ಕನ್ನಡಪ್ರಭ ವಾರ್ತೆ ಹರಿಹರ
ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಆಟೋ ಮಾಲೀಕರ, ಚಾಲಕರ ಸಂಘದ ವತಿಯಿಂದ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ನಗರದ 31 ವಾರ್ಡ್‌ಗಳಲ್ಲಿ ರಸ್ತೆಗಳು ಗುಂಡಿಮಯವಾಗಿ ಹಾಳಾಗಿದ್ದು ನಗರಸಭೆಯಿಂದ ಕೂಡಲೇ ರಸ್ತೆಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿದರು.
ನಗರದ ರಸ್ತೆಗಳಷ್ಟೇ ಅಲ್ಲದೆ ನಗರದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ರಾಜ್ಯ ಹೆದ್ದಾರಿಗಳು ಗುಂಡಿಮಯವಾಗಿದ್ದು, ಅವುಗಳನ್ನು ದುರಸ್ತಿ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಅದೇ ದಿನ ಒತ್ತಾಯಿಸಲಿದ್ದೇವೆ. ಈ ಪ್ರತಿಭಟನೆಗೆ ಆಟೋ ಮಾಲೀಕರ,ಚಾಲಕರ ಸಂಘ ಸೇರಿದಂತೆ ಸಾರ್ವಜನಿಕರು, ಕೆಲವು ಸಂಘ ಸಂಸ್ಥೆಗಳು ಕೈಜೋಡಿಸಲು ಒಪ್ಪಿರುವುದಾಗಿ ತಿಳಿಸಿದರು.ಆಟೋ ಮಾಲೀಕರ ಚಾಲಕರ ಸಂಘದ ಗೌರವಾಧ್ಯಕ್ಷ ಸಿದ್ದಲಿಂಗ ಸ್ವಾಮಿ ಮಾತನಾಡಿ, ಹಲವಾರು ವರ್ಷಗಳಿಂದ ಹರಿಹರದ ರಸ್ತೆಗಳ ಸಮಸ್ಯೆ ಇದ್ದು, ನಮ್ಮ ಸಂಘದಿಂದ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಹೋರಾಟ ಮಾಡಿದ ಸಂದರ್ಭದಲ್ಲಿ ಕೆಲವೊಂದು ರಸ್ತೆಗಳನ್ನು ದುರಸ್ತಿ ಮಾಡಿದಂತೆ ಮಾಡಿ ಮತ್ತೆ ಸುಮ್ಮನಾಗುವ ನಗರಸಭೆಯನ್ನು ಎಚ್ಚರಿಸುವ ಕೆಲಸವಾಗಬೇಕಾಗಿದೆ ಎಂದರು.
ಕರವೇ ನಗರ ಘಟಕದ ಅಧ್ಯಕ್ಷ ಪ್ರೀತಂ ಬಾಬು ಮಾತನಾಡಿ, ಮಂಗಳವಾರ ನಡೆಯಲಿರುವ ಪ್ರತಿಭಟನಾ ಮೆರವಣಿಗೆ ನಗರದ ಫಕೀರ ಸ್ವಾಮಿ ಮಠದಿಂದ ಆರಂಭವಾಗಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಮೂಲಕ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ, ಮಹಾತ್ಮ ಗಾಂಧಿ ವೃತದಲ್ಲಿ ಘೋಷಣೆಗಳನ್ನು ಕೂಗಿ ನಂತರ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.