ಕನ್ನಡಪ್ರಭ ವಾರ್ತೆ, ಬೀರೂರು.
ಪಟ್ಟಣದ ಹೃದಯಭಾಗದಲ್ಲಿರುವ ಖಾಸಗಿ ಬಸ್ ನಿಲ್ದಾಣದ ತಂಗುದಾಣದ ಮೇಲ್ಛಾವಣಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವ ಪರಿಣಾಮ ಪ್ರಯಾಣಿಕರು ಸುಡು ಬಿಸಿಲಿನಲ್ಲಿಯೇ ಬಸ್ ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ.ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲ ಜಳ ಹೆಚ್ಚಾಗಿದ್ದು, ಬಿಸಿಲಿನ ಹೊಡೆತಕ್ಕೆ ಹೈರಾಣುಗುವಂತಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ ಕಾಯಲು ಪುರಸಭೆ ತಂಗುದಾಣ ನಿರ್ಮಿಸಿತ್ತು. ಇದ್ದರಿಂದ ಶಾಲಾ, ಕಾಲೇಜು ವಿದ್ಯಾರ್ಥಿಗ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ಶಾಸಕರ ಅನುದಾನದಲ್ಲಿ ನೂತನ ತಂಗುದಾಣ ನಿರ್ಮಿಸಲು ನಿರ್ದೇಶನ ನೀಡಿದ್ದಾರೆ.ಆದರೆ ಗುತ್ತಿಗೆದಾರ ಕಳೆದ ಒಂದುವರೆ ತಿಂಗಳಿನಿಂದ ಹಳೆಯದನ್ನು ಕೆಡವಿ ಕಮಾನು ರೂಪದ ಕಬ್ಬಿಣ ಹಾಕಿದ್ದಾನೆಯೇ ಹೊರತು ಮೇಲ್ಛಾವಣಿ ಹಾಕದೆ ವಿಳಂಭಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರ ಹಿಡಿ ಶಾಪಕ್ಕೆ ಗುರಿಯಾಗಿದ್ದಾನೆ.ಆಮೆಗತಿಯಲ್ಲಿನ ಕಾಮಗಾರಿಯನ್ನು ಗುತ್ತಿಗೆದಾರ ಶೀಘ್ರಮುಗಿಸಿ, ಖಾಸಗಿ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರಿಗೆ ನೆರಳಿನ ಸೌಲಭ್ಯ ಒದಗಿಸುವ ಜೊತೆಗೆ ಕಾಮಗಾರಿ ಮುಕ್ತಾಯವಾಗುತ್ತದೆಯೋ ಇಲ್ಲವೋ ಎಂಬುದನ್ನು ಕಾದುನೋಡಬೇಕಿದೆ.
-- ಕೋಟ್:--ಪುರಸಭೆ ಈ ಹಿಂದೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಂಗುದಾಣ, ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಹೆಚ್ಚಿನ ಪ್ರಯಾಣಿಕರಿಗೆ ಅಂಗಡಿ ಮುಂಭಾಗದಲ್ಲಿ 12 ಅಡಿಗಿಂತ ಹೆಚ್ಚು ವಿಸ್ತಾರದ ಆರ್.ಸಿ.ಸಿ ನಿರ್ಮಾಣ ಮಾಡಿತ್ತು. ಆದರೆ ಅಂಗಡಿ ಮಾಲೀಕರು ದೈನಂದಿನ ವ್ಯಾಪರ ಹೆಚ್ಚಿಸಿಕೊಳ್ಳಲು ಆ ಜಾಗ ಆಕ್ರಮಿಸಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಯಾಗಿದೆ. ಪುರಸಭೆಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.-- ಬಿ.ಟಿ. ಚಂದ್ರಶೇಖರ್
ಮಾದಿಗ ಸಮಾಜದ ಮುಖಂಡ.--ಖಾಸಗಿ ಬಸ್ ನಿಲ್ದಾಣದಲ್ಲಿ ಶಾಸಕರ ಅನುದಾನಲ್ಲಿ ಕಾಮಗಾರಿ ನಡೆಯುತ್ತಿರುವ ಗುತ್ತಿಗೆದಾರರನ್ನು ಕರೆಸಿ ಆದಷ್ಟು ಬೇಗಾ ಕಾಮಗಾರಿ ಮುಗಿಸುವಂತೆ ಸೂಚಿಸಲಾಗುವುದು. ವಾಣಿಜ್ಯ ಮಳಿಗೆ ಮಾಲೀಕರಿಗೆ ಜಾಗ ಒತ್ತುವರಿ ಮಾಡಿರುವ ಬಗ್ಗೆ ಪುರಸಭೆ ಯಿಂದ ಈಗಾಗಲೇ ನೋಟಿಸ್ ನೀಡಿದ್ದು, ಶೀಘ್ರ ಒತ್ತುವರಿ ತೆರವುಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
- ಜಿ.ಪ್ರಕಾಶ್. ಪುರಸಭೆ ಮುಖ್ಯಾಧಿಕಾರಿ.ತಂಗುದಾಣದಲ್ಲಿ ಮೇಲ್ಛಾವಣಿ ಹಾಕದ ಪರಿಣಾಮ ನಮ್ಮ ಎಷ್ಟೋ ಸ್ನೇಹಿತರು ಬಿಸಿಲಿನ ಜಳಕ್ಕೆ ತಲೆ ಸುತ್ತಿ ಬಿದ್ದಿರುವ ಘಟನೆ ನಡೆದಿವೆ.- ವಿದ್ಯಾ ಕಾಲೇಜು ವಿದ್ಯಾರ್ಥಿನಿ.22 ಬೀರೂರು 1ಬೀರೂರಿನ ಖಾಸಗಿ ಬಸ್ ನಿಲ್ದಾಣದಲ್ಲಿನ ನೂತನ ತಂಗುದಾಣ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು.ಬಿಸಿಲಿನ ಜಳಕ್ಕೆ ಪ್ರಯಾಣಿಕರು ವಾಣಿಜ್ಯ ಅಂಗಡಿ ಮುಂಭಾಗದಲ್ಲಿ ಬಸ್ ಕಾಯುತ್ತಿರುವುದು.