ಚಾಲಕರ ವಿರುದ್ಧ ಹೊರಡಿಸಿರುವ ಆದೇಶ ಹಿಂಪಡೆಯಲು ಆಗ್ರಹ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ವಾಹನಗಳು ಅಪಘಾತ ಆದ ಸಂದರ್ಭದಲ್ಲಿ ಚಾಲಕರಿಗೆ ೧೦ ವರ್ಷ ಜೈಲು ಶಿಕ್ಷೆ ಹಾಗೂ ೧೦ ಲಕ್ಷ ದಂಡ ಕಟ್ಟೋದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ತಾಲೂಕು ಕರ್ನಾಟಕ ವಿವಿಧ ವಾಹನ ಮಾಲೀಕರ ಹಾಗೂ ಚಾಲಕರ ಒಕ್ಕೂಟದಿಂದ ಆಗ್ರಹ.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ವಾಹನಗಳು ಅಪಘಾತ ಆದ ಸಂದರ್ಭದಲ್ಲಿ ಚಾಲಕರಿಗೆ ೧೦ ವರ್ಷ ಜೈಲು ಶಿಕ್ಷೆ ಹಾಗೂ ೧೦ ಲಕ್ಷ ದಂಡ ಕಟ್ಟೋದರ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ತಾಲೂಕು ಕರ್ನಾಟಕ ವಿವಿಧ ವಾಹನ ಮಾಲೀಕರ ಹಾಗೂ ಚಾಲಕರ ಒಕ್ಕೂಟದ ಮುಖಂಡ ಮಹೇಶ ಕಾಶಿ ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿದ ನಂತರ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ತಿಂಗಳಿಗೆ ೧೦ರಿಂದ ೧೫ ಸಾವಿರಕ್ಕೆ ಚಾಲಕರಾಗಿ ಕೆಲಸ ಮಾಡುವ ಚಾಲಕರು ೧೦ ಲಕ್ಷ ಹಣ ಇದ್ದರೆ ಚಾಲಕರಾಗಿ ಏಕೆ ಕೆಲಸ ಮಾಡುತ್ತಿದ್ದರು. ಅದಲ್ಲದೇ ೧೦ ವರ್ಷ ಜೈಲು ಶಿಕ್ಷೆ ಎನ್ನುವಿರಿ ಆ ಸಮಯದಲ್ಲಿ ಅವರ ಕುಟುಂಬದ ಪರಿಸ್ಥಿತಿ ಏನಾಗುವದು ಎಂದು ಸ್ವಲ್ಪ ತಿಳಿಯಬೇಕು ಎಂದು ಪ್ರಶ್ನಿಸಿದ ಅವರು, ಈ ಆದೇಶ ಬಡ ವಾಹನ ಚಾಲಕರಿಗೆ ಹಾಗೂ ಅವರ ಕುಟುಂಬಕ್ಕೆ ಮರಣ ಶಾಸನವಾಗಿದೆ. ಈ ಕಾನೂನು ಸಮಂಜಸವಾಗಿಲ್ಲದಿರುವುದರಿಂದ ಈಗ ಹೊರಡಿಸಿರುವ ಆದೇಶವನ್ನು ಹಿಂಪಡೆದು ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಒಂದು ವೇಳೆ ೧೫ ದಿನಗಳ ಒಳಗಾಗಿ ಈ ಆದೇಶ ಹಿಂಪಡೆದು ಇದಕ್ಕೆ ಸಂಬಂಧಪಟ್ಟ ಕಾನೂನನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೊರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದಉ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಮಾಲೀಕರ, ಚಾಲಕರ ಸಂಘದ ಅಧ್ಯಕ್ಷ ಮಲ್ಲೆಶ ಮಾಕ, ಜಗನಾಥ ಕಾಶಿ, ರವಿಚಂದ್ರ ದೊಡ್ಡಮನಿ, ಸುರೇಶ ಸುನಾರ, ಶಂಕರ್ ಸಜ್ಜನ, ಸುರೇಶ ಗುತ್ತೆದಾರ, ನಚಿದಾ ನಾಯಕ, ಇಮ್ರಾನ್ ಖುರೇಶಿ, ಮಹೇಶ ರಾವೂರ, ಅರವಿಂದ ಭೀಮನಳ್ಳಿ, ಈರಣ್ಣ ಡೋಣಗಾಂವ, ಈಶ್ವರ ನಾಲವಾರ, ಮಾರುತಿ ಕಾಶಿ, ಆನಂದ ದೇಶಪಾಂಡೆ, ದಶರಥ ಇಟಗಾ, ರಾಮಚಂದ್ರ ಪಂಚಾಳ, ಬಾಬು ಕಾಶಿ, ರವಿ ಕೊಟ್ರಕಿ, ಸುಭಾಷ ಗುತ್ತೆದಾರ ಇತರರು ಇದ್ದರು.

Share this article