ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕಲು ಆಗ್ರಹ

KannadaprabhaNewsNetwork |  
Published : Oct 26, 2024, 01:03 AM IST
ಇಲ್ಲಿಯ ಜೈಹಿಂದ ಕ್ರೀಡಾಂಗಣದಲ್ಲಿ ಅಕ್ಟೋಬರ್25 ರಿಂದ ಅಕ್ಟೋಬರ್29 ವರೆಗೆ ಆಯೋಜಿಸಲಾಗಿರುವ ಬಾರ್ಡೋಲಿ ಉತ್ಸವದಲ್ಲಿ ರಾತ್ರಿ10 ಗಂಟೆಯಿAದ ಬೆಳಿಗ್ಗೆ 6ಗಂಟೆಯ ಒಳಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡದಂತೆ ಒತ್ತಾಯಿಸಿ ನಾಗರಿಕರು ತಹಸೀಲ್ದಾರ ಹಾಗೂ ಪೊಲೀಸ್ ಇಲಾಖೆಗೆಗ ಮನವಿ ಸಲ್ಲಿಸಿ ಒತ್ತಾಯಿಸಿದರು. | Kannada Prabha

ಸಾರಾಂಶ

ಸವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಧ್ವನಿವರ್ಧಕ ಬಳಸದಂತೆ ಸುಪ್ರಿಂ ಕೋರ್ಟ್‌ನ ನಡಾವಳಿ ಇದೆ. ಬಾರ್ಡೋಲಿ ಉತ್ಸವದಲ್ಲಿ ಧ್ವನಿವರ್ಧಕವನ್ನು ಅವಧಿಯ ಒಳಗೆ ಉಪಯೋಗಿಸದಂತೆ ನಿರ್ಬಂಧಿಸಬೇಕು.

ಅಂಕೋಲಾ: ಇಲ್ಲಿಯ ಜೈಹಿಂದ ಕ್ರೀಡಾಂಗಣದಲ್ಲಿ ಅ. 25ರಿಂದ ಅ. 29ರ ವರೆಗೆ ಆಯೋಜಿಸಲಾಗಿರುವ ಬಾರ್ಡೋಲಿ ಉತ್ಸವದಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ಒಳಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡದಂತೆ ಒತ್ತಾಯಿಸಿ ನಾಗರಿಕರು ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆಗ ಮನವಿ ಸಲ್ಲಿಸಿ ಒತ್ತಾಯಿಸಿದರು.ಸವೋಚ್ಛ ನ್ಯಾಯಾಲಯದ ಆದೇಶದಂತೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವಗರೆಗೆ ಯಾವುದೇ ಧ್ವನಿವರ್ಧಕ ಬಳಸದಂತೆ ಸುಪ್ರಿಂ ಕೋರ್ಟ್‌ನ ನಡಾವಳಿ ಇದೆ. ಈ ಉತ್ಸವದಲ್ಲಿ ಧ್ವನಿವರ್ಧಕವನ್ನು ಅವಧಿಯ ಒಳಗೆ ಉಪಯೋಗಿಸದಂತೆ ನಿರ್ಬಂಧಿಸಬೇಕು. ಉತ್ಸವ ನಡೆಯುವ ಸುತ್ತಮುತ್ತಲಿನ ಮನೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಶಾಲಾ- ಕಾಲೇಜುಗಳ ಮಕ್ಕಳಿದ್ದಾರೆ.

ಗರ್ಭಿಣಿಯರು, ವೃದ್ದರು, ಅನಾರೋಗ್ಯದಿಂದ ಬಳಲುತ್ತಿರುವ ಈ ಮುಂತಾದ ಎಲ್ಲ ಕೆಟಗರಿಗಳ ಜನರು ವಾಸ್ತವ್ಯ ಮಾಡುತ್ತಿರುವುದರಿಂದ ಕಾನೂನು ಮೀರಿ ಧ್ವನಿವರ್ಧಕಗಳನ್ನು ಉಪಯೋಗಿಸಿದಲ್ಲಿ ಸುತ್ತಮುತ್ತಲಿನ ಜನರಿಗೆ ಹಾಗೂ ಊರ ನಾಗರಿಕರಿಗೆ ತುಂಬಾ ತೊಂದರೆ ಉಂಟಾಗಿ ಅವರ ಆರೋಗ್ಯ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ಹಾಗೂ ವೃದ್ಧರು, ಮಕ್ಕಳು ಮಾನಸಿಕ ಕಿರಿಕಿರಿ ಅನುಭವಿಸುವ ಸಾಧ್ಯತೆ ಇದೆ ಎಂದರು.ಕಳೆದ ಜು. 16ರಂದು ಶಿರೂರು ಗುಡ್ಡ ಕುಸಿತ ಸಂಭವಿಸಿತ್ತು. ಘಟನೆಯಲ್ಲಿ ಗಂಗಾವಳಿ ನದಿಯಲ್ಲಿ ಕೊಚ್ಚಿಹೊದ 11 ಜನ ಜೀವಂತ ಸಮಾಧಿಯಾಗಿದ್ದು, ಇವರಲ್ಲಿ 9 ಜನರ ಮೃತದೇಹ ಮತ್ತು ಅದರ ಅವಶೇಷಗಳು ದೊರೆತಿದ್ದು, ಇನ್ನು 2 ಜನರ ಮೃತದೇಹ ದೊರೆಯಬೇಕಿದ್ದು, ಈ ಸಂದರ್ಭದಲ್ಲಿ ಅಂಕೋಲಾ ತಾಲೂಕು ಶೋಖದ ಛಾಯೆಯಲ್ಲಿದೆ. ಇಂಥ ಪರಿಸ್ಥಿತಿಯಲ್ಲಿ ಈ ಉತ್ಸವಗಳನ್ನು ನಡೆಸುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.ಈ ಸಂದರ್ಭದಲ್ಲಿ ವಿಶ್ವಂಬರ ಬೊಬ್ರಕರ, ರಾಮಾ ನಾಯ್ಕ, ಅಶೋಕ ಆಗೇರ, ನಾಗರಾಜ್ ಗೌಡ, ಮಾಣಿ ಗೌಡ, ಪ್ರಶಾಂತ ನಾಯ್ಕ ನಾಗರಾಜ್ ನಾಯಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ