-ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧ ನಿವಾಸಿ ಆಕ್ರೋಶ
------ಕನ್ನಡ ಪ್ರಭ ವಾರ್ತೆ ಚಿತ್ತಾಪುರಪಟ್ಟಣದಲ್ಲಿ ೨೦೧೮ ರಲ್ಲಿ ಚಿತ್ತಾಪುರ ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯವರಿಗಾಗಿ ನಿರ್ಮಿಸಿರುವ ೨೪ ವಸತಿ ನಿಲಯಗಳಿಗೆ ಸರಿಯಾದ ಮೂಲ ಸೌಲಭ್ಯಗಳು ಇಲ್ಲದೇ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ವಸತಿ ನಿಲಯ ಉದ್ಘಾಟನೆಯಾಗಿ ಏಳು ವರ್ಷಗಳು ಕಳೆದರೂ ಅಲ್ಲಿಗೆ ಸರಿಯಾದ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಚತೆ ಇಲ್ಲದೇ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಕಟ್ಟಡದ ಪಕ್ಕದಲ್ಲಿ ಇರುವ ಹಳೆಯ ಮೂರು ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಇದರ ಸುತ್ತ ಗಿಡ ಗಂಟೆಗಳು ಬೆಳೆದು ಅದು ವಿಷ ಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ನಮ್ಮ ಮಕ್ಕಳು ರಾತ್ರಿ ವೇಳೆ ಹೊರಗಡೆ ತಿರುಗಾಡದಂತಾಗಿದೆ ಎನ್ನುತ್ತಾರೆ ಅಲ್ಲಿ ವಾಸವಾಗಿರುವ ಪೊಲೀಸ್ ಸಿಬ್ಬಂದಿಯವರು.ಹೊಸ ಕಟ್ಟಡದಲ್ಲಿ ಒಟ್ಟು ೨೪ ಜನ ಪೊಲೀಸ್ ಸಿಬ್ಬಂದಿ ವಾಸಿಸುತ್ತಿದ್ದು, ವಸತಿ ಗೃಹಗಳಿಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಸ್ಥಳೀಯ ಪುರಸಭೆಯು ದಿನ ಬಿಟ್ಟು ದಿನ ಅರ್ಧ ಗಂಟೆ ನೀರು ಬಿಡುತ್ತಿದ್ದು, ಇದು ಕೆಳಗೆ ವಾಸಿಸುವ ಸಿಬ್ಬಂದಿಯವರು ನೀರು ಸಾಕಾಗುತ್ತಿಲ್ಲಾ ಮೇಲಿನ ಅಂತಸ್ತಿನಲ್ಲಿ ವಾಸಿಸುವ ಸಿಬ್ಬಂದಿಯವರಿಗೆ ನೀರು ಸಾಕಾಗದೇ ಹೊರಗಡೆಯಿಂದ ನೀರು ತರಬೇಕಾಗಿದೆ. ಇದರಿಂದ ಕರ್ತವ್ಯ ನಿರ್ವಹಣೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ಕುರಿತಾಗಿ ಸ್ಥಳೀಯ ಪುರಸಭೆಗೆ ಮನವಿ ಪತ್ರವನ್ನು ಸಲ್ಲಿಸಿಸದ್ದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ಅವರು ದೂರಿದ್ದಾರೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವಸತಿ ಗೃಹಗಳಿಗೆ ತೆರಳಲು ಉತ್ತಮ ರಸ್ತೆ ಮತ್ತು ಕುಡಿಯುವ ನೀರು ಪೂರೈಕೆ ಮಾಡುವುದು ಮತ್ತು ವಸತಿ ಗೃಹಗಳ ಸುತ್ತ ಮುತ್ತ ಬೆಳೆದಿರುವ ಜಾಲಿ ಕಂಟಿಗಳು ಹಾಗೂ ಹಳೆಯ ವಸತಿ ಗೃಹಗಳನ್ನು ತೆರವು ಮಾಡಿ, ಮಕ್ಕಳು ಸಂಜೆ ಹೊತ್ತಿನಲ್ಲಿ ಅಂಗಳದಲ್ಲಿ ಅಟವಾಡಲು ಅನುವು ಮಾಡಿಕೊಡಬೇಕೆಂದು ಅಲ್ಲಿನ ಸಿಬ್ಬಂದಿ ಒತ್ತಾಯಿಸಿದ್ದಾರೆ.ಪೋಟೋ: ೧೨-೭ ಸಿಟಿಪಿಅರ್ ೨
ಚಿತ್ತಾಪುರ ಪಟ್ಟಣದ ಜ್ಯೋತಿ ಸೇವಾ ಕೇಂದ್ರದ ಹಿಂಭಾಗ ಇರುವ ಹೊಸ ಪೊಲೀಸ್ ವಸತಿ ಗೃಹದ ಸುತ್ತಮುತ್ತ ಜಾಲಿ ಕಂಟಿ ಬೆಳೆದು ಅವ್ಯವಸ್ಥೆಯಿಂದ ಕೂಡಿರುವದು.ಪೋಟೋ: ೨
ಹೊಸ ಪೊಲೀಸ್ ವಸತಿ ಗೃಹಗಳಿಗೆ ಮೂಲಸೌಲಭ್ಯ ಒದಗಿಸಲು ಒತ್ತಾಯ.