ಹಾನಗಲ್ಲ: ಶಾಸಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಡುವಂತೆ ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಕೇಂದ್ರ ಮಟ್ಟದ ಹೈಕಮಾಂಡಗೆ ಮನವಿ ಮಾಡಿದ್ದು, ಅವರಿಗೆ ಸಚಿವ ಸ್ಥಾನ ದೊರೆತಲ್ಲಿ ಪಕ್ಷ ಹಾಗೂ ರಾಜ್ಯ ಹಿತಕ್ಕೆ ಸಹಕಾರಿ ಎಂದು ತಾಲೂಕು ಗ್ಯಾಂರಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ತಿಳಿಸಿದರು.
ಶಾಸಕ ಶ್ರೀನಿವಾಸ ಮಾನೆ ಅವರ ಕ್ರಿಯಾಶೀಲತೆಯಿಂದಾಗಿ ಹಾನಗಲ್ಲ ತಾಲೂಕಿನ ಅಭಿವೃದ್ಧಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ಸಚಿವರಾದಲ್ಲಿ ಇಡೀ ಜಿಲ್ಲೆಯ ಹಿತಕ್ಕೆ ಶ್ರಮಿಸಬಲ್ಲದು. ಹಾವೇರಿ ಜಿಲ್ಲೆಯ ಎಲ್ಲ ವಿಧಾನಸಭೆ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಹಾವೇರಿ ಜಿಲ್ಲೆ ಬಿಜೆಪಿ ಮುಕ್ತ ಮಾಡಿದ ಈ ಸಂದರ್ಭದಲ್ಲಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ದೊರೆಯಬೇಕು. ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ರಿಯಾಶೀಲರಾದ ಶ್ರೀನಿವಾಸ ಮಾನೆ ಅವರನ್ನು ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವ ಅವಕಾಶ ನೀಡಬೇಕು ಎಂದು ಹೈಕಮಾಂಡಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಪರಶುರಾಮ ಖಂಡೂನವರ, ಎಪಿಎಂಸಿ ನಿರ್ದೇಶಕ ಗುರುರಾಜ ನಿಂಗೋಜಿ, ಆರಾಧನಾ ಸಮಿತಿ ಸದಸ್ಯ ವಸಂತ ವೆಂಕಟಾಪುರ, ಪುರಸಭೆ ನಾಮ ನಿರ್ದೇಶಿತ ಸದಸ್ಯ ಮೇಕಾಜಿ ಕಲಾಲ, ಸುರೇಶ ನಾಗಣ್ಣನವರ, ಟ್ರುಬುನಲ್ ಮೆಂಬರ್ ಖಂಡೂಜಿ ಭೋಸ್ಲೆ, ಗ್ಯಾರಂಟಿ ಸಮಿತಿ ಸದಸ್ಯ ಇರ್ಫಾನ ಮಿಠಾಯಿಗಾರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಖಾಲೀದ ಶೇಷಗಿರಿ, ಕೆಡಿಪಿ ಸದಸ್ಯರಾದ ಮಹಮ್ಮದ್‌ಹನೀಫ್ ಬಂಕಾಪೂರ, ರಾಜೇಶ್ ಚೌಹಾಣ ಇದ್ದರು.