ಪುರೋಹಿತ ವರ್ಗಕ್ಕೆ ಆರ್ಥಿಕ, ಸಾಮಾಜಿಕ ಭದ್ರತೆ ನೀಡುವಂತೆ ಆಗ್ರಹ

KannadaprabhaNewsNetwork | Published : Mar 11, 2025 12:48 AM

ಸಾರಾಂಶ

ಅರ್ಚಕ ಮತ್ತು ಪುರೋಹಿತರ ಜೀವನ ಇಂದು ಸಾಕಷ್ಟು ಹೀನಾಯ ಮತ್ತು ಸಂಕಷ್ಟ ಸ್ಥಿತಿಯಲ್ಲಲಿದೆ. ಸನಾತನ ಭಾರತದ ಅಸಂಘಟಿತ ವೃತ್ತಿಪರ ಪುರೋಹಿತ ವರ್ಗಕ್ಕೆ ಸರ್ಕಾರಿ ಅಧಿಕೃತ ಗುರುತಿನ ಚೀಟಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಸನಾತನ ಭಾರತದ ಅಸಂಘಟಿತ ವೃತ್ತಿಪರ ಪುರೋಹಿತ ವರ್ಗಕ್ಕೆ ಸರ್ಕಾರಿ ಅಧಿಕೃತ ಗುರುತಿನ ಚೀಟಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸುವಂತೆ ಜಿಲ್ಲಾ ಕಾರ್ಯಾಧ್ಯಕ್ಷ ಅರ್ಜುನ್ ಎಸ್.ರಾವ್ ಹೇಳಿದರು.

ಅರ್ಚಕ ಮತ್ತು ಪುರೋಹಿತರ ಜೀವನ ಇಂದು ಸಾಕಷ್ಟು ಹೀನಾಯ ಮತ್ತು ಸಂಕಷ್ಟ ಸ್ಥಿತಿಯಲ್ಲಲಿದೆ. ಎಷ್ಟೋ ರಾಜಕೀಯ ಪಕ್ಷಗಳು ಈ ವೃತ್ತಿಪರ ಕೆಲಸ ಮಾಡುವ ವರ್ಗಕ್ಕೆ ಯಾವುದೇ ರೀತಿ ಅನುದಾನ ನೀಡದಿರುವುದು ವಿಷಾದಕರ ಸಂಗತಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸೇರ್ಪಡೆ ಮಾಡಿರುವ ೬೫ ಅಸಂಘಟಿತ ವರ್ಗಗಳೊಂದಿಗೆ ಪುರೋಹಿತ ವರ್ಗವನ್ನೂ ಸೇರ್ಪಡೆಗೊಳಿಸುವಂತೆ ಮನವಿ ಮಾಡುತ್ತೇವೆ. ಈ ವೃತ್ತಿಪರ ಅಸಂಘಟಿತ ವಲಯಕ್ಕೆ ಸರ್ಕಾರಿ ಗುರುತಿನ ಚೀಟಿ ಮತ್ತು ಆರ್ಥಿಕ ಸೌಲಭ್ಯ ಒದಗಿಸಬೇಕಾಗಿ ಮತ್ತು ಕೌಶಲ್ಯಾಭಿವೃದ್ಧಿ ವೇದಾಧ್ಯಯನಕ್ಕೆ ಗುರುಕುಗಳು, ವಿಮಾ ಮತ್ತು ಗೃಹ ನಿರ್ಮಾಣ ಹೀಗೆ ಅನುಕೂಲತೆ ಮಾಡಿಕೊಡುವಂತೆ ಸರ್ಕಾರವನ್ನು ಕೋರಿದರು.

ಗೋಷ್ಠಿಯಲ್ಲಿ ಕೆ.ಶ್ರೀನಿವಾಸ್, ಅಭಿಷೇಕ್ ಕಲ್ಯಾಣ್, ಮಧುಸೂಧನ್, ಬಾಲಸುಬ್ರಹ್ಮಣ್ಯಂ ಇತರರಿದ್ದರು.

ಇಂದಿನಿಂದ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ

ಮಂಡ್ಯ: ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾ.11 ರಿಂದ 25 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಮಾರ್ಚ್ 11 ರಂದು ಮದ್ದೂರು ತಾಲೂಕು ಆಸ್ಪತ್ರೆ, ಮಾ.12 ರಂದು ಕೆ. ಆರ್. ಪೇಟೆ ತಾಲೂಕು ಆಸ್ಪತ್ರೆ, ಮಾ.13 ರಂದು ಕೆ.ಎಂ.ದೊಡ್ಡಿ ಸರ್ಕಾರಿ ಆಸ್ಪತ್ರೆ ಕೇಂದ್ರ, ಮಾ.14 ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆ, ಮಾ.15 ರಂದು ಮಂಡ್ಯ ಮಿಮ್ಸ್, ಮಾ.18 ರಂದು ಬಿಂಡಿಗನವಿಲೆ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಮಧ್ಯಾಹ್ನ 1 ಗಂಟೆಗೆ ನಾಗಮಂಗಲ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಮಾ.19 ರಂದು ಕೀಲಾರ ಸರ್ಕಾರಿ ಆರೋಗ್ಯ ಕೇಂದ್ರ, ಮಾ.21 ರಂದು ಶಿವಳ್ಳಿ ಸರ್ಕಾರಿ ಆರೋಗ್ಯ ಕೇಂದ್ರ, ಮಾ.25 ರಂದು ಅರಕೆರೆ ಸರ್ಕಾರಿ ಆರೋಗ್ಯ ಕೇಂದ್ರದ ಆಸ್ಪತ್ರೆಗಳಲ್ಲಿ ಬೆಳಗ್ಗೆ 10 ಗಂಟೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Share this article