ಗುತ್ತಲ: ಪಟ್ಟಣದ ಜಾನುವಾರುಗಳ ಕುಡಿಯುವ ನೀರಿನ ಮೂಲವಾಗಿದ್ದ ಹೊಂಡಗಳು ಪ್ರಸ್ತುತ ಪಿಶಾಚಿ ಕಳೆಯಿಂದ ತುಂಬಿದ್ದು, ಜಾನುವಾರುಗಳು ಕುಡಿಯಲು ನೀರಿಲ್ಲದೆ ನಿತ್ಯ ನರಳಾಡುವಂತಾಗಿದೆ. ಕೂಡಲೇ ಎರಡು ಹೊಂಡಗಳನ್ನು ಸ್ವಚ್ಛಗೊಳಿಸುವಂತೆ ಉಪತಹಸೀಲ್ದಾರ್ ಸವಿತಾ ಹಿರೇಮಠ ಅವರಿಗೆ ಸ್ವಾಭಿಮಾನಿ ಕರವೇ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.
ಪಟ್ಟಣದಲ್ಲಿ 9.06 ಎಕರೆ ಪ್ರದೇಶದಲ್ಲಿ ದೊಡ್ಡ ಹಾಗೂ ಸಣ್ಣ ಹೊಂಡಗಳಿವೆ. ಈ ಎರಡು ಹೊಂಡಗಳಲ್ಲಿ ಕಳೆದ 2- 3 ವರ್ಷಗಳಿಂದ ಪಿಶಾಚಿ ಕಳೆ ಬೆಳೆಯುತ್ತಿದೆ. ಇದರಿಂದ ಪಟ್ಟಣದ ಸಾವಿರಾರು ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ತೊಂದರೆಯಾಗಿದೆ. ಅಲ್ಲದೆ ಈ ಎರಡು ಹೊಂಡಗಳ ಸುತ್ತಮುತ್ತಲಿನ ನಿವಾಸಿಗಳಿಗೂ ತೀವ್ರ ತೊಂದರೆಯಾಗಿದೆ.ಕೆಲವು ಹೊಂಡಗಳಿಗೆ ಕಸವನ್ನು ಎಸೆಯುತ್ತಾ ಹೊಂಡಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಹೊಂಡಗಳನ್ನು ಶುಚಿಗೊಳಿಸಬೇಕು. ಇಲ್ಲದಿದ್ದರೆ ಶೀಘ್ರ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಸ್ವಾಭಿಮಾನಿ ಕರವೇ ಉತ್ತರ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ನಾಗರಾಜ ಮಡಿವಾಳರ, ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಜೋಶಿ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಗೋಣೆಮ್ಮನವರ, ತಾಲೂಕು ಅಧ್ಯಕ್ಷ ಆನಂದ ಮುರಡಪ್ಪನವರ, ತಾಲೂಕು ಪ್ರಧಾನ ಕಾರ್ಯದರ್ಶಿ ನಾಗರಾಜ ಸಿದ್ದಣ್ಣನವರ, ಗುತ್ತಲ ನಗರ ಘಟಕದ ಅಧ್ಯಕ್ಷ ನಿಂಗರಾಜ ಮರಡಿ, ಉಪಾಧ್ಯಕ್ಷ ಶಿವರಾಜ ಗಿರಿಯಪ್ಪನವರ, ಪ್ರಧಾನ ಕಾರ್ಯದರ್ಶಿ ವಿನಾಯಕ ಗಿರಿಯಪ್ಪನವರ, ಯುವ ಘಟಕದ ಅಧ್ಯಕ್ಷ ವಿನೋದ ಆಣೂರ, ಬೀರಪ್ಪ ಕರಬಣ್ಣನವರ, ಗೋಪಾಲ ಬಡಿಗೇರ, ಗುಡ್ಡಪ್ಪ ಮರಡಿ, ಡಾಕಪ್ಪ ಲಮಾಣಿ, ದೇವರಾಜ ಹೊನ್ನಪ್ಪನವರ ಇತರರು ಇದ್ದರು.ಸರ್ವಸಮಾಜದ ಏಳಿಗೆಗೆ ಶ್ರಮಿಸಿದ ಶರಣಬಸಪ್ಪ ಅಪ್ಪಶಿಗ್ಗಾಂವಿ: ಕಲಬುರಗಿಯ ಲಿಂ. ಶರಣಬಸಪ್ಪ ಅಪ್ಪ ಅವರು ಸರ್ವ ಸಮಾಜಗಳ ಅಭಿವೃದ್ಧಿಗಾಗಿ ಶ್ರಮಿಸಿದರು. ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಸದಾಶಿವಪೇಟೆ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದ ಶಿವದೇವ ಶರಣ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸದಾಶಿವಪೇಟೆ ಗ್ರಾಮದ ಶರಣಬಸವೇಶ್ವರ ದಾಸೋಹ ಮಠದಲ್ಲಿ ನಡೆದ ಕಲಬುರಗಿ ತ್ರಿವಿಧ ದಾಸೋಹಿ ಲಿಂ. ಶರಣಬಸಪ್ಪ ಅಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕಾಲ, ಕಾಲಕ್ಕೆ ಮಹಾತ್ಮರು ಜನಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅಂತಹ ಮಹಾತ್ಮರು, ಶಿವಶರಣ ಶ್ರಮದ ಫಲವಾಗಿ ಮನುಷ್ಯ ಎಲ್ಲ ರಂಗಗಳಲ್ಲಿ ಬೆಳವಣಿಗೆ ಹೊಂದುತ್ತಿದ್ದಾರೆ ಎಂದರು.ಮುಖಂಡರಾದ ಸಿ.ವಿ. ಕಿವುಡನವರ, ಗುರುಲಿಂಗಯ್ಯ ನಂದಿಮಠ, ಸಂಗಪ್ಪ ವಡವಿ, ಶರಣಪ್ಪ, ಈರಣ್ಣ ಅತ್ತಿಗೇರಿ, ಶಂಭಣ್ಣ, ಮಹೇಶ ಹೊಳಲಾಪುರ, ಶಂಕರ ಭಾಗಣ್ಣವರ, ಶರಣಬಸವ ಕಿವುಡನವರ, ರಾಚಪ್ಪ ಕಿವುಡನವರ, ಶಿವಾನಂದ ಕಿವುಡನವರ, ಕುಮಾರಸ್ವಾಮಿ, ಬಸವಣ್ಣೆಪ್ಪ ಕಿವುಡನವರ ಸೇರಿದಂತೆ ಅಕ್ಕನ ಬಳಗದ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.