ಡಂಬಳ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹ

KannadaprabhaNewsNetwork |  
Published : Sep 02, 2025, 01:00 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದಲ್ಲಿ ಸೋಮವಾರ ನಾಡ ಕಾರ್ಯಲಯದಲ್ಲಿ ಉಪ ತಹಶೀಲ್ದಾರ ಎಸ್.ಎಸ್.ಬಿಚ್ಚಾಲಿ ಅವರ ಮೂಲಕ ಸಾಮಾಜಿಕ ಕಾರ್ಯಕರ್ತ ಮಂಜಯ್ಯಸ್ವಾಮಿ ಅರವಟಿಗಿಮಠ ಅವರ ನೇತೃತ್ವದಲ್ಲಿ ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವೆಂದು ಮೇಲ್ದರ್ಜೇಗೇರಿಸುವಂತೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇಪ್ಪತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೇಗೇರಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಡಂಬಳ: ಇಪ್ಪತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಮ್ಮ ಡಂಬಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೇಗೇರಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ಆಸ್ಪತ್ರೆಯು ಸುಸಜ್ಜಿತ ಕಟ್ಟಡ, ವಿಸ್ತೀರ್ಣವಾದ ಮೈದಾನ ವಿಶಾಲವಾದ ಆವರಣ ಹೊಂದಿದೆ. ವೈದ್ಯರಿಲ್ಲದೆ ರೋಗಿಗಳಿಗೆ ಸಾರ್ವಜನಿಕರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ನಗರ ಪ್ರದೇಶಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಕ್ಷಣ ಆಸ್ಪತ್ರೆ ಮೇಲ್ದಜೇಗೇರಿಸುವಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಡಂಬಳ ಗ್ರಾಮದ ಸಾಮಾಜಿಕ ಕಾರ್ಯಕರ್ತ ಮಂಜಯ್ಯಸ್ವಾಮಿ ಅರವಟಿಗಿಮಠ ಆಗ್ರಹಿಸಿದ್ದಾರೆ.

ಡಂಬಳ ಗ್ರಾಮದಲ್ಲಿ ಸೋಮವಾರ ನಾಡ ಕಾರ್ಯಾಲಯದಲ್ಲಿ ಉಪತಹಸೀಲ್ದಾರ್‌ ಎಸ್.ಎಸ್. ಬಿಚ್ಚಾಲಿ ಅವರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೇಗೇರಿಸುವಂತೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಡಂಬಳ ಹೋಬಳಿ ಕೇಂದ್ರಸ್ಥಾನವಾಗಿದ್ದು ಸುತ್ತಮುತ್ತಲೀನ 25 ಗ್ರಾಮಗಳ ಜನರು ತುರ್ತು ಆರೋಗ್ಯ ಸಮಸ್ಯೆಯಾದಾಗ ಹಾಗೂ ಸಣ್ಣ ಪುಟ್ಟ ಕಾಯಿಲೆಗಳಿಗೂ ನಗರ ಪ್ರದೇಶಕ್ಕೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದು ಇಲ್ಲದಂತೆ ಆಗಿರುವುದು ನೋವಿನ ಸಂಗತಿಯಾಗಿದೆ. ಸಮುದಾಯ ಆರೋಗ್ಯ ಕೇಂದ್ರ ಮಾಡಲು ಎಲ್ಲಾ ರೀತಿಯ ಅರ್ಹತೆ ಹೊಂದಿದೆ. ಜಿಲ್ಲಾಡಳಿತ ಹಾಗೂ ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿ ಸಮುದಾಯ ಆರೋಗ್ಯ ಕೇಂದ್ರ ಮಾಡಬೇಕು ಎಂದು ಮಂಜಯ್ಯಸ್ವಾಮಿ ಅರವಟಿಗಿಮಠ ಒತ್ತಾಯ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪತಹಸೀಲ್ದಾರ್‌ ಎಸ್.ಎಸ್. ಬಿಚ್ಚಾಲಿ ಡಂಬಳ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೇಗೇರಿಸಬೇಕೆಂಬ ಸಾರ್ವಜನಿಕರ ಮನವಿಯನ್ನು ಮುಂದಿನ ಅಗತ್ಯ ಕ್ರಮಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕಳಿಸುತ್ತೇನೆ ಎಂದರು.

ಈ ಸಮಯದಲ್ಲಿ ಪ್ರಕಾಶ ನಲವಾಲ, ಬಾಕ್ಷಿಸಾಬ ತಾಂಬೋಟಿ, ಸೋಮಣ್ಣ ಕಲಾಲ, ಮಲ್ಲಪ್ಪ ಮಠದ, ಕೆ.ಜಿ. ಸಂಕನಗೌಡರ, ನಾಗಲಿಂಗಯ್ಯ ಮುತ್ತಾಳಮಠ, ಸತೀಶ ಕುಂಕುಮಗಾರ, ತಿಮ್ಮಣ್ಣ ವಡ್ಡರ, ದೊಡ್ಡಬಾಕ್ಷಿ ತಾಂಭೋಟಿ, ಮಳ್ಳಪ್ಪ ಜೋಂಡಿ, ಪರಶುರಾಮ ಮುರಡಿ, ರಾಘವೇಂದ್ರ ಜಂಗಳಿ, ಜಗದೀಶ ಜಂಗಳಿ, ಬಸಪ್ಪ ಜಂಗಳಿ, ಶಂಕರಗೌಡ ಹೊಸಮನಿ, ಲಕ್ಷ್ಮಣ ಮರಡಿ, ನಾಗಪ್ಪ ಕೋರಿ, ಈರಪ್ಪ ಹೊಸಳ್ಳಿ, ಈರಣ್ಣ ಬರಿಗಲ್ಲ, ಸಂತೋಷ ಮರಡಿ, ಈಶ್ವರ ಮುತ್ತಾಳಮಠ, ಶರಣಯ್ಯ ಮುತ್ತಾಳಮಠ ಸೇರಿದಂತೆ ಡಂಬಳ ಹಾಗೂ ಡೋಣಿ ಗ್ರಾಮದ ಸಾರ್ವಜನಿಕರು ರೈತರು ಭಾಗವಹಿಸಿದ್ದರು.

PREV

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಒತ್ತಡ ಹೇರಿ ಶಾಸಕರಿಂದ ರಸ್ತೆ ಅಗಲೀಕರಣ