವಸ್ಥಾನ ಪ್ರದೇಶವನ್ನು ಸ್ವಚ್ಛಗೊಳಿಸಲು ಆಗ್ರಹಿಸಿ ಬುಧವಾರ ಹನುಮ ಮಾಲಾ ಸೇವಾ ಸಮಿತಿಯಿಂದ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹನುಮ ಮಾಲಾಧಾರಿ ಶ್ರೀನಿವಾಸ ಗಂಗಾಮತ ಮಾತಾನಾಡಿ, ಹಲವು ದಿನಗಳಿಂದ ತೊಂಡಿತೇವರಪ್ಪ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶ ಮಲೀನಗೊಂಡಿದೆ. ಇದರಿಂದ ಸೊಳ್ಳೆ ಹಾಗೂ ನೊಣಗಳ ಕಾಟ ಹೆಚ್ಚಾಗಿದ್ದು, ಭಕ್ತರಿಗೆ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ಅದಕ್ಕಾಗಿ ಕೂಡಲೇ ಸ್ವಚ್ಛತೆಗೆ ಹಾಗೂ ಬೀಚಿಂಗ್ ಪೌಡರ್ ಸಿಂಪರಣೆ ಮಾಡಬೇಕು ಎಂದು ಆಗ್ರಹಿಸಿದರು.

ಪಪಂ ಸಿಬ್ಬಂದಿ ಕನಕಪ್ಪ ನಾಯಕ, ಪ್ರಕಾಶ ಮಹಿಪತಿ, ವೆಂಕಟೇಶ ಬಲಿಜ, ಕನಕರೆಡ್ಡಿ ಎಂ., ವಿರೂಪಾಕ್ಷ ಹಡಪದ, ಬಸವರಾಜ ಪಗಡದಿನ್ನಿ, ಸಂಪತ್ ಕುಮಾರ್, ನರಸಪ್ಪ ದಾಸರ್, ಯಮನೂರಪ್ಪ, ಶ್ರೀನಿವಾಸ ಸೇರಿದಂತೆ ಇತರರಿದ್ದರು.

ತೊಂಡಿತೇವರಪ್ಪನ ದೇಗುಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅಂತರ್ಜಲ ಕುಸಿತವಾಗಿದ್ದು, ಬೊರ್‌ವೆಲ್‌ಗಳಲ್ಲಿ ನೀರಿಲ್ಲ. ದೇವಸ್ಥಾನಕ್ಕೆ ಬರುವ ನೂರಾರು ಭಕ್ತರಿಗೆ ನೀರಿನ ಅಭಾವ ಉಂಟಾಗಿದೆ. ಕೂಡಲೇ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಭಕ್ತ ಚೇತನ್ ಬ್ಯಾಳಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಳ ಮೀಸಲಾತಿ ತಕ್ಷಣ ಜಾರಿಗಾಗಿ ಮಾದಿಗ ಸಮುದಾಯದ ಪ್ರತಿಭಟನೆ
ಆಲಿಕಲ್ಲು ಮಳೆಗೆ ನೂರಾರು ಎಕರೆ ಕಲ್ಲಂಗಡಿ, ಪಪ್ಪಾಯಿ ಬೆಳೆಹಾನಿ