ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ೧೦ ರಿಂದ ೧೨ ಲಕ್ಷ ಗೃಹ ಕಾರ್ಮಿಕರಿದ್ದಾರೆ. ಇವರಲ್ಲಿ ಮನೆಕೆಲಸದವರು, ಅಡುಗೆಯವರು, ನ್ಯಾನಿಗಳು, ಆರೈಕೆಗಾರರು ಮತ್ತು ತೋಟಗಾರರು ಸೇರಿದ್ದಾರೆ. ಆದರೆ, ಇವರೆಲ್ಲರೂ ಕನಿಷ್ಠ ವೇತನ, ಸಾಮಾಜಿಕ ಭದ್ರತೆಯಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐಎಲ್‌ಒ ಒಪ್ಪಂದ ೧೮೯, ೨೦೧೧ನ್ನು ಅಂಗೀಕರಿಸಬೇಕು. ಕರ್ನಾಟಕ ಗೃಹ ಕಾರ್ಮಿಕ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ೨೦೨೫ ಮಸೂದೆ ವಾಪಸಾಗಬೇಕು. ಕಾರ್ಮಿಕ ಹಕ್ಕುಗಳು ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸುವುದು. ವಾರದ ರಜೆ ಮತ್ತು ನಿಯಂತ್ರಿತ ಕೆಲಸದ ಸಮಯ, ಹಿಂಸೆ, ಕಿರುಕುಳ, ಶೋಷಣೆಯಿಂದ ರಕ್ಷಣೆ, ಆರೋಗ್ಯಸೇವೆ, ವಿಮೆ, ಪಿಂಚಣಿ ಯೋಜನೆಗಳಿಗೆ ಪ್ರವೇಶ, ಗೃಹ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ, ಗೃಹ ಕಾರ್ಮಿಕರನ್ನು ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಸೇರಿಸುವಂತೆ ಆಗ್ರಹಪಡಿಸಿದರು.ಗೋಷ್ಠಿಯಲ್ಲಿ ಶೋಭಾ, ರತ್ನಮ್ಮ ಇದ್ದರು.ಜೂ.೧೮ರಂದು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಅಭಿನಂದನಾ ಸಮಾರಂಭ
ಸಮಾರಂಭದ ದಿವ್ಯಸಾನ್ನಿಧ್ಯವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು. ಜಿಲ್ಲಾಧಿಕಾರಿ ಡಾ.ಕುಮಾರ ಸಮಾರಂಭ ಉದ್ಘಾಟಿಸುವರು. ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ.ಮೀರಾ ಶಿವಲಿಂಗಯ್ಯ ಅವರು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಅವರನ್ನು ಅಭಿನಂದಿಸಲಿದ್ದು, ವಿಧಾನಪರಿಷತ್ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರು ಅಭಿನಂದಿತರನ್ನು ಕುರಿತು ಅಭಿನಂದನಾ ನುಡಿಗಳನ್ನಾಡುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರಾಘವೇಂದ್ರ, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಮಾಜಿ ನಿರ್ದೇಶಕ ಎಂ.ಕೃಷ್ಣ ಭಾಗವಹಿಸುವರು.