ಪ್ರಾಥಮಿಕ ಶಾಲೆ ಬೇರೆಡೆಗೆ ವರ್ಗಾವಣೆಗೆ ಒತ್ತಾಯ

KannadaprabhaNewsNetwork |  
Published : Aug 31, 2025, 01:08 AM IST
30ಕೆಕೆಡಿಯು1ಎ. | Kannada Prabha

ಸಾರಾಂಶ

ಕಡೂರು, ಪಟ್ಟಣದ ರಾಜೀವ್‌ಗಾಂಧಿ ಬಡಾವಣೆಯಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಬೃಹತ್ ಕುಡಿಯುವ ನೀರಿನ ಟ್ಯಾಂಕ್ ಕೆಳಗಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸಮೀಪದ ಶಾಲೆಗೆ ವರ್ಗಾವಣೆ ಮಾಡು ವಂತೆ ಶಾಲೆ ಮಕ್ಕಳ ಪೋಷಕರು ಹಾಗೂ ಸ್ಥಳೀಯ ನಿವಾಸಿಗರು ಪುರಸಭೆ ಹಾಗೂ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

ಶಿಥಿಲಾವಸ್ಥೆ ಟ್ಯಾಂಕ್‌ ಕೆಳಗೆ ಶಾಲೆ ಇರುವುದೇ ಸಮಸ್ಯೆ

ಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದ ರಾಜೀವ್‌ಗಾಂಧಿ ಬಡಾವಣೆಯಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಬೃಹತ್ ಕುಡಿಯುವ ನೀರಿನ ಟ್ಯಾಂಕ್ ಕೆಳಗಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಸಮೀಪದ ಶಾಲೆಗೆ ವರ್ಗಾವಣೆ ಮಾಡು ವಂತೆ ಶಾಲೆ ಮಕ್ಕಳ ಪೋಷಕರು ಹಾಗೂ ಸ್ಥಳೀಯ ನಿವಾಸಿಗರು ಪುರಸಭೆ ಹಾಗೂ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.

ಶಾಲೆ ಆವರಣದಲ್ಲಿ ಪುರಸಭೆ ಬೃಹತ್ ಕುಡಿಯುವ ನೀರು ಸಂಗ್ರಹ ಟ್ಯಾಂಕ್ ಸುಮಾರು 30 ವರ್ಷ ಹಳೆಯದಾಗಿದ್ದು ಬೀಳುವ ಸ್ಥಿತಿಯಲ್ಲಿರುವುದರಿಂದ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ 1 ರಿಂದ 5ನೇ ತರಗತಿಗಳಲ್ಲಿ 70 ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಬೇರೆಡೆಗೆ ವರ್ಗಾಯಿಸಲು ಪೋಷಕರು, ಸ್ಥಳೀಯರು ಮತ್ತು ಶಾಲೆ ಶಿಕ್ಷಕಿ ಸೇರಿ ಪುರಸಭೆಗೆ ಅರ್ಜಿ ಸಲ್ಲಿಸಿದ್ದಾರೆ.

ಇತ್ತೀಚೆಗೆ ಅಜ್ಜಂಪುರದಲ್ಲಿ ನಡೆದ ಪ್ರಕರಣದಲ್ಲಿ ಕೂದಲೆಳೆ ಅಂತರದಲ್ಲಿ ಅವಾಂತರ ತಪ್ಪಿರುವುದು ಇನ್ನು ಜನರ ಮನಸ್ಸಿನಿಂದ ಮಾಸಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಟ್ಯಾಂಕ್ ಮತ್ತು ಕೆಳಗಿರುವ ಶಾಲೆ ಪರಿಗಣಿಸಿ ಸಮೀಪದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಸ್ಥಳಾಂತರಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಈಗಾಗಲೇ ಟ್ಯಾಂಕ್‌ನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅದರ ಕೆಳಗಡೆ ಶಿಕ್ಷಣ ಇಲಾಖೆ 2006-2007 ರಲ್ಲಿ ಶಾಲೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಸಮಸ್ಯೆಗೆ ಕಾರಣ. ಈ ಶಾಲೆಯನ್ನು ಈಗಾಗಲೇ 2014-2016ನೇ ಸಾಲಿನಲ್ಲಿ ಮುಚ್ಚಲಾಗಿತ್ತು. ಆದರೆ ಪುನಃ ತೆರೆದಿದ್ದು ಇಲ್ಲಿ ಹಲವು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ಆತಂಕ ಎದುರಾಗಿದೆ.ಟ್ಯಾಂಕಿನಿಂದ ಲೀಕ್‌ ಆಗುವ ನೀರು ಕೆಳಗೆ ನಿಂತು ಸೊಳ್ಳೆಗಳ ತಾಣವಾಗಿ ದುರ್ವಾಸನೆ ಬೀರುತ್ತಿದೆ. ಈ ಬಗ್ಗೆ ಅನೇಕ ಭಾರಿ ಪುರಸಭೆ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ. ಮಕ್ಕಳು ಜಾರಿ ಬೀಳುವುದು ಸಾಮಾನ್ಯವಾಗಿದೆ. ಇಂತಹ ಅನೇಕ ಸಮಸ್ಯೆ ಟ್ಯಾಂಕ್‌ನಿಂದ ಉಂಟಾಗಿದೆ ಎಂದು ಪೋಷಕರು ಅಲವತ್ತುಕೊಂಡರು.ಟ್ಯಾಂಕ್ ಕೆಡವಿ ಶಾಲೆ ಉಳಿಸುವ ಬಗ್ಗೆ ಇದಕ್ಕೆ ಬಡಾವಣೆ ಬಹುತೇಕ ನಿವಾಸಿಗರ ವಿರೋಧವಿದೆ. ಮೊದಲೇ ಟ್ಯಾಂಕ್ ಇತ್ತು ಅದರ ಕೆಳಗೆ ಶಾಲೆ ನಿರ್ಮಿಸುವಾಗ ಇಲಾಖೆ ಅಧಿಕಾರಿಗಳಿಗೆ ಜ್ಞಾನವಿರ ಲಿಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ. ಆದ್ದರಿಂದ ಮಕ್ಕಳನ್ನು ಸಮೀಪದ ಶಾಲೆಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.ಪುರಸಭೆಗೆ ಮುಖ್ಯಶಿಕ್ಷಕಿ ಪತ್ರ: ಬೃಹತ್ ಟ್ಯಾಂಕ್ ಟ್ಯಾಂಕಿನ ಒಂದೊಂದು ಭಾಗ ಬೀಳುತ್ತಿದ್ದು ಇದರ ಕೆಳಗಿನ ಶಾಲೆಯಲ್ಲಿ ಆತಂಕದಲ್ಲಿ ಪಾಠ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಮಕ್ಕಳ ರಕ್ಷಣೆ ಹಿನ್ನೆಲೆಯಲ್ಲಿ ಪುರಸಭೆಗೆ 3 ತಿಂಗಳ ಹಿಂದೆಯೇ ಮುಖ್ಯಶಿಕ್ಷಕಿ ಪತ್ರ ಬರೆದಿದ್ದಾರೆ.

--- ಕೋಟ್‌--

ಈ ಶಾಲೆಯ ಸಮಸ್ಯೆ ಇಲಾಖೆ ಗಮನಕ್ಕೆ ಬಂದಿದ್ದು ಪರಿಶೀಲನೆ ಮಾಡಿ ಇಲಾಖೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ತಿಮ್ಮಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

30ಕೆಕೆಡಿಯು1.ಕಡೂರು ಪಟ್ಟಣದ ರಾಜೀವ್‌ಗಾಂಧಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಕ್ಕದಲ್ಲಿರುವ ಬೃಹತ್ ಕುಡಿಯುವ ನೀರಿನ ಟ್ಯಾಂಕ್ ಭಾಗ ಕಳಚಿ ಬಿದ್ದಿರುವುದು.ಕೆಕೆಡಿಯು2ಎ.ಕಡೂರು ರಾಜೀವ್‌ಗಾಂಧಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಟ್ಯಾಂಕ್ ಕೆಳಗೆ ನಡೆಯುತ್ತಿರುವುದು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ