ಕನ್ನಡಪ್ರಭ ವಾರ್ತೆ ಸಿಂದಗಿ
ನಗರದ ಬಸವೇಶ್ವರ ಸರ್ಕಲ್ ಹತ್ತಿರ, ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ 371(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ 28 ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸಂಗಮ ಸಂಸ್ಥೆ ಹಾಗೂ ಸರ್ವಧರ್ಮ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿ ಮಾತನಾಡಿದರು. ಈ ಜಿಲ್ಲೆಯು ಭೌಗೋಳಿಕವಾಗಿ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಹೀಗಾಗಿ, ಈ ಪ್ರದೇಶದ ಅಭಿವೃದ್ಧಿಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಕಲ್ಯಾಣ ಕರ್ನಾಟಕದ 371ಜೆ ವಿಶೇಷ ಸ್ಥಾನಮಾನಕ್ಕೆ ವಿಜಯಪುರ ಜಿಲ್ಲೆಯನ್ನು ಪರಿಗಣಿಸಲು ಸರ್ಕಾರಕ್ಕೆ ಒಗ್ಗಟ್ಟಿನಿಂದ ಹಕ್ಕೋತ್ತಾಯ ಮಂಡಿಸಬೇಕು. ಜತೆಗೆ ಈ ಭಾಗದ ಜನರಿಗೆ ನ್ಯಾಯ ದೊರಕಿಸುವವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದೂ ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಂಗನಾಥ ತೊರ್ಪೆ, ಗುರುರಾಜ್ ಪಡಶೆಟ್ಟಿ, ಸಾಯಬಣ್ಣ ದೇವರಮನಿ, ಪಂಡಿತ ಯಂಪುರೆ, ಸಂಗಮ ಸಂಸ್ಥೆಯ ಪ್ರಿಯಾಂಕ, ವಿಜಯಪುಮಾರ ಬಂಟನುರ, ಬಸವರಾಜ ಬಿಸನಾಳ, ರಾಜೀವ ಕುರಿಮನಿ, ಮಹೇಶ ಚವ್ಹಾಣ, ಲಕ್ಷಣ ಪೂಜಾರಿ, ಸಂಗಪ್ಪ ಬ್ಯಾಕೋಡ, ಹೋರಾಟ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ಸಮಿತಿಯ ಶಂಕರ ಮಲ್ಲೇದ, ಉಪಾಧ್ಯಕ್ಷ ಸಲೀಂ ಅಲ್ಡಿ, ವೇದಿಕೆ ಮುಖಂಡರಾದ ವಿಶ್ವನಾಥ ಶಿವಸಿಂಪಿಗೇರ, ಸಲೀಂ ಜುಮನಾಳ್ ರಮೇಶ್ ದೊಡಮನಿ,ಪಟೇಲ್ ಇಂಜಿನಿಯರ್, ಶಿವಸಿಂಪಗೇರ, ಸತೀಶ ಕುಲಕರ್ಣಿ, ಬಸವರಾಜ ದೇಸಾಯಿ, ಶಾಂತು ರಾಣಗೋಳ, ಪಿ.ಕೆ.ಪೂಜಾರಿ, ಅಜುಂ ಆಲಮೇಲ, ಎಸ್.ಎಂ.ವೀರಾಪೂರ, ಎ.ವಿ.ನಾಯಕ್, ಶಿಲ್ಪಾ ಪಾಟೀಲ, ಸಂಗಮ ಸಂಸ್ಥೆಯ ಸಂಗೀತಾ ಜಾಬಣನವರ, ಭಾಗ್ಯಶ್ರೀ, ದುರ್ಗಮ್ಮ ಮಾದರ, ಇಂದ್ರಾಬಾಯಿ ಮಾದರ, ಸಿದ್ದನಘವಡ ಅಂಬಳನೂರ, ಎಂ.ಐ.ಗಣಾಚಾರಿ ಸೇರಿದಂತೆ ಹಲವರು ಇದ್ದರು