ಅರಣ್ಯ ಇಂಡೀಕರಣ ನಿಲ್ಲಿಸಲು ಆಗ್ರಹ

KannadaprabhaNewsNetwork |  
Published : Apr 13, 2025, 02:09 AM IST
೧೨ಕೆಎಲ್‌ಆರ್-೬ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿಯಿಂದ ಭೂಮಿ ಪಡೆದ ರೈತರಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ನೀಡುತ್ತಿರುವ ಕಿರುಕುಳ ಕೂಡಲೇ ನಿಲ್ಲಬೇಕು ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ನೇತೃತ್ವದಲ್ಲಿ ಏ.೧೫ ರಂದು ಡಿಸಿ ಕಛೇರಿ ಮುಂದೆ ಪ್ರತಿಭಟನೆಯ ಸಮಿತಿಯ ಸಂಚಾಲಕ ಟಿ.ಎಂ.ವೆಂಕಟೇಶ್ ಮುಖಂಡರೊಂದಿಗೆ ಚರ್ಚಿಸಿದರು. | Kannada Prabha

ಸಾರಾಂಶ

ಜಿಲ್ಲಾಡಳಿತ ಬಗರ್ ಹುಕುಂ ಸಾಗುವಳಿ ಭೂಮಿಗಳ ಅರಣ್ಯ ಇಂಡೀಕರಣ ರದ್ದುಪಡಿಸಬೇಕು, ದೌರ್ಜನ್ಯ ಹಿಂಸೆ ಮೂಲಕ ಒಕ್ಕಲೆಬ್ಬಿಸಿರುವ ಎಲ್ಲಾ ರೈತರಿಗೆ ಸ್ವಾಧೀನ ವಾಪಸ್‌ ನೀಡಬೇಕು. ಅರಣ್ಯ ಇಂಡೀಕರಣದ ಹೆಸರಿನಲ್ಲಿ ನೀಡುತ್ತಿರುವ ಕಂದಾಯ ಹಾಗೂ ಅರಣ್ಯ ಇಲಾಖೆ ನೋಟಿಸ್ ನೀಡುವುದು ನಿಲ್ಲಬೇಕು ಎಂಬುದು ರೈತರ ಒತ್ತಾಯ.

ಕನ್ನಡಪ್ರಭ ವಾರ್ತೆ ಕೋಲಾರಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿಯಿಂದ ಭೂಮಿ ಪಡೆದ ರೈತರಿಗೆ ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ನೀಡುತ್ತಿರುವ ಕಿರುಕುಳ ಕೂಡಲೇ ನಿಲ್ಲಬೇಕು. ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ನೇತೃತ್ವದಲ್ಲಿ ಏ.೧೫ ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿಯ ಸಂಚಾಲಕ ಟಿ.ಎಂ.ವೆಂಕಟೇಶ್ ತಿಳಿಸಿದರು.ನಗರದ ತಮ್ಮ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯ ನಂತರ ಮಾತನಾಡಿ, ಜಿಲ್ಲಾಡಳಿತ ಬಗರ್ ಹುಕುಂ ಸಾಗುವಳಿ ಭೂಮಿಗಳ ಅರಣ್ಯ ಇಂಡೀಕರಣ ರದ್ದುಪಡಿಸಬೇಕು, ದೌರ್ಜನ್ಯ ಹಿಂಸೆ ಮೂಲಕ ಒಕ್ಕಲೆಬ್ಬಿಸಿರುವ ಎಲ್ಲಾ ರೈತರಿಗೆ ಸ್ವಾಧೀನ ವಾಪಸ್‌ ನೀಡಬೇಕು. ಅರಣ್ಯ ಇಂಡೀಕರಣದ ಹೆಸರಿನಲ್ಲಿ ನೀಡುತ್ತಿರುವ ಕಂದಾಯ ಹಾಗೂ ಅರಣ್ಯ ಇಲಾಖೆ ನೋಟಿಸ್ ನೀಡುವುದು ನಿಲ್ಲಬೇಕು ಎಂದು ಒತ್ತಾಯಿಸಿದರು.ಸ್ಮಾರ್ಟ್ ಮೀಟರ್ ಬೇಡ

ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ಕೃಷಿ ಪಂಪಸೆಟ್ ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಬಾರದು, ಕೃಷಿ ಪಂಪ್ ಸೆಟ್ ಗಳ ಸ್ವಯಂ ವೆಚ್ಚ ಯೋಜನೆ ಹಿಂಪಡೆಯಬೇಕು, ವಿದ್ಯುತ್ ಖಾಸಗೀಕರಣ ಪ್ರಯತ್ನ ಕೂಡಲೇ ನಿಲ್ಲಿಸಬೇಕು ಚನ್ನರಾಯಪಟ್ಟಣ ಕೆಐಎಡಿಬಿಯ ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ ರದ್ದುಪಡಿಸಬೇಕು, ಕಾಪ್ರೊರೇಟ್ ಪರ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ನೀತಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ಕಾನೂನುಗಳನ್ನು ನಾಶ ಮಾಡುವ ನಾಲ್ಕು ಕಾರ್ಮಿಕ ಸಂಹಿತೆ ತಿರಸ್ಕರಿಸಬೇಕು, ಕನಿಷ್ಠ ದುಡಿಮೆ ಅವಧಿ ೧೨ ಗಂಟೆಗಳಿಗೆ ಹೆಚ್ಚಿಸಿರುವ ಅದೇಶ ವಾಪಸ್ಸು ಪಡೆಯಬೇಕು ದಲಿತರ ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು ಎಂದು ಒತ್ತಾಯಿಸಿದರು.

ಸಂಯುಕ್ತ ಹೋರಾಟ ಕರ್ನಾಟಕ ಕೋಲಾರ ಜಿಲ್ಲಾ ಸಮಿತಿಯ ಮುಖಂಡರಾದ ವಿಜಯಕೃಷ್ಣ, ಚಿನ್ನಾಪುರ ಮಂಜುನಾಥ, ಭೀಮರಾಜ್, ಸೀಸಂದ್ರ ವೆಂಕಟಾಚಲಪತಿ, ರಾಮಚಂದ್ರ, ರಾಜಪ್ಪ, ವೆಂಕಟೇಶಪ್ಪ ಇದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ