ಒಪಿಎಸ್ ನಿಶ್ಚಿತ ಪಿಂಚಣಿ ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಗದಗ: ಒಪಿಎಸ್ ನಿಶ್ಚಿತ ಪಿಂಚಣಿ ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, 2006ರ ನಂತರ ನೇಮಕವಾಗಿರುವ ಸಿಬ್ಬಂದಿ 60 ವರ್ಷಗಳ ಕಾಲ ನಿಷ್ಠೆಯಿಂದ ತಮ್ಮ ಕಾರ್ಯವನ್ನು ಜವಾಬ್ದಾರಿಯಿಂದ ಮಾಡಿ ಇಳಿವಯಸ್ಸಿನಲ್ಲಿ ನಿವೃತ್ತಿ ಹೊಂದಿ ಆರೋಗ್ಯದೊಂದಿಗೆ ಬದುಕಲು ಪ್ರಯತ್ನಿಸುವ ನೌಕರರಿಗೆ ನಿಶ್ಚಿತ ಪಿಂಚಣಿ ಇಲ್ಲದ್ದು ಆಘಾತ ಹಾಗೂ ಖೇದಕರ. ರಾಜ್ಯ ಸರ್ಕಾರ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಸಾಮಾನ್ಯ ಜನರ ಆಸರೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಕೂಡ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ. ಆದ್ದರಿಂದ ಸರ್ಕಾರದ ಮಹತ್ವಪೂರ್ಣ ಯೋಜನೆಯಲ್ಲಿ ಈ ಒಪಿಎಸ್ ಅನ್ನು ಪ್ರಥಮ ಬೇಡಿಕೆಯನ್ನಾಗಿ ಪರಿಗಣಿಸಿ ತಕ್ಷಣದಿಂದ ಜಾರಿ ಮಾಡುವುದರೊಂದಿಗೆ ಲಕ್ಷಾಂತರ ನೌಕರ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಮೋಹನ ಲಿಂಬಿಕಾಯಿ, ರವಿ ಬಿ. ದಂಡಿನ, ಎ.ಎಸ್. ಪಾಟೀಲ, ಬಿ.ಡಿ. ಯರಗೊಪ್ಪ, ದನೇಶ ನಾಯಕ, ಡಿ.ಜಿ. ಪೂಜಾರ, ಮಂಜುನಾಥ ತೆಗ್ಗಿನಮನಿ, ಬಿ.ಸಿ. ಗುಳೇದ, ಟಿ.ಆರ್. ನಾಯಕ, ಪಿ.ಎನ್. ಹಿರೇಮಠ, ಶರಣು ಡಣಾಪೂರ, ಝಡ್.ಎಂ. ಖಾಜಿ, ಆರ್.ವಿ. ಗೊಂಡಬಾಳ, ಬೂದಪ್ಪ ಅಂಗಡಿ, ಬಿ.ಕೆ. ನಿಂಬನಗೌಡ್ರ, ಬಿ.ಎಚ್. ಕೊರ್ಲಹಳ್ಳಿ, ಎಚ್.ಟಿ. ಬಿಜ್ಜೂರ, ಎಲ್.ಎಸ್. ಅರಳಹಳ್ಳಿ, ಗಿರೀಶ ಸುಗಜನಾವರ, ಮಹೇಶ ಕೇರಿ, ಆರ್.ಎಚ್. ನರೇಗಲ್ಲ, ಸುನೀಲ, ಲಮಾಣಿ, ಡಿ.ಎನ್. ಮರಡ್ಡಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.