ಕುಷ್ಟಗಿ: ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಆಧಾರ ನೊಂದಣಿ ಕೇಂದ್ರ ಮರು ಸ್ಥಾಪಿಸುವುದು ಹಾಗೂ ಸಮೀಕ್ಷೆಯಿಂದ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಅವರಿಗೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಜೀರಸಾಬ ಮೂಲಿಮನಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಅವರು, ಸರ್ಕಾರ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ಕೈಗೊಂಡಿದ್ದು, ಸಮೀಕ್ಷೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಮೂಲ ದಾಖಲೆಯಾಗಿದೆ. ಆಧಾರ್ ಕಾರ್ಡ್‌ಲ್ಲಿ ಅನೇಕ ನ್ಯೂನ್ಯತೆಗಳಿದ್ದು ಬಹಳಷ್ಟು ನಾಗರಿಕರ ರೈತರ ಬಯೋಮೆಟ್ರಿಕ್ ಸಮಸ್ಯೆಗಳಿವೆ ಆಧಾರ್ ಲಿಂಕ್ಡ್ ಮೊಬೈಲ್ ನಂಬರ್ ಇರುವುದು ಕಡ್ಡಾಯವಾಗಿದ್ದು, ಅನೇಕರ ಆಧಾರ್ ಕಾರ್ಡ್ ಗಳಲ್ಲಿ ಹಳೆಯ ನಂಬರ್ ಇದ್ದು ಹೊಸ ನಂಬರ್ ಲಿಂಕ್ ಮಾಡಬೇಕಿದೆ ಬಹುತೇಕ ಆರು ವರ್ಷದ ಮಕ್ಕಳ ಆಧಾರ್ ಕಾರ್ಡ್ ಗಳಲ್ಲಿ ಸಮಸ್ಯೆಗಳಿದ್ದು, ಬಯೋಮೆಟ್ರಿಕ್ ಅಪ್ಡೇಟ್ ಆಗಬೇಕಿದೆ ಹೊಸ ಆಧಾರ್ ಕಾರ್ಡ್ ನೋಂದಣಿ ಮಾಡಿಕೊಳ್ಳಬೇಕಿದೆ ಎಂದರು.ಸುಮಾರು ಒಂದು ವರ್ಷಗಳಿಂದ ಜಿಲ್ಲೆಯಾದ್ಯಂತ ಬ್ಯಾಂಕು,ನಾಡಕಚೇರಿ, ಪೋಸ್ಟ್ ಆಫೀಸ್ ಗಳಲ್ಲಿರುವ ಬಹುತೇಕ ಆಧಾರ್ ಕಾರ್ಡ್ ನೋಂದಣಿ ಕೇಂದ್ರಗಳು ಸ್ಥಗಿತಗೊಂಡಿವೆ, ಶೀಘ್ರವೇ ಪುನಾರಾರಂಭಿಸಬೇಕು ಹಾಗೂ ಜೆಸ್ಕಾಂ ಅಧಿಕೃತ ಸಮೀಕ್ಷೆಯ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ ಎಂಟು ಸಾವಿರ ರೈತ ಕುಟುಂಬಗಳು ತೋಟದ ಮನೆಗಳಲ್ಲಿ ವಾಸಿಸುತ್ತಿದ್ದು ಅಲ್ಲಿ ಮೀಟರ್ ಇರುವುದಿಲ್ಲ ಸಮೀಕ್ಷೆಯ UHID ಅಂಟಿಸಿರುವುದಿಲ್ಲ ಈ ಸಮೀಕ್ಷೆಯಿಂದ ತೋಟದ ಮನೆಯಲ್ಲಿ ವಾಸಿಸುವ ರೈತ ಕುಟುಂಬಗಳು ಹೊರಗುಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಶೀಘ್ರದಲ್ಲಿ ಆಧಾರ್ ಕಾರ್ಡ್ ನೋಂದಣಿ ಕ್ಯಾಂಪ್ ಪ್ರಾರಂಭಿಸಲಾಗುವುದು ಹಾಗೂ ತೋಟದ ಮನೆಗಳಲ್ಲಿ ವಾಸಿಸುವ ರೈತ ಕುಟುಂಬಗಳು ಸಮೀಕ್ಷೆಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.