ಬೆಳೆ ವಿಮೆ ಬಾಕಿ ಹಣ ಚುಕ್ತಾಕ್ಕೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಬೀಗ

KannadaprabhaNewsNetwork |  
Published : Nov 09, 2024, 01:07 AM IST
ಫೋಟೊ ಶೀರ್ಷಿಕೆ: 8ಆರ್‌ಎನ್‌ಆರ್1ರಾಣಿಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯತಿಗೆ ಬೆಳೆ ವಿಮೆ ಪರಿಹಾರದ ಬಾಕಿ ಹಣ ವಿಚಾರವಾಗಿ ರೈತರು ಬೀಗ ಜಡಿದು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣ ಪಾವತಿಗೆ ಇಲ್ಲಸಲ್ಲದ ನೆಪ ಹೇಳುತ್ತಿರುವ ರಿಲಾಯನ್ಸ್ ಇನ್ಸೂರನ್ಸ್ ಕಂಪನಿ ಕ್ರಮ ಖಂಡಿಸಿ ರೈತರು ಶುಕ್ರವಾರ ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ಕಳೆದ ಸಾಲಿನ ಬೆಳೆ ವಿಮೆ ಪರಿಹಾರದ ಬಾಕಿ ಹಣ ಪಾವತಿಗೆ ಇಲ್ಲಸಲ್ಲದ ನೆಪ ಹೇಳುತ್ತಿರುವ ರಿಲಾಯನ್ಸ್ ಇನ್ಸೂರನ್ಸ್ ಕಂಪನಿ ಕ್ರಮ ಖಂಡಿಸಿ ರೈತರು ಶುಕ್ರವಾರ ತಾಲೂಕಿನ ಅಂತರವಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಬೆಳೆ ವಿಮೆ ಪರಿಹಾರದ ಬಾಕಿ ವಿಚಾರವಾಗಿ ಕಳೆದ ತಿಂಗಳಿನಿಂದ ಹಂತ ಹಂತವಾಗಿ ತಾಲೂಕಿನ ಗ್ರಾಪಂ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುತ್ತಿದೆ. ಆದರೆ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕಾಗಿದ್ದ ಜಿಲ್ಲಾಡಳಿತ ಶಿಗ್ಗಾಂವಿ-ಸವಣೂರ ವಿಧಾನಸಭೆಯ ಉಪ ಚುನಾವಣೆಯಲ್ಲಿಯೇ ಮಗ್ನವಾಗಿರುವುದು ಖೇದಕರ ಸಂಗತಿಯಾಗಿದೆ. ಇದೇ ರೀತಿ ರೈತರನ್ನು ಕಡೆಗಣಿಸುತ್ತಾ ಹೋದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಪರಿಣಾಮವನ್ನು ಜಿಲ್ಲಾಡಳಿತ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಾಗಪ್ಪ ಕರಡಿ, ಚಂದ್ರಪ್ಪ ಕೂಸಗೂರ, ನಾಗನಗೌಡ ಜೀವನಗೌಡ್ರ, ಶಂಕ್ರಗೌಡ ಗೊಂಬಿಗೌಡ್ರ, ಕುಬೇರಪ್ಪ ಹೂಲಿಹಳ್ಳಿ, ವೀರನಗೌಡ ಮತ್ತೂರು, ಉಜ್ಜನಗೌಡ ಮುದಿಗೌಡ್ರ, ನಾಗರಾಜ ಕುರುಬರ, ಬಸವರಾಜ ನಿಟ್ಟೂರು, ಮಲ್ಲೇಶ ಕುರುಬರ, ಚಂದ್ರಪ್ಪ ಏಡಗೋಡಿ, ಇಬ್ರಾಹಿಂಸಾಬ ಕಿಲ್ಲೇದಾರ, ಮೌನೇಶ ಕರೂರು, ಕೃಷ್ಣಪ್ಪ ದೇಶಿ, ಪಾಂಡಪ್ಪ ಸುಂಕಾಪುರ, ಪಿ.ಎನ್. ಓದೇಗೌಡ್ರ, ಚಂದ್ರಪ್ಪ ಎಡಗೋಡಿ, ರಾಜು ಜೀವನಗೌಡ್ರ, ಬಸವರಾಜ ಮುಗದೂರ, ಮಹೇಶ್ವರಪ್ಪ ಮುಗನೂರ, ಯಂಕಪ್ಪ ಹೊಸಳ್ಳಿ, ಯಂಕಪ್ಪ ತಳವಾರ, ವೆಂಕಪ್ಪ ನಾಗರಡ್ಡಿ, ಹನುಮಂತಗೌಡ ಓಲೇಕಾರ, ಮಲಕಪ್ಪ ಲಿಂಗದಹಳ್ಳಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ