ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಲು ಒತ್ತಾಯ

KannadaprabhaNewsNetwork |  
Published : May 26, 2026, 02:15 AM IST
ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಇಲ್ಲಿರುವ ಜನತೆ ಸಮ ಸಮಾಜದ ಬುನಾದಿಯಂತಿರುವ ಬಸವಾದಿ ಶರಣರ ವಚನಗಳನ್ನು ಅನ್ವಯಿಸಿಕೊಂಡಿರುವರು. ಸಮಾನತೆಯ ಸಮಾಜ ಕಟ್ಟಿಕೊಂಡು ಬದುಕಿ ಬಾಳುತ್ತಿರುವರು.

ಮುಂಡರಗಿ: ಮೇ 31ರಂದು ಗದುಗಿನಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯವರ ನೇತೃತ್ವದಲ್ಲಿ ಬಸವಾದಿ ಶಿವಶರಣರ ಹೆಸರನ್ನು ಬಳಸಿಕೊಂಡು ಹಿಂದೂ ಸಮಾವೇಶ ಜರುಗಲಿದ್ದು, ಸಮಾವೇಶಕ್ಕೆ ನಿರ್ಬಂಧ ಹೇರುವಂತೆ ಒತ್ತಾಯಿಸಿ ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಇಲ್ಲಿರುವ ಜನತೆ ಸಮ ಸಮಾಜದ ಬುನಾದಿಯಂತಿರುವ ಬಸವಾದಿ ಶರಣರ ವಚನಗಳನ್ನು ಅನ್ವಯಿಸಿಕೊಂಡಿರುವರು. ಸಮಾನತೆಯ ಸಮಾಜ ಕಟ್ಟಿಕೊಂಡು ಬದುಕಿ ಬಾಳುತ್ತಿರುವರು. ಆದರೆ ಈ ನೆಲದಲ್ಲಿ ಜಾತಿ, ಮತ, ಅಸ್ಪೃಶ್ಯತೆ, ಅಸಮಾನತೆಯನ್ನು ಬಲಪಡಿಸುವ ಶ್ರೇಣಿಕೃತ ಸಮಾಜವನ್ನು ಜೀವಂತವಾಗಿ ಇರಿಸುವ ಹುನ್ನಾರದ ಜತೆಗೆ ಧರ್ಮ ಧರ್ಮಗಳ ನಡುವೆ ಸೌಹಾರ್ದಯುತ ವಾತಾವರಣ ಧಕ್ಕೆ ಬರುವುದಲ್ಲದೇ, ಬಸವಾದಿ ಶರಣರ ತಾತ್ವಿಕ ವಿಚಾರಗಳನ್ನು ತಿರುಚುವ ಮತ್ತು ಅಪಮೌಲ್ಯಕರಿಸುವ ಪ್ರಯತ್ನದ ಭಾಗವಾಗಿ ಈ ಹಿಂದುತ್ವದ ಸಮಾವೇಶ ಜರುಗಲಿದೆ ಎಂದರು.

ಮಾನವೀಯತೆಯಲ್ಲಿ ನಂಬಿಕೆ ಇಟ್ಟಿರುವ ಜಗತಿಕ ಲಿಂಗಾಯತ ಮಹಾಸಭೆ ಮತ್ತು ವೈಚಾರಿಕ ತಳಹದಿಯ ಸಂಘಟನೆಗಳು ಈ ಸಮಾವೇಶವನ್ನು ಪ್ರತಿರೋಧಿಸುವುದರ ಜತೆಗೆ ಸಂಬಂಧಿಸಿದವರು ಸಮಾವೇಶವನ್ನು ನಿರ್ಬಂಧಿಸುವುದಕ್ಕಾಗಿ ಮನವಿ ಸಲ್ಲಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎ.ವೈ. ನವಲಗುಂದ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬಸವರಾಜ ರಾಮೇನಹಳ್ಳಿ, ಎಸ್.ಎಸ್. ಗಡ್ಡದ, ಬಿ.ವಿ. ಮುದ್ದಿ, ಕಾಶೀನಾಥ ಶಿರಬಡಗಿ, ದೇವೇಂದ್ರಪ್ಪ ರಾಮೇನಹಳ್ಳಿ, ಪಾಲಾಕ್ಷಿ ಗಣದಿನ್ನಿ, ವೆಂಕಟೇಶ ಗುಗ್ಗರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂ ಸಮಾವೇಶಕ್ಕೆ ವಿರೋಧ

ಮುಂಡರಗಿ: ಮೇ 31ರಂದು ಗದುಗಿನಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶ ನಡೆಸುತ್ತಿದ್ದು, ಇದಕ್ಕೆ ನಮ್ಮ ವಿರೋಧವಿದೆ. ಹಿಂದುತ್ವಕ್ಕೂ, ಶರಣ ಪರಂಪರೆಗೂ ಎಣ್ಣೆ ಸೀಗೆಕಾಯಿ ಸಂಬಂಧ ಎಂದು ತಾಲೂಕು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರೊ. ಎ.ವೈ. ನವಲಗುಂದ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವಾದಿ ಶರಣರ ಹೆಸರನ್ನು ದುರುಪಯೋಗ ಮಾಡಿಕೊಳ್ಳುವ ಹಾಗೂ ಜನರನ್ನು ದಾರಿ ತಪ್ಪಿಸುವ ಕಾರ್ಯವನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ. ಇದಕ್ಕಾಗಿ ಗದುಗಿನ ಪ್ರತಿ ವಾರ್ಡಿನಲ್ಲಿ ಬಸವಾದಿ ಶಿವಶರಣರ ವಚನಗಳನ್ನು ಹಿಡಿದು ಮೌನ ಮೆರವಣಿಗೆ ನಡೆಸಲು ನಿರ್ಧರಿಸಲಿದೆ ಎಂದರು.ಶಿವಯೋಗಿ ಕೊಪ್ಪಳ, ಕೊಟ್ರೇಶ ಅಂಗಡಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಗಡ್ಡದ, ಬಸವರಾಜ ರಾಮೇನಹಳ್ಳಿ, ದೇವಪ್ಪ ರಾಮೇನಹಳ್ಳಿ, ಬಿ.ವಿ. ಮುದ್ದಿ, ಪಾಲಾಕ್ಷಿ ಗಣದಿನ್ನಿ, ಎಂ.ಎಂ. ಹೆಬ್ಬಾಳ, ಕಾಶೀನಾಥ ಶಿರಬಡಗಿ, ವೆಂಕಟೇಶ ಗುಗ್ಗರಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುರಿನಕಟ್ಟೆ ಧ್ವಂಸ ಸಚಿವರು ಜಿಲ್ಲಾಡಳಿತ ವೈಫಲ್ಯ: ಮಾಜಿ ಶಾಸಕ ಸುನೀಲ ನಾಯ್ಕ
ಭಟ್ಕಳ ಮುರಿನಕಟ್ಟೆ ಧ್ವಂಸಕ್ಕೆ ಹಿಂದೂ ಸಂಘಟನೆಗಳ ತೀವ್ರ ಆಕ್ರೋಶ